ಈ ಪುಟವನ್ನು ಪ್ರಕಟಿಸಲಾಗಿದೆ
೭೪
ಸತೀಹಿತೈಷಿಣಿ

ಗೂಡದೆ, ನಿನ್ನ ಕುಲದ ಗೌರವ, ಸಾಪದಗಳನ್ನು ಮತ್ತೆ ಗಳಿಸಿ, ಯಶೋಭಾಗಿಯಾಗು.”

ವಿನೋದ-ತಲೆಬಾಗಿ ಕಯ್ಮುಗಿದು ಸ್ಥಿರತೆಯಿಂದ, "ಸ್ವಾಮಿ, ಎಂದು, ನನಗೀ ಕೃತ್ರಿಮಸಂಧಾನವು ತಿಳಿದುಬಂದುದೋ, ಅಂದೇ ನನಗೆ ಕಾಲದಬೆಲೆ, ಸತ್ಯದಬಲ, ಧರ್‍ಮದವಿಜಯ, ಸಹೃದಯ ಬಾಂಧವ್ಯದ ನೈಜಸಂಕಲ್ಪಗಳು ಚೆನ್ನಾಗಿ ಹೃದಯಂಗಮವಾಗಿ, ಸನ್ಮಿತ್ರ-ಕುಮಿತ್ರರ ಪ್ರಕೃತಿ-ಸ್ವಭಾವ-ತಾರತಮ್ಯಗಳೂ ವ್ಯಕ್ತವಾದವು. ತುಚ್ಛವಾದ ಕ್ಷಣಿಕಸುಖಕ್ಕಾಶೆಪಟ್ಟು ಕುಟಿಲೆಯರ ಬೆಳ್ಳುಡಿಗೆ ಮರುಳಾಗಿ, ವಿಚಾರವಿಲ್ಲದೆ ದುಡುಕುವದರ ಫಲವೂ ಅನುಭವಕ್ಕೆ ಬಂದುದು. ಈಗ ಸರ್ಕಾರದವರ ಆಜ್ಞೆ, ಯಾವರೀತಿಯಾದರೂ ಆ ರೀತಿ ನಡೆಯಲು ಸಿದ್ದನಾಗಿರುವೆನು."

ಧರ್ಮಾವತಾನು ಸಂತೋಷಾಶ್ಚರ್ಯಗಳಿಂದ,- "ವಿನೋದ, ಸಂತೃಪ್ತನಾದೆನು. ಇನ್ನು ಸಾಕು, ನಿನ್ನನ್ನು ಹಿಂದೆ ಹೇಳಿರುವಂತೆ ಮುಕ್ತನನ್ನಾಗಿ ಮಾಡಿರುವೆನು."

ಧರ್ಮಾವತಾರನು ಮತ್ತೆ ಗಿರಿಯಮ್ಮನನ್ನು ಕುರಿತು, "ಗಿರಿಯಮ್ಮ ! ನಿಮ್ಮ ನಡತೆಗೆ ತಕ್ಕ ಶಿಕ್ಷೆ ಅರ್ಥದಂಡವಲ್ಲದೆ ಯಾವಜ್ಜೀವವೂ, ಜನಾಪವಾದಕ್ಕೆ ಗುರಿಯಾದುದೂ ಆಗಿದೆ. ಈ ಕಲಹಕ್ಕೆ ಬೀಜಪ್ರಾಯರಾದ ನಿಮ್ಮಿಂದಲೇ ಈ ಅನಾಹುತವು ಪ್ರಾಪ್ತವಾಯ್ದೆಂದು ತಿಳಿದುಬಂದಿರುವುದರಿಂದ ನಷ್ಟದ್ರವ್ಯಕ್ಕೆ ನೀವೇ ಹೊಣೆಯಾಗಬೇಕು. ಅರ್ಥದಂಡವನ್ನೊಪ್ಪಿಸಿ ಹೋಗಬಹುದು, ವಿದ್ಯಾಗಂಧವನ್ನೇ ತಿಳಿಯದ ನಿಮ್ಮ೦ತಹ ಸ್ತ್ರೀಸಾಮಾನ್ಯರಲ್ಲಿ ನೆಲೆಗೊಂಡಿರುವೆ ದ್ವೇಷ-ರೋಷ-ಅಭಿಮನ-ಪ್ರತಿಷ್ಠೆಗಳಿಂದ ಎಂತೆಂತಹ ಅನರ್ಥಗಳು ಸಂಭವಿಸುವುವೆಂಬುದು ನಿದರ್ಶನಕ್ಕೆ ಬಂದುದು. ನಿಮ್ಮ ಮತ್ತು