ಈ ಪುಟವನ್ನು ಪ್ರಕಟಿಸಲಾಗಿದೆ
ಸುಶೀಲೆ
೧೧

ದರೂ ನನ್ನಿಂದ ಧರಿಸಲ್ಪಡುವಂತೆ ಅನುಗ್ರಹಿಸು! ಪರಮಪುರುಷ! ಆವ ನಿನ್ನ ದಿವ್ಯನಾಮಗುಣ ಕಥನಮಾತ್ರದಿಂದ ವಾಲ್ಮೀಕಿ, ಮಹರ್ಷಿಯೂ ಕವಿ ಸಾರ್ವಭೌಮನೂ ಆಗಿ ಆಚಂದ್ರಾರ್ಕವಾಗಿ ಕೀರ್ತ್ಯಂಗನೆಯಿಂದ ಸೇವೆ ಮಾಡಿಸಿಕೊಳ್ಳುತ್ತಿರುವನೋ, ಆ ನಿನ್ನ ದಿವ್ಯನಾಮಾವಳಿಯನ್ನು ಜಪಿಸುವಂತೆ ನನಗೆ ಕಟಾಕ್ಷಿಸು! ದಯಾಮಯ | ಈ ಸ್ತ್ರೀ ಜನ್ಮಧಾ ರಣೆಗೆ ಆವುದು ಮುಖ್ಯವಾದ ಆಶ್ರಯವಸ್ತುವೊ, ಆವುದು ಇಹಪರ ಸೌಖ್ಯಕ್ಕೂ ಸಾಧನಶ್ವಕೂಪವೋ,-ಆವ ಮೂರ್ತಿಯನ್ನುಳಿದು, ವ್ರತ ನಿಯಮಾದಿಗಳೂ, ಅಪ್ರಯೋಜಕಗಳೋ ಆ ನನ್ನ ಸ್ವಾಮಿಯನ್ನು ಸನ್ಮಾರ್ಗಗಾಮಿಯನ್ನಾಗಿ ಮಾಡು! ವಿವೇಕವನ್ನುಂಟುಮಾಡು || ದೇವ | ಕೃಪಾರ್ಣವ !! ಆ ನನ್ನ ಸ್ವಾಮಿಗೆ ಇಹದಲ್ಲಿ, ಅಪ್ರಿಯವೂ ಅಹಿತವೂ ಆದ ಕರ್ಮವಾವುದೇ ಆದರೂ, ನನ್ನಿಂದ ಚಿಂತಿಸಲ್ಪಡದಿರಲಿ | ಆ ನನ್ನ ಸ್ವಾಮಿಯಲ್ಲಿ ನನಗೆ ಭಕ್ತಿ, ಪ್ರೀತಿಗಳು ಮತ್ತು- ಮತ್ತೂ ಹೆಚ್ಚುತಿರಲಿ! ಆ ನನ್ನ ಪ್ರಭುವಿನ ವಿಚಾರವಾಗಿ ಅಸಲಪಿಸುವ ಕುಹು ಕರ ಕುತ್ಸತವಾರ್ತೆಗೆ ನನ್ನ ಕಿವಿಯೂ ಮನಸ್ಪೂ ವಿಮುಖವಾಗಿದ್ದು, ನಿಜಕರ್ತವ್ಯಪಾಲನೆಯಲ್ಲಿ ಮನವು ನೆಲೆಗೊಂಡಿರಲಿ| ಹೇ, ಮೀನ ಬಂಧೋ! ಮತ್ತೂಂದು ವರವನ್ನು ಅನುಗ್ರಹಿಸು! ಸತೀಶ್ವರಕ್ಷಣೆಗೆ ಅತ್ಯವಶ್ಯವಾದ- ಕುಮಂತ್ರ ಕುಠಾರಸ್ವರೂಪಗಳಾದ ಧೈರ್ಯ-ಸ್ಥೈರ್ಯ-ಸಾಹಸ-ಕ್ಷಮ-ದಮಾದಿ ಗುಣಗಳು ನನ್ನಲ್ಲಿ ಬೇರೂರುವಂತೆ ಕೃಪೆ ಮಾಡು, ಅಷ್ಟು ಮಾತ್ರ ಮಾಡು! ಇಂದಿನ.... ................ .... ...

ಸುಶೀಲೆಯ ಸಂಪ್ರಾರ್ಥನೆ, ಇನ್ನೂ ಮುಗಿದಿರಲಿಲ್ಲ. ಅಷ್ಟರಲ್ಲಿ ಅಂಗಳಕ್ಕೆ ಆಗಂತುಕನಾವನೋ ಬಂದು, ಹೊರಗೆ ಕಾವಲಿದ್ದ ಮಯೂರಿಯನ್ನು ಕುರಿತು ಪ್ರಶ್ನಿಸಿದನು--