ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಥಮಮುದ್ರಣದ ಪ್ರಸ್ತಾವನೆ


ಪ್ರಿಯ ಸೋದರಿಯರೇ! ಸಹೃತ್ಸೋದರರೇ!!
ನಾನು ವಿದ್ಯಾಗಂಧನನ್ನೇ ತಿಳಿಯದ ಅಲ್ಫಮತಿಯಾದ ಸಾಮಾನ್ಯಸ್ತ್ರೀ; ನವನಾಗರಿಕತೆಯ ಸುಳಿವಾಗಲೀ, ತಿಳಿವಳಿಕೆಯ ತಿರುಳಾಗಲೀ ತಿಳಿಯದ ಬಾಲಕೆ; ಆದರೂ, ನಮ್ಮ ಸೋದರೀವರ್ಗಕ್ಕೆ ನನ್ನಕಯ್ಯಲ್ಲಾಗುವ ಸೇವೆ ಯನ್ನು ಮಾಡಬೇಕೆಂಬ ಅಸ್ಯತ್ಮಟೇಚ್ಛೆಯು ನನ್ನನ್ನು ಬಿಡಲೊಲ್ಲದು.

"ಸೋದರೀವರ್ಗವನ್ನು ಹೇಗೆ ಸೇವಿಸಲಿ? ಹೇಗೆ ಉಪಕರಿಸಲಿ?" ಎಂದು ಚಿನ್ತಿಸಿ, ಚಿನ್ತಿಸಿಯೇ ನನ್ನ ಸ್ವಾಮಿಯ ವಿಯೋಗ ಕಾಲದಿಂದ ಮೊದಲು, ಈವರೆಗಿನ ಕಾಲವನ್ನೂ ಕಳೆದು, ದೈವಯೋಗ ಬಲದಿಂದ ಈಗ ಈ ಗ್ರಂಥರಚನಾಕಾರ್ಯದಲ್ಲಿ ತೊಡಗಿರುವೆನು. ಕೇವಲ ಪಂಡಿತರಿಗೆ, ಮತ್ತೂ ಬಹು ಭಾಷಾವಿಶಾರದರಿಗೆ ಮಾತ್ರವೇ ಸಾಧ್ಯವಾದ ಈ ಪ್ರಯತ್ನವ, ನನ್ನಿಂದ ಸಾರ್ಥಕ್ಯವನ್ನು ಹೊಂದಲಾರದೆಂಬ ಭರವಸೆಯಿದ್ದರೂ ವಿದ್ವನ್ಮಣಿಗಳೂ, ದೇಶವತ್ಮಲರೂ, ಭಾಷಾಭೂಷಣರೂ ಆದ ಸುಹೃದರ ಸಹಾಗು ಸಂಪತ್ತಿಯೇ ಸರ್ವ ಪ್ರಕಾರದಿಂದೆಯೂ ಪ್ರೋತ್ಸಾಹಿಸದಿರಲಾರದೆಂಬ ಬಲವಾದ ನಂಬುಗೆಯೊಂದು ಈ ಕಾರ್ಯದಲ್ಲಿ ಕಾಯ್ಚಾಚಿರುವ ನನ್ನನ್ನು ಪ್ರೋತ್ಸಾಹಿಸುತ್ತಿರುವುದು. ಈ ಸಂಸಾರಿಕ ಕಾದಂಬರಿಯು ಕೇವಲ ಬಾಲಿಶ ವಿದ್ಯಾರ್ಥಿನಿಯ ಸ್ವಕಪೋಲ ಕಲ್ಪಿತವು; ಕಥಾನಕವು ಅಷ್ಟಾಗಿ ಸ್ವಾರಸ್ಯವಾಗಿಲ್ಲವೆಂದರೂ ಗೃಹಿಣಿಯರಿಗೆ ಸಾಕಾದಷು ನೀತಿಬೋಧಕವಾಗಿರುವುದೆಂಬ ಭರವಸೆಯುಂಟು.