ಆದರೂ, ನನ್ನ ತಂದೆ.......... ಹಾಗೆ ಮಾಡಲಿಲ್ಲ. ಈಗಲಾದರೂ ಏನಾಯ್ತು? ನನ್ನನ್ನು .........
ಗಿರಿ - ಸಾಕು! ಸಾಕು!! ಕೇಳಲಾರೆನಪ್ಪ! ನಿನ್ನೆಯಸಾಯಂಕಾಲ, ನನಗೆಷ್ಟೋ ವೇದಾಂತಗಳನ್ನು ಬೋಧಿಸಿದವಳಿಗೆ ಈ ಕೆಟ್ಟಕೆಲಸ ಮಾಡಬಾರದೆಂಬ ತಿಳಿವು ಬೇಡವೆ? ಈಗಿನ ಹುಡುಗಿಯರೇನಪ್ಪ | ಹಾಳು ಶಾಲೆಯಲ್ಲೇ ಇದೆಲ್ಲವನ್ನೂ ಕಲ್ತು ಬರುವರೆಂದೇ ಕಾಣುವುದು. ಆಗಲಿ, ಈದಿನ ಅವಳಮನೆಗೆ ಹೋಗಿ, ಅವಳ ಗಂಡನೂ ಮನೆಯಲ್ಲಿಯೇ ಇರಬಹುದು. ಅವನಿದಿರಾಗಿಯೇ ಅವಳ ಪಿತ್ತವನ್ನು ಇಳಿಸಿಬರುತ್ತೇನೆ!
ತಂತ್ರ - ನೋಡಿದಿರಾ ! ಇದಕ್ಕೆ ....... ....
ಗಿರಿ - ಇಲ್ಲವಪ್ಪ! ನನಗೆ ಮೈಯುರಿದುಹೋಗುತ್ತಿದೆ! ಇರಲಿ, ಮುಂದೆಹೇಳು?
ತಂತ್ರ - ಅವಳು ನಿನ್ನೆಯರಾತ್ರಿಯೇ ನನ್ನೊಡನೆ ಓಡಿಬರಲು ಸಿದ್ಧಳಾಗಿದ್ದಳು. ಕೈಗೆ ಸಿಕ್ಕಿದ ನಗನಾಣ್ಯಗಳನ್ನು ತರುವೆನೆಂದಳು; ನನಗೇ ಭಯವಾಯ್ತು. ಉಪಾಯದಿಂದ ತಪ್ಪಿಸಿಕೊಂಡು ಮತ್ತೆ ಬರುವೆನಂದುಹೇಳಿ ಎಷ್ಟು ಕಷ್ಟದಿ೦ದ ಬ೦ದೆನೋ? ಹೇಳಲಾರೆನು, ಇನ್ನು ಈ ಜನ್ಮವಿರುವವರೆಗೂ ಅವರಮನೆಗೆ ಹೋಗಬಾರದಮ್ಮ! ಅವಳ ಅಕ್ಕ ಆ ನನ್ನ ಹಿರಿಯ ಕೆಂಡತಿ, ಇದ್ದಳಲ್ಲ ಅವಳೆoತಹ ಪತಿವ್ರತೆ! ಇವಳಿಂದ ನೆಂಟರಿಗೆಲ್ಲಾ ಅಪಮಾನ. ಈ ವಿಚಾರ ತುಂಬಾ ಗುಟ್ಟಾಗಿರಲಮ್ಮ! ತಲೆಹೋಗುವಮಾತು | ಎಲ್ಲಿಯಾದರೂ ಬಾಯಿಬಿಟ್ಟೀರಿ | ಜೋಕೆ | ಜೋಕೆ!! ಗುಟ್ಟು ರಟ್ಟಾದರೆ ಕಷ್ಟ ತಪ್ಪದು.