ದುರ್ಬುದ್ಧಿಯುಂಟಾದುದು ನಿನ್ನ ನಾಶಕ್ಕಲ್ಲದೆ ಮತ್ತೆ ಬೇರಿಲ್ಲ; ಅನುಭವಿಸು.”
ಮಯೂರಿ- ಅಮ್ಮಾ ! ಈ ಘಾತಕನಿಗಾಗಿ ಕನಿಕರಪಡಬಾರದು, ಇವನ ದುತ್ಕಾರ್ಯಕ್ಕೆ ಎಂತಹ ಶಿಕ್ಷೆಯಾಗಬೇಕೋ ತಿಳಿಯದು. ಇವನನ್ನು ಈಗಲಾದರೂ ಹಿಡಿದು ಶಿಕ್ಷಿಸದಿದ್ದರೆ ಸಮಾಜಕ್ಕೂ-ನ್ಯಾಯಕ್ಕೂ-ಹಾನಿ ತಪ್ಪದು. ಇವನು ಮತ್ತೆ ತಪ್ಪಿಸಿಕೊಂಡರೆ ಸುಶೀಲೆಗೆ ಮೃತ್ಯುವೆಂದೇ ತಿಳಿಯಬೇಕು. ಹಿಂದಿನ ಮಮತೆ ಈಗ ಸಲ್ಲದು, ಈಗಲೇ ಅವನನ್ನು ಪೋಲೀಸಿನವರ ಕೈವಶಪಡಿಸಿದರೆ ನಾಳಿನ ದಿನದ ವಿಚಾರಣೆಯಲ್ಲಿ ನೈಜಸಂಗತಿಯು ಹೊರಬೀಳುವಂತಾದೀತು. ಇವನ ವಿಚಾರಣೆಯಿಂದ ವಿನೋದನಿಗೆ ನಿಜವಾಗಿಯ ಸುಖಸಂಗತಿಯಾಗಲು ಸಂಶಯವಿಲ್ಲ.
ಸುಜ್ಞಾನಶರ್ಮನು ನರಿಯ ಹಿತಬೋಧನೆಗೆ ಸಮ್ಮತಿಸಿ, ತಂತ್ರನಾಥನನ್ನು ಪೋಲೀಸಿನವರ ವಶಕ್ಕೊಪ್ಪಿಸಿದನು. ಅಂದು ತಲೆತಪ್ಪಿಸಿಕೊಂಡರೂ, ಇಂದು ಪಾಪ ಜ್ಞಾನಮಂಟಪ ಪ್ರವೇಶವು, ತಂತ್ರನಾಥಗೆ ತಪ್ಪಲಿಲ್ಲ, ಇದಕ್ಕೆಂದಲ್ಲವೇ ಕಳ್ಳನೆಂದಿದ್ದರೂ, ಸಿಕ್ಕುವನೆಂದಾಡುವುದು ?
ಸುಹೃದರೆ !
"ಕಾಮಾತುರಾಣಾಂ ನ ಭಯಂ ನ ಲಜ್ಜಾ" ಎಂಬುದರಲ್ಲಿ ಸಂಶಯವೇನು ? ಕಾಮಮೋಹಿತನಿಗೆ ಭಯ, ಲಜ್ಜೆಗಳು ಮಾತ್ರವಲ್ಲ; ಉಚಿತಾನುಚಿತ ವ್ಯಾಪಾರದ ಪ್ರಜ್ಞೆಯೇ ಇರುವುದಿಲ್ಲ. ಏಕೆಂದರೆ- "ಕ್ಷುಧಾತುರಾಣಾಂ ನ ರುಚಿನಪಕ್ವಂ". ಹಸಿದು ಬಳಸಿದಾತನಿಗೆ ರುಚಿಯೂ, ಪಕ್ವವೂ ತಿಳಯದೆಂಬುದು ನಿಜವಷ್ಟೆ? ಹಾಗೆಯೇ