ಅದರೆ, ನಮ್ಮ ನಮ್ಮ ಕಾವ್ಯಗೌರವಗಳಿಗೆ ತಕ್ಕಂತೆ
ನಾವು ಪ್ರವತಿಸಬೇಕಲ್ಲವೆ? ನಿಮ್ಮನ್ನು ಕರೆದು, ನಿಮ್ಮ ಕೆಲಸವನ್ನು
ಕಂಸುವುದು ನನಗೆ ತಕ್ಕುದಾಗಿ ಕಾಣಲಿಲ್ಲ.
ಗಿರಿ--ನನ್ನನ್ನು ಕರೆಯದಿದ್ದರೇನಾಯ್ತು ? ನೀನೇ ನಮ್ಮ ಮನೆಗೆ
ಬಂದು, ನಿನಗೆ ಹರಟಿ ಬೇಡವಾಗಿದ್ದರೆ, ಒಳ್ಳೆಯ ಮಾತುಗಳ
ನ್ನೇ ಆಡಬಹುದಾಗಿತ್ತು.
ಸುಶೀಲಿ-ಅಮ್ಮಾ! ನೀವು ಈ ರೀತಿ ಮಾತನಾಡಬಾರದು. ನಾನು
ಕೂಗಿದ್ದರೆ ನೀವು ನಿಮ್ಮ ಕೆಲಸಗಳನ್ನೆಲ್ಲಾ ಬಿಟ್ಟು ಬರಬೇಕಾಗಿ
ತ್ತಲ್ಲವೆ?
ಗಿರಿ-ಕೆಲಸದಮನೆ ಹಾಳಾಯ್ತು! ಅದು ಇಲ್ಲೇ ಇದೆ!! ನಾನು
ಸಿರಿದುಬಿದ್ದಾಗಲ್ಲವೇ ಅದೂ ಮುಗಿಯಬೇಕು?
ಸುಶೀಲೆ-ಹಾಗೆ ಹೇಳಲಾದೀತೆ? ಕ್ಲಿಪ್ತ ಕಾರ್ಯಗಳನ್ನು ಕ್ಲಿಪ್ತಕಾಲ
ದಲ್ಲಿ ಮಾಡದೆ ಬಿಡಲಾಗದಲ್ಲವೆ?
ಗಿರಿ-ಯಾವಾಗಲಾದರೂ ಮಾಡಿದರಾಯ್ತು, ಇಲ್ಲವೆ ಬಿದ್ದಿರೆಂದು
ಬಿಟ್ಟರೂ ಆಯ್ತು, ಒಂದರಡು ಗಳಿರಯಕರ ವಿರಾಮನೇ
ಬೇರವೆ? ಏನೋಡದಿಂದ ಹೊತ್ತು ಕಳೆಯದಿರಲು ನನ್ನಿಂದಾಗ
ದಮ್ಮ! ಹಾಳು ಕೆಲಸಕ್ಕೆ ಬೆಂಕಿ ಬೀಳಲಿ!
ಸುಶೀಲೆ-ಅಮ್ಮ! ನೀವು ಹೇಳುವುದು ಸರಿಯಾಗಿರುವಂತೆ ನನಗೆ
ಕಾಣುವುದಿಲ್ಲ, ಕಾಲವೆಂಬುದು ಅಮೂಲ್ಯವಾದುದು,
ಅದನ್ನು ಕಳೆದುಕೊಳ್ಳುವುದು ನಷಕ್ಕೆ ಆಕರವು ಕ್ಲಿಪ್ತ
ಕಾಲದಲ್ಲಿ, ಕ್ಷಿಪ್ತ ಕಾರ್ಯವನ್ನು ನೆರವೇರಿಸಿಬಿಟ್ಟರೆ, ವಿರಾ
ಮವು ದೂರ ದೊರೆವುದು. ಸಕಾಲದಲ್ಲಿ ಕಾರ್ಯವನ್ನು
ನೆರವೇರಿಸುವುದರಿಂದ ಮನಶ್ಯಾಂತಿ, ಸಮಾಧಾನ, ಆನಂದ
ಪುಟ:ಸುಶೀಲೆ.djvu/೧೫
ಈ ಪುಟವನ್ನು ಪ್ರಕಟಿಸಲಾಗಿದೆ
ಸುಶೀಲೆ
೩