-೨-
ಲಕ್ಷ ಮಾಡದೆ ತಲೆಯನ್ನೆತ್ತಿಕೊಂಡಿದ್ದರೆ ಸ್ವಲ್ಪ ಹೊತ್ತಿನಲ್ಲೇ ನಾವು ತಲೆಯನ್ನು ತಗ್ಗಿ ಸಬೇಕಾಗುವದು. ಸೂರ್ಯನ ಪ್ರಕಾಶಿಸುವ ವೇಳೆಯಲ್ಲಿ ಅಂದರೆ ಹಗ ಲಲ್ಲಿ ಬಗೆ ಬಗೆಯ ಆಕಾರಗಳ ಮತ್ತು ಬಣ್ಣಗಳ ಪದಾರ್ಥಗಳನ್ನು ನೋಡುತ್ತೇವೆ ಸೂರ್ಯನು ಕಾಣುವವರೆಗೆ ನಮಗೆ ಸೆಕೆಯು ಸಹ ತೋರುತ್ತದೆ. ಸೂರ್ಯನು ಅಸ್ತಮಿಸಿದನಂತರ ಅಂದರೆ ರಾತ್ರಿಯಲ್ಲಿ ಎಲ್ಲಾ ಕಡೆಗಳಲ್ಲಿ ಕತ್ತಲೆಯಾಗಿ ಚಳಿಯು ಹೆಚ್ಚುವದು. ಅದ್ದರಿಂದ ಸೃಷ್ಟಿಯ ಹೊರಗಿರುವ ವಸ್ತುಗಳಲ್ಲಿ ಸೂರ್ಯನೇ ಮುಖ್ಯನಾದವನೆಂದು ಹೇಳುವದಕ್ಕೆ ಅಡ್ಡಿಯಿಲ್ಲ.
ಒಂದು ದಿನ ಹಗಲಲ್ಲಿ ನಾವು ಮಾಡುವ ಸೂರ್ಯನ ನಿರೀಕ್ಷಣೆಯಿಂದ ತಿಳಿಯಬಹುದಾದ ಸಂಗತಿಗಳು ಯಾವವೆಂದರೆ:-
(೧) ಅವನು ದಗದgನೆ ಉರಿಯುತ್ತ ಕೆಂಡದಂತೆ ಕಾಣಿಸುತ್ತಾನೆ. ಅವನು ಆಕಾರದಲ್ಲಿ ದುಂಡಾಗಿರುತ್ತಾನೆ. ಅವನ ಬಣ್ಣವು ಯಾವಾಗಲೂ ಒಂದೇ ಪ್ರಕಾರದ್ದಾಗಿರುವದಿಲ್ಲ. ಮುಂಜಾನೆ ಅವನ ಬಣ್ಣವು ಯಾವದು? ಮಧ್ಯಾಹ್ನದಲ್ಲಿ ಯಾವದು? ಸಂಜೆಗೆ ಯಾವದು?
*(ಭೌತಿಕ ಭೂಗೋಳ ಶಾಸ್ತ್ರಗಳು ಹುಟ್ಟುವದಕ್ಕೆ ಬಹುಕಾಲಕ್ಕೆ ಮೊದಲೇ ಪುರಾತನ ಜನರು ನಮ್ಮ ಭೂಗ್ರಹವು ಸೂರ್ಯನಿಗೆ ಅಧೀನವಾದದ್ದು ಎಂಬ ವಿಷಯವನ್ನು ತಿಳಿದುಕೊಂಡಿದ್ದರನ್ನುವದರಲ್ಲಿ ಏನೂ ಸಂಶಯವಿಲ್ಲ. ಈ ಭೂಮಂಡಲದಲ್ಲಿ ಪದಾರ್ಥಗಳಿಗೆ ಬೇಕಾದ ಬೆಳಕಿಗೂ ಉಷ್ಣಕ್ಕೂ ಮತ್ತು ಸ್ಥಾವರ ಜಂಗಮಾದಿ ಸಸ್ಯ ಜಂತುಗಳ ವ್ಯಾಪಾರಗಳಿಗೆಲ್ಲಾ ಈ ತತ್ವವೇ ಕಾರಣವಾದುದೆಂದು ಭಾವಿಸಿ, ನಿರಂತರ್ಜ್ಯೋತಿರ್ಮಯನಾದ ಸೂರ್ಯನನ್ನು ಪರಮದೈವವೆಂದು ಆರಾಧಿಸುತ್ತಿದ್ದರು. ಎಲ್ಲಾ ವಿಧವಾದ ಆರಾಧನೆಗಳಲ್ಲಿ ಈ ಸೂರ್ಯಾರಾಧನೆಯೇ ಸ್ವಾಭಾವಿಕೆವಾದದ್ದು. ಆ ಮಂಡಲದ ಸ್ವರೂಪವನ್ನು ತಿಳಿಯದೇ ಇದ್ದಾಗ್ಯೂ, ಅನಾಗರಿಕ ಜನರು ಸೂರ್ಯನು ಉದಯಿಸಿದಾಗ ಪ್ರಕಾಶವನ್ನೂ ಸೆಕೆಯನ್ನೂ ಕೊಡುವದರಿ೦ದ ನಮ್ಮ ಪ್ರಪಂಚಕ್ಕೆ ಅಭ್ಯುದಯವೆಂತಲೂ, ಅವನು ಆಸ್ತಮಿಸಿದಾಗ ಅಂಧಕಾರದ ಮತ್ತು ಚಳಿಯ ಬಾಧೆಗಳು ಹೆಚ್ಚುವದರಿಂದ ನಮ್ಮ ಜಗತ್ತಿಗೆ ದು:ಖವೆಂತಲೂ ಅನುಭವದಿಂದ ತಿಳಿದು ಸೂರ್ಯೋದಯವಾದಾಗ ಅವನ ಮುಂದೆ ನಮಸ್ಕರಿಸಿ ಹಾರಾಡುತ್ತಲೂ ಕುಣಿದಾಡುತ್ತಲೂ ತಮ್ಮ ಸಂತೋಷವನ್ನು ತೋರ್ಪಡಿಸುತ್ತಿದ್ದರು. ನಮ್ಮ ದೇಶದಲ್ಲಿ ಈ ಆರಾಧನೆಯು ಈಗಲೂ ಸೂರ್ಯನಮಸ್ಕಾರ, ಸೂರ್ಯೋಪಸ್ಥಾನವೆ೦ಬ ರೂಪಗಳಿ೦ದ ನಮ್ಮ ಪೂಜಾವಿಧಿಗಳಲ್ಲಿ ಸೇರಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.) * ಸೂರ್ಯನ ಆಕಾರವನ್ನು ನೋಡಬೇಕಾದರೆ ಒಂದು ಗಾಜಿನ ತು೦ಡಿಗೆ ಮಸಿಯನ್ನು (ಕಾಡಿಗೆಯನ್ನು) ಹಚ್ಚಿ ಅದರ ಮೂಲಕ ನೋಡಬೇಕು.