ಈ ಪುಟವನ್ನು ಪ್ರಕಟಿಸಲಾಗಿದೆ
ಸುಶೀಲೆ
೩೫

ವೆಂಕಮ್ಮ - ಮೀನಾಕ್ಷಮ್ಮ! ಏನು ಕೇಡುಗಾಲವೆನ್ನಬೇಕೆಮ್ಮ| ಹಾಳು ಸುಶೀಲೆ ಯಾವಾಗ ನೋಡಿದರೂ, ಪುಸ್ತಕವನ್ನು ಹಿಡಿದೇ ಇರುವಳು, ಹೆಂಗಸು......ಗೆ ಓದೆಂದರೇನು?

ಗಿರಿ - ಓದಿಗೆ ಬೆಂಕಿಬೀಳಲಿ! ಹಾಳು.......ಸುದ್ದಿ!

ಮೀನಾಕ್ಷಮ್ಮ - ಏಕಮ್ಮ! ಅವಳ ಸೌಂದರ್ಯ, ಬುದ್ಧಿ ಜಾಣ್ಮೆ, ಗುಣ, ವಿವೇಚನಾಶಕ್ತಿ, ಪಾತಿವ್ರತ್ಯ - ಇವೆಲ್ಲವೂ ಚೆನ್ನಾಗಿಲ್ಲವೇನಮ್ಮ? ಓದಿದರೆ ಕುಂದೇನು?

ಗಿರಿ - ಎಲ್ಲವೂ ಇವೆ. ಆದರೆ ದುರ್ಗುಣಗಳು ಇಲ್ಲದಿದ್ದರೆ ಚೆಂದ (ಹಜಾರದಲ್ಲಿ ಆಲೋಚನಾಪರನಾಗಿ ಕುಳಿತಿದ್ದ ವಿನೋದನಿಗೆ ಕಿವಿಗಳು ನಾಲ್ಕಾದಂತಾದುವು. ಆತುರದಿಂದ ಕೇಳತೊಡಗಿದನು. ಮತ್ತೆ ಮಾತಿಗೆ ಮೊದಲಾಯ್ತು.)

ಮೀನಾಕ್ಷಮ್ಮ - ಹಾ! ಏನಮ್ಮ? ಅವಳಲ್ಲಿರುವ ದುರ್ಗುಣಗಳು? ನಾನೇನೋ ಅವಳನ್ನು ಒಳ್ಳೆಯವಳೆಂದೇ ತಿಳಿದಿರುವೆನು.

ಗಿರಿಯಮ್ಮ - ಅವಳ ಒಳ್ಳೆಯ ತನವು ಉರಿದು ಹೋಯ್ತು............... ಅವಳನ್ನು ಯಾವ ವಿಲಾಸವತಿಗೆ ಕಡಿಮೆಯೆಂದಿರುವಿರಿ?

ವೆಂಕಮ್ಮ - ಹಾಳು ಓದುಬರೆಹಬಲ್ಲ ಹೆಂಗಸರು | ಅವರು ಮಾಡುವುದೆಲ್ಲ ಕೆಟ್ಟ ಕೆಲಸವೇ !| ಹೊರಗೆ ಮಾತ್ರ ಒಹು ಸಜ್ಜನೆಯರಂತೆ ಕಾಣುತ್ತಿರುವರು. ಮೀನಾಕ್ಷಮ್ಮ! ಆ.......ಗೇನು ಬಂದಿದೆಯಮ್ಮ, ಕೇಡುಗಾಲದ ಬುದ್ಧಿ! ಒಂದು ದಿನವಾದರೂ ಹಣೆಯ ತುಂಬ ಕುಂಕುಮ, ಕೈಕಾಲುಗಳಿಗೆ ಅರಿಸಿನ ಹಚ್ಚಿಕೊಂಡುದನ್ನು ನಾನು ನೋಡಿಲ್ಲವಮ್ಮ! ನಮ್ಮ ಮನೆಯವರಿದ್ದಾಗ,.......

ಮೀನಾಕ್ಷಮ್ಮ- ಅದು ಹೋಗಲಿ, ಅವಳ ವಿಷಯವೇನು? ಹೇಳಬಾರದೆ?