ಈ ಪುಟವನ್ನು ಪ್ರಕಟಿಸಲಾಗಿದೆ
ಸುಶೀಲೆ
೭೫

ಚಪಲಿಯಂತವರ ಕುಹುಕಗಳು ಸ್ತ್ರೀಜಗತ್ತಿಗೇ ಅಪಕೀರ್ತಿಯನ್ನು ತರತಕ್ಕವುಗಳೆಂಬುದೂ ನಿರ್ಧರವಾಯ್ತು. ಅಲ್ಲದೆ ಸುಶೀಲೆ, ಮತ್ತು ಮಯೂರಿಯರಿಗೆ ಎಂತಹ ವಿಪತ್ತು ಪ್ರಾಪ್ನವಾಗಿದ್ದರೂ, ಎದೆಗೆಡೆದ ತಾಳ್ಮೆಯಿಂದ ಕಾರ್ಯವನ್ನು ನಿರ್ವಹಿಸಿದುದು ಉತ್ತಮಗುಣವನ್ನಿಸಿರುವದಲ್ಲದೆ, ಅವರ ಸದ್ವರ್ತನೆಯು, ಪ್ರಪಂಚಕ್ಕೇ ಪರವಾದರ್ಶ ಜೀವನವಾಗಿರುವುದೆಂದು ಹೇಳಲು ಸಂತೋಷಪಡುವೆನು." ಹೀಗೆ ಹೇಳಿ, ಮತ್ತೆ ತಂತ್ರನಾಥನನ್ನು ಕುರಿತು,-"ತಂತ್ರನಾಥ, ನಿನ್ನ ಮೇಲೆ ಮರು ಅಪರಾಧಗಳು ಆರೋಪಿತವಾಗಿವೆ. ಇದಕ್ಕೆ ನೀನೇನು ಹೇಳುವೆ ?"

ತಂತ್ರ--ಕೋಪದಿಂದ ದರ್ಪಿತಸ್ವರದಲ್ಲಿ "ನಾನು ಹೇಳಬೇಕಾದುದು ಇಷ್ಟೆ, ಈ ಕೂರನಾದ ವಿನೋದ, ನಿಷ್ಟುರೆಯಾರಿ ಸುಶೀಲೆ ಇವರಿಬ್ಬರನ್ನೂ ವಧೆಮಾದಲ್ಲದೆ ನನ್ನ ಮನಸ್ಸು ಶಾಂತಿಯನ್ನು ಹೊಂದುವಂತಿಲ್ಲ, ನನಗೆ ಮರಣದಂಡನೆ ವಿಧಿಸಲ್ಪಟ್ಟರೂ, ಈ ಕಾರ್ಯವನ್ನು ಮಾಡಿಯೇ ಮೃತಿಹೊಂದಬೇಕೆಂಬುದು ನನ್ನ ಸಂಕಲ್ಪ."

ಧರ್ಮಾವತಾರ--ಧಿಕ್ಕಾರಮಾಡಿ ನಕ್ಕು "ಈತನು, ಎಂದೆಂದಿಗೂ ನೀಚನೇಸರಿ. ಇವನಲ್ಲಿ ಇನ್ನು ಕನಿಕರಕ್ಕೆ ಅವಕಾಶವಿರುವುದಿಲ್ಲ, ಇಂತಹ ದ್ರೋಹಿಗಳಿಗೆ ಆಮರಣಾಂತವಾಗಿ ಕಾರಾಗಾರವಾಸವನ್ನು ವಿಧಿಸುವುದಕ್ಕಿಂತ ಮರಣದಂಡನೆಯೇ ಉತ್ತಮವಿಧಿ."

ತಂತ್ರನಾಥನಿಗೆ ಮರಣದಂಡನೆಯಿಂರು ಮತ್ತೊಮ್ಮೆ ಹೇಳಬೇಕಾದುದಿಲ್ಲವಷ್ಟೆ ? ಹೇಗೂ ಅಂದಿನಿಂದ ಕುಟಿಲ ಆನೃತ ಅತ್ಯಾಚಾರಗಳ ನಿಗ್ರಹದಿಂದ ಶಾಂತತೆಯೇ ನ್ಯಾಯಸ್ಥಾನದಲ್ಲಿ ಪೂರ್ಣಾಧಿಕಾರವನ್ನು ವಹಿಸಿ ಸರ್ವತ್ರ ಪ್ರಕಾಶಿಸಲಾರಂಭಿಸಿತು.