ಈ ಪುಟವನ್ನು ಪ್ರಕಟಿಸಲಾಗಿದೆ
೨೨
ಸತೀಹಿತೈಷಿಣಿ

ಸುಶೀಲೆ - ಮನೆ ಕೆಲಸಗಳೆಲ್ಲವನ್ನೂ ಮುಗಿಸಿ, ತಮ್ಮ ಬರುವಿಕವಿಯನ್ನಿದಿರು ನೋಡುತ್ತೆ, ಓದುತ್ತಿದ್ದೆನು. ನೆರೆಮನೆಯ ಗಿರಿಯಮ್ಮನು ಬಂದಿದ್ದಳು ಅವಳು ಹೊರಟು ಹೋದಬಳಿಕ ತಂತ್ರನಾಥನೂ ಬಂದಿದ್ದನು. ನನ್ನ ಗ್ರಹಚಾರವಶದಿಂದ ಅವರಿಬ್ಬರೂ ಏನೇನನ್ನೋ ಕೆಲವು ಅಪ್ರಿಯಮಾತುಗಳನ್ನಾಡಿ ನನ್ನಿಂದ ಅವಮಾನಿತರಾಗಿ ಹೊರಟುಹೋದರು.

ವಿನೋ - ಅದೆಂತಹ ಅಪ್ರಿಯವಾದ ಮಾತುಗಳು?

ಸುಶೀಲೆ - ಆ ಮಾತುಗಳು ನೆನೆಯಿಸಿಕೊಳ್ಳುವುದಕ್ಕೂ ಯೋಗ್ಯವಲ್ಲ!

ವಿನೋ - ನನ್ನಲ್ಲಿಯೂ ಮರೆಮಾಚುವುದನ್ನು ಬಿಡುವುದಿಲ್ಲವೆ?

ಸುಶೀಲೆ - ಮರೆಮಾಚುವುದಲ್ಲ. ಅವರ ಮಾತುಗಳು ತಮ್ಮ ಅನಿಷ್ಟವನ್ನೇ ಕೋರತಕ್ಕವುಗಳಾಗಿವೆ. ಅದನ್ನು ಹೇಗೂ ನಾನು ಹೇಳಲಾರೆನು. ಇಷ್ಟಕ್ಕೇ ಬೇರೆಯಾಗಿ ಒಗೆಯದೆ ಕ್ಷಮಿಸಬೇಕು! ಅವೆಲ್ಲವೂ ಅಪನಿಂದೆ................

ವಿನೋ - ಏನು? ನನ್ನ ಮೇಲಿನ ಅಪನಿಂದೆಯೆ? ನಿನ್ನ ಬಾವನು ನನ್ನನ್ನು ನಿಜವಾಗಿ ನಿಂದಿಸಿದನೆ? ಚಿಃ! ಇಂದು ನಿನ್ನ ಅಭಿಸಂಧಾನವು ತಿಳಿದುಬಂದಿದೆ. ಏಕೆ ಈ ಸುಳ್ಳು? ಮಾಡು! ನಿನ್ನ ಇಷ್ಟವಿದ್ದಂತೆ ಮಾಡು!! ನಾನು ಕಾರ್ಯಗೌರವದಿಂದ ಮನೆಗೆ ಬರಲು ತಡವಾದರೆ, ಹಸಿದಿರಬೇಡವೆಂದು ನಿನಗೆ ಎಷ್ಟು ಸಾರಿ ಹೇಳಿಲ್ಲ! ಆದರೂ ನೀನು ಊಟಮಾಡದೆ ಸಾಯುತ್ತಿರುವುದೇಕೆ? ಕಂಡವರೊಡನೆ ಮನೆವಾರ್ತೆಯನ್ನು ಕುರಿತು ಮನಬಂದಂತೆ ಹೇಳುವುದೇಕೆ?

ಸುಶೀಲೆ - ಕಂಪಿತಸ್ವರದಿಂದ - 'ಪ್ರಭೋ! ತಾವು ನನ್ನಲ್ಲಿಯೂ ಇಂತಹ ಸಂದೇಹವನ್ನು ಕಲ್ಪಿಸಿಕೊಂಡು ತೊಳಲುವಿರೆಂದು