ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ೩ - (೨) ಸೂರ್ಯನು ಹಗಲಲ್ಲಿ ಆಕಾಶದಲ್ಲಿ ಒಂದೇ ಸ್ಥಳದಲ್ಲಿ ಇರುವದಿಲ್ಲ. ಅವನು ಬೆಳಿಗ್ಗೆ ಒಂದು ದಿಕ್ಕಿನಲ್ಲಿ ಉದಯಿಸಿ ಕ್ರನುಕ್ರಮವಾಗಿ ಆಕಾಶದ ಮಧ್ಯಕ್ಕೆ ಹತ್ತುತ್ತಾ ಮಧ್ಯಾಹ್ನದಲ್ಲಿ ಅತ್ಯುನ್ನತ ಸ್ಥಾನಕ್ಕೆ ಬಂದು ಸೇರುತ್ತಾನೆ. ಅವನು ಉದ ಯಿಸುವಾಗ ನಾವು ಅವನಿಗೆ ಎದುರಾಗಿ ನಿಂತುಕೊಂಡರೆ, ನಮ್ಮ ಎದುರಿಗೆ ಇರು ವ ದಿಕ್ಕು ಪೂರ್ವ ದಿಕ್ಕಿನಿಸುವದು, ನಮ್ಮ ಬಲಗಡೆಯಲ್ಲಿರುವದನ್ನು ದಕ್ಷಿಣವೆಂ ತಲೂ ನಮ್ಮ ಎಡಗಡೆಯಲ್ಲಿರುವದನ್ನು ಉತ್ತರವೆಂತಲೂ ನಮ್ಮ ಹಿಂಭಾಗದಲ್ಲಿ ರುವದನ್ನು ಪಶ್ಚಿಮವೆಂತಲೂ ಹೇಳುತ್ತೇವೆ. ಸೂರ್ಯನು ಮಧ್ಯಾಹ್ನಕ್ಕೆ ಸರಿ ಯಾಗಿ ಆಕಾಶದ ಮಧ್ಯಕ್ಕೆಬರುವನಷ್ಟೇ. ಅನಂತರ ಅವನು ಕ್ರಮವಾಗಿ ಇಳಿಯುತ್ತಾ ಸಾಯಂಕಾಲದಲ್ಲಿ ಪಶ್ಚಿಮ ದಿಕ್ಕಿನಲ್ಲಿ ಅಸ್ತಮಿಸುವನು. ಹೀಗೆ ಒಂದು ದಿನ ಹಗ ಲಲ್ಲಿ ಸೂರ್ಯನು ಪೂರ್ವದಿಂದ ಆಕಾಶದ ಮಧ್ಯಕ್ಕೂ, ಅಲ್ಲಿಂದ ಪಶ್ಚಿಮಕ್ಕೂ ಪ್ರಯಾಣವನ್ನು ಮಾಡಿದಂತೆ ಕಾಣಿಸುತ್ತಾನೆ. ಸೂರ್ಯನು ಅಸ್ತಮಿಸಿದನಂತರ ರಾತ್ರಿಯಾಗುವದು. (೩) ಸೂರ್ಯನು ಆಕಾಶದಲ್ಲಿ ಪೂರ್ವದಿಕ್ಕಿನಲ್ಲಾನಗಲಿ ಪಶ್ಚಿಮದಲ್ಲಾ ಗಲಿ ಪ್ರಕಾಶಿಸುತ್ತಿರುವಾಗ ನಮ್ಮ ಬೆನ್ನನ್ನು ಅವನ ಕಡೆಗೆ ತಿರುಗಿಸಿ ನಿಂತುಕೊಂ ಡರೆ ನಮ್ಮ ಮುಂದೆ ನೆರಳು ಬೀಳುವದು. ನಾವು ಹಿಂದುಮುಂದಕ್ಕೆ ಸರಿದಂತೆ ಈ ನೆರಳು ಸರಿಯುತ್ತಿರುವದು. ನಾವು ಬಿಸಿಲಲ್ಲಿ ನಿಂತುಕೊಂಡರೆ ನೆರಳು ಬೀಳಲು ಕಾರಣವೇನು? * ನಾವು ಏತಕ್ಕೆ ಬಿಸಲಲ್ಲಿ ಕೊಡೆಯನ್ನು (ಛತ್ರಿಯನ್ನು) ಹಿಡಿದು ಕೊಳ್ಳುತ್ತೇವೆ? ಬೆಳಿಗ್ಗೆ ನಮ್ಮ ನೆರಳು ಯಾವ ಕಡೆಯಲ್ಲಿ ಬೀಳುತ್ತದೆ? ಸಾಯಂಕಾಲ ದಲ್ಲಿ ನಮ್ಮ ನೆರಳು ಎಲ್ಲಿ ಬೀಳುತ್ತದೆ? ಮಧ್ಯಾಹ್ನ ದಲ್ಲಿ ನಮ್ಮ ನೆರಳು ಹೇಗಿರುತ್ತದೆ? ಬೆಳಿಗ್ಗೆ ಮತ್ತು ಸಂಜೆಯ ಮುಂದೆ ಬೀಳುವ ನೆರಳಿಗೂ ಮಧ್ಯಾಹ್ನದ ನೆರಳಿಗೂ ವ್ಯತ್ಯಾಸವೇನು? ಸೂರ್ಯನು ಮುಗಿಲಲ್ಲಿ ಪೂರ್ವದಿಂದ ಪಶ್ಚಿಮ ದಿಕ್ಕಿಗೆ ಸರಿದಂತೆ ಮನೆ, ಮರ ಮೊದಲಾದ ವಸ್ತುಗಳ ನೆರಳು ಪಶ್ಚಿಮದಿಂದ ಪೂರ್ವಕ್ಕೆ ತಿರುಗುತ್ತದೆ

  • ಕತ್ತಲೆಯಾದ ಕೋಣೆಯಲ್ಲಿ ಒ೦ದು ದೀಪವನ್ನು ತಂದಿಟ್ಟರೆ ಅದರ ಪ್ರಕಾಶವು ಎಲ್ಲಾ ಕಡೆಗಳಲ್ಲಿ ಪಸರಿಸುವದಷ್ಟೇ, ಯಾವನಾದರೂ ಒಬ್ಬನು ದೀಪದ ಸಮೀಪಕ್ಕೆ ಬಂದು ನಿಂತರೆ ಅವನ ಹಿಂದೆ ಅವನ ಆಕಾರದ ನೆರಳು ಬೀಳುವದು, ನೆರಳು ಬೀಳುವ ಸ್ಥಳದಲ್ಲಿರುವ ಸದಾ ರ್ಥಗಳು ಕಾಣಿಸುವದದಿಲ್ಲ. ಇದೇ ರೀತಿಯಲ್ಲಿ ದೀಪಕ್ಕೆ ಅಡ್ಡವಾಗಿ ಒಂದು ಪುಸ್ತಕವನ್ನು ಹಿಡಿದರೆ ದೀಪದ ಪ್ರಕಾಶವು ನನ್ನ ಮುಖದ ಮೇಲೆ ಬೀಳುವದಿಲ್ಲ