18
ವನ್ನು ಹೋಗಲಾಡಿಸಿಕೊಳ್ಳುವುದುಂಟೆ? ಎಲ್ಲಿಯ ಮಾತು? ಹೀಗೆ ಹೇಳುತ್ತಿರುವಾಗಲೂ ಸುವರ್ಣಶೇಖರನು ಹಸಿವು ಬಾಯಾರಿಕೆಗಳಿಂದ ಬಳಲುತ್ತಿದ್ದನು. ನಿಮಿಷ ನಿಮಿಷಕ್ಕೆ ಹಸಿವು ಹೆಚ್ಚುತ್ತಾ ಹೋಯಿತು. ಅರಸನು ಸಂಕಟಪಡುತ್ತಾ ಅರಚಲಾರಂಭಿಸಿದನು. ಮಗಳಾದ ಸುವರ್ಣಸುಂದರಿಗೆ ಏನೂ ತೋರದೆ ತಂದೆ ಸಂಕಟಪಡುವುದನ್ನೇ ನೋಡುತ್ತಿದ್ದಳು. ಏನು ಮಾಡಿಯಾಳು? ಇನ್ನೂ ಬಾಲಿಕೆ ಹೀಗಾಗುವುದಕ್ಕೆ ಕಾರಣಗಳೇ ಅವಳಿಗೆ ತಿಳಿಯಲಿಲ್ಲ.
ಕಡೆಗೆ ಆತನನ್ನು ಸಮಾಧಾನಗೊಳಿಸಬೇಕೆಂದು ಸುವರ್ಣಸುಂದರಿ ತಂದೆಯನ್ನು ಪ್ರೀತಿಯಿಂದ ತಬ್ಬಿಕೊಂಡಳು. ಕೂಡಲೇ ಸುವರ್ಣಶೇಖರನೂ ಬಗ್ಗಿ ಮಗಳಿಗೆ ಮುತ್ತಿಟ್ಟು ಪ್ರೇಮದಿಂದ, ಮಗು, ಸುವರ್ಣ ಸುಂದರಿ?" ಎಂದು ಕರೆದನು. ಆದರೆ ಅವಳಿಂದ ಉತ್ತರವೇ ಬರಲಿಲ್ಲ ಕಾರಣವೇನು? ಅಯ್ಯೋ, ವಿಧಿಯೇ! ಸುವರ್ಣಸ್ಪರ್ಶದ ಮಹಿಮೆ ಎಂತಹದು! ಯಾವುದನ್ನೂ ಬಿಡುವುದಿಲ್ಲವಲ್ಲಾ! ಸುವರ್ಣಶೇಖರನ ಮೈಕೈಗಳು ಮಗಳಿಗೆ ಸೋಕಿದ ಕೂಡಲೆ ಅವಳ ಮಾರ್ಪಟ್ಟಳಲ್ಲಾ! ಸುವರ್ಣಸುಂದರಿ ಸುವರ್ಣಸುಂದರಿಯೇ ಆದಳು! ಅವಳ ಹೆಸರು ಅವಳಿಗೆ ಅನ್ವರ್ಥನಾಮವಾಯಿತು. ಅವಳ ಗುಲಾಬಿಬಣ್ಣದ ಮುಖವೂ, ಕೆನ್ನೆಗಳೂ ಥಳಥಧಳಿಸುವ ಸುವರ್ಣವಾಗಿ ಬದಲಾಯಿಸಿ ಕಣ್ಣಿನಲ್ಲಿ ಸುರಿಯುತ್ತಿದ್ದ ನೀರು ಸಹಾ ಹಳದಿಬಣ್ಣದ ಹನಿಗಳಾದವು. ತಲೆಯಲ್ಲಿದ್ದ ಕೂದಲೂ “ಸಹ ಚಿನ್ನದ ಎಳೆಗಳಾದವು. ಮೃದುವಾದ ಆ ಮದುಮಗಳ ಶರೀರವು ಕಲ್ಲಿನಂತೆ ಗಟ್ಟಿಯಾಗಿ ಅವಳು ಸುವರ್ಣ ಪ್ರತಿಮಯಾದಳು. ಸುವರ್ಣಶೇಖರನ ದುರದೃಷ್ಟಕ್ಕೆ ಅವನಿಗಿದ್ದ ಒಬ್ಬ ಮಗಳೂ ಸುವರ್ಣಸ್ಪರ್ಶದ ಬಾಯಿಗೆ ತುತ್ತಾದಳು. ದುರದೃಷ್ಟವು ಹೀಗೂ ಬಾಧಿಸುವುದುಂಟೇ? ಇದನ್ನು ನೋಡಿದರೆ ಯಾರಿಗೆ ತಾನೇ ದುಃಖವುಂಟಾ