ಈ ಪುಟವನ್ನು ಪ್ರಕಟಿಸಲಾಗಿದೆ
ಸುಶೀಲೆ
೨೯

ಗಿರಿ - ಗಲ್ಲದಮೇಲೆ ಕೈಯಿಟ್ಟುಕೊಂಡು‚... ಹಾಳಾಗಲಿ ಕೆಟ್ಟಸುದ್ದಿ! ನೋಡು ನನಗೂ ನಿನಗೂ ಯಾವ ನಂಟತನವೂ ಇಲ್ಲದಿದ್ದರೂ ನಾವಿಬ್ಬರೂ ಎಷ್ಟು ಅನ್ನೋನ್ಯವಾಗಿಲ್ಲ | ನೀನೇನು ನನ್ನನ್ನು ಅಕ್ಕನಂತೆಯೇ ಭಾವಿಸುತ್ತಿರುವೆಯಲ್ಲವೆ? ಅವಳಿಗೇನುಬಂದಿದೆ! ಕೇಡುಗಾಲದ ಬುದ್ದಿ? ಪವಿತ್ರವಾದ ಕುಲ, ಅಸಾಧಾರಣವಾದ ರೂಪಲಾವಣ್ಯ, ಪ್ರಾಪ್ತವಾದ ಯೌವನ, ಶ್ರೇಷ್ಟವಾದ ನಾರೀ ಧನು೯, ಇವೆಲ್ಲವನ್ನೂ ಕ್ಷಣಿಕ ಸುಖಕ್ಕಾಶೆಪಟ್ಟು ಹಾಳುಮಾಡಿಕೊಳ್ಳುವಳಲ್ಲಾ! ಎಂಬುದೊಂದೇ ನನಗೆ ಸಂಕಟ | ಹೇಗಾದರೂ ಅವಳು ದಾರಿಗೆ ಬಂದರೆ ಸಾಕಾಗಿದೆ. ಆದರೆ ನಾನು ಮಾಡುವುದೇನು? ಒಂದು ಮಾತನ್ನು ಹೇಳಿದರೆ ಅವಳು ಹತ್ತು ಮಾತುಗ೪ಾಡಿ ಹಳಿರುತೊಡಗುವಳು,

ತಂತ್ರ - ತಾವು ಹೇಳುವುದರಿಂದೆನೂ ಫಲವಿಲ್ಲ.'ವಿನೋದನು ನಿಮ್ಮ ಮನೆಗೆ ಬರುವದುಂಟೋ?

ಗಿರಿ - ಏಕೆ ನಿತ್ಯವೂ ಬರುತ್ತಿರುವನು. ನಮ್ಮ ಮನೆಯವರಲ್ಲಿ- ಅವನಿಗೆ ತುಂಬಾ ನಂಬಿಕೆ.

ತಂತ್ರ - ಹಾಗಾದರೆ, ಅದು ಅವನಿಂದಲೇ ಸರಿಪಡಿಸಲ್ಪಡಬೇಕು. ಅವನು ನಿಮ್ಮ ಮನೆಗೆ ಬಂದಾಗ, ಈ ವಿಷಯವ ಅವನ ಕಿವಿಗೆ ಬೀಳುವಂತೆ ಮಾಡಿಬಿಟ್ಟರೆ, ಅವನೇ ಸರಿಪಡಿಸಿಕೊಳ್ಳುವನು.

ಗಿರಿ - ಸರಿ! ಸರಿ!! ನಿನ್ನ ಆಲೋಚನೆಯೇ ಸರಿಯಾದುದು, ಹಾಗೆಯೇ ಮಾಡುವೆನು. ನನಗೇನು ಭಯ? ಅವನಪ್ಪನಿಗೂ ನಾನು ಹೆದರುವುದಿಲ್ಲ. ಸಮಯವೊದಗಿದರೆ ಇನ್ನು ಮುಂದೆ ಅವನು ನಮ್ಮ ಮನೆಗೆ ಬಾರದಂತೆಯೇ ಮಾಡಿಬಿಡುವೆನು.