ಈ ಪುಟವನ್ನು ಪ್ರಕಟಿಸಲಾಗಿದೆ

19

ಗುವುದಿಲ್ಲ? ಸುವರ್ಣಶೇಖರನ ಪುತ್ರಿಯ ಆಕೃತಿಯು ಸ್ಪಷ್ಟವಾಗಿದೆ. ಆದರೆ ಪ್ರಯೋಜನವೇನು? ಕೆನ್ನೆಯಮೇಲಿನ ಹಳ್ಳವೂ ಕೂಡ ಹಾಗೆಯೇ ಕಾಣುತ್ತಿದೆ. ಮಾತು ಕಥೆಗಳು ಮಾತ್ರವಿಲ್ಲ. ಮುದ್ದು ಮಗಳನ್ನು ನೋಡಿದಷ್ಟೂ ಸುವರ್ಣಶೇಖರನ ದುಃಖವು ಅಪಾರವಾಗುತ್ತ ಹೋಯಿತು. ಸುವರ್ಣಶೇಖರನು ಅವಳನ್ನು ನೋಡಿದಾಗಲೆಲ್ಲಾ, ನನ್ನ ಮಗಳು ಅವಳ ತೂಕದ ಚಿನ್ನದ ಬೆಲೆಗೆ ಸಮಾನ?” ಎಂದು ಹೇಳುತ್ತಿದ್ದನು. ಈಗ ಹಾಗೆಯೇ ಆಗಿಹೋಯಿತೇ?" "ಕೆಟ್ಟ ಮೇಲೆ ಬುದ್ದಿ ಬಂದಿತು. ಅಟ್ಟ ಮೇಲೆ ಒಲೆ ಉರಿಯಿತು" ಎಂಬ ಗಾದೆಗೆ ಸರಿಯಾಗಿ ಸವರ್ಣಶೇಖರನಿಗೆ ಈಗ ಜ್ಞಾನೋದಯವಾಯಿತು. ಈಗ ಅವನಿಗೆ ತನ್ನ ಐಶ್ವರ್ಯವೆಲ್ಲಕ್ಕಿಂತಲೂ ಮಗಳೇ ಹೆಚ್ಚೆಂದು ಚೆನ್ನಾಗಿ ತೋರಿತು.

ಮಕ್ಕಳಿರಾ, ಸುವರ್ಣಶೇಖರನ ಸ್ಥಿತಿಯನ್ನು ನೋಡಿದಿರಾ! ಎಷ್ಟು ಶೋಚನೀಯವಾಗಿದೆ. ಅವನಿಗಿದ್ದ ಒಬ್ಬ ಮಗಳು ಚಿನ್ನದ ಬೊಂಬೆಯಾಗಿ ಹೋದಳು. ಅವಳನ್ನು ನೋಡಿ ಸುವರ್ಣ ಶೇಖರನು ಕೈಕೈ ಮುರಿದುಕೊಳ್ಳುತ್ತಾನೆ. ಮಗಳನ್ನು ನೋಡ ಲಾರ, ನೋಡದಿರಲಾರ. ನೋಡಿದಾಗಲೆಲ್ಲಾ ದುಃಖವು ನಮ್ಮಡಿಯಾಗುತ್ತಿದೆ. ಈ ದುರವಸ್ಥೆಯಲ್ಲಿರುವುದಕ್ಕಿಂತಲೂ ದರಿದ್ರಾವಸ್ಥೆಯಲ್ಲಿರುವುದೇ ಲೇಸೆಂದು ಸುವರ್ಣಶೇಖರನು ಭಾವಿಸಿದನು. ತನ್ನ ಐಶ್ವರ್ಯವಲ್ಲಾ ಹೋದರೂ ಹೋಗಲಿ. ತಾನು ಪೃಥ್ವಿಯಲ್ಲೆಲ್ಲಾ ಕೇವಲ ದರಿದ್ರನಾಗಿ ಬಾಳಿದರೂ ಚಿಂತೆಯಿಲ್ಲ. ತನ್ನ ಮುದ್ದು ಮಗಳು ಪುನಃ ಜೀವಿತಳಾದರೆ ಸಾಕೆಂದು ಅಂದುಕೊಂಡನು.

ಆರನೆಯ ಪ್ರಕರಣ.

ಹೀಗೆ ಅರಸು ನಿರಾಶನಾಗಿ ದಿಕ್ಕುತೋರದೆ ಗೋಳಿಡುತ್ತಿರುವಾಗ ಇದ್ದಕ್ಕಿದ್ದ ಹಾಗೆಯೇ ಬಾಗಿಲ ಬಳಿ ಅಪರಿಚಯಸ್ಥನೊ