ಈ ಪುಟವನ್ನು ಪ್ರಕಟಿಸಲಾಗಿದೆ
ಸತೀಹಿತೈ‍‍ಷಿಣಿ

ಕಾರ್ಯಗಳಲ್ಲಿ ನಿರತರಾಗಿದ್ದರು, ಆದುದರಿಂದ ಸುಲಿಯೊಬ್ಬಳೇ ತುನಯ ವಿಶಾಲವಾದ ಅಂಗಳದ ಮಧ್ಯದಲ್ಲಿ ಕುಳಿತು, ಮನಸ್ಸಮಾ ಧಾನಕ್ಕಾಗಿ ಆವುದೋ ಪುಸ್ತಕವನ್ನು ಓದುತ್ತಿದ್ದಳು, ಬೀದಿಯ ಬಾಗಿಲು ತೆರೆದಿದ್ದಿತು.

ಸುಶೀಲೆಯು ಕುಳಿತಿದ್ದಡೆಗೆ, ನಡುಹರೆಯದ ಹೆಂಗಸೊಬ್ಬಳು ಬಂದು ನಗುತ್ತ ನಿಂತಳು, ಪುಸ್ತಕವಲೋಕನದಲ್ಲಿದ್ದ ಸುಶೀಲೆ, ತಲೆಯ, ತನ್ನ ಮುಂದೆ ನಿಂತಿದ್ದವಳನ್ನು ನೋಡಿ, ವಿಸ್ಮಯದಿಂದ; ಗಿರಿಯಮ್ಮನವರೇ! ಅದೇಕೆ ಹೀಗೆ ನಗುವಿರಿ? ಕುಳಿತುಕೊಳ್ಳಿರಿ ಎಂದಳು

ಗಿರಿಯಮ್ಮ- (ಕುಳಿತುಕೊಂಡು,)-'ಇದೇನೆ? ಸುಮ್ಮನೆ ಕುಳಿತೆ'?

ಸುಶೀಲೆ-ಓದುತ್ತಿರುವೆನು; ಸಮ್ಮನೆ ಕುಳಿತಿಲ್ಲ.

ಗಿರಿ-ಓದುವುದು ಇಂತಹ ಹೊತ್ತಿನಲ್ಲಿ!

ಸುಶೀಲೆ-ಮತ್ತೇನು? ಸದ್ಯದಲ್ಲಿ ಮಾಡಬೇಕಾದ ಕೆಲಸವೇನೂ ಇಲ್ಲ.
ವಿರಾಮವು ದೊರೆತಾಗ ಓದಿದರೆ ನಷ್ಟವಿಲ್ಲವಷ್ಟೆ?

ಗಿರಿ-ಒಳ್ಳೆಯ ಓದು ಒಳ್ಳೆಯ ಓದು!! ವಿರಾಮ ದೊರೆತು,
ಹೊತ್ತು ಹೋಗದಿದ್ದರೆ ಹಾಳು ಪುಸ್ತಕವನ್ನು ಓದಬೇಕೆ?
ನಮ್ಮ ಮನೆಗೆ ಬರಬಾರದಾಗಿತ್ತೇ? ಇಲ್ಲವ, ನನ್ನನ್ನು ಕರೆ
ದಿದ್ದರೆ ನಾನೇ ಬರುತ್ತಿದ್ದೆ? ಈಗಲೂ ಏನಾಯ್ತು? ನೀನು
ಕರೆಯದೆಯೇ ನಾನೇ ಬಂದಿರುವೆನು.

ಸುಶೀಲೆ-ಅಮ್ಮಾ! ನೀವು ದೊಡ್ಡವರು; ಹೇಗೆ ಬೇಕಾದರೂ ಹೇಳ
ಬಲ್ಲಿರಿ! ಮನೆಯನ್ನು ಬಿಟ್ಟು ಹೆರವರ ಮನೆಗೆ ಹೋಗಿ ಸುಮ್ಮನೆ
ಕೆಲಸಕ್ಕೆ ಬರದ ಹರಟೆಯನ್ನು ಹರಟಲು ನನಗೆ ಇಷ್ಟ
ವಿಲ್ಲ. ನಿಮ್ಮನ್ನು ಕರೆಯಬಹುದಾಗಿತ್ತೆಂದು ಹೇಳುವಿರಿ;