ಈ ಪುಟವನ್ನು ಪ್ರಕಟಿಸಲಾಗಿದೆ

- ೨೧ -

ಯಲ್ಲಿ ಕುಳಿತು ಒಂದು ನದಿಯಲ್ಲಾಗಲಿ ಸಮುದ್ರದ ತೀರದಲ್ಲಾಗಲಿ ಧಡದಲ್ಲಿರುವ ಮರ ಗಿಡಗಳನ್ನೂ ಮನೆಗಳನ್ನೂ ನೋಡುತ್ತಲಿದ್ದರೆ ದೋಣಿಯು ಮುಂದೆ ಮುಂ ದೆ ಸರಿದಂತೆ ಮರಗಿಡಗಳೂ ಮನೆಗಳೂ ಹಿಂದೆ ಹೋಗುವ ಹಾಗೆ ಕಾಣಿಸುವವೇ ಹೊರತು ಆ ದೋಣಿಯು ಮುಂದಕ್ಕೆ ಚಲಿಸಿದಂತೆ ಕಾಣಿಸುವದಿಲ್ಲ. ಇದೇ ರೀತಿಯಲ್ಲಿ ನಮ್ಮ ಪೃಥ್ವಿಯು ಸದಾ ಸುತ್ತುತ್ತಲಿದ್ದರೂ ಸೂರ್ಯನೇ ಪೂರ್ವ ದಿಂದ ಪಶ್ಚಿಮಕ್ಕೆ ಪ್ರಯಾಣ ಮಾಡುವಂತೆ ಕಾಣುವನು.

ಭೂಮಿಯು ಹೀಗೆ ಗರಗರನೆ ತನ್ನ ಸುತ್ತಲು ಸುತ್ತುತ್ತಲಿದ್ದರೆ ಅದರ ಮೇಲಿರುವ ನಾವೂ ನಮ್ಮ ಮನೆಗಳೂ ಬೀಳದೆ ನಿಂತಿರುವದು ಹೇಗೆ ಸಾಧ್ಯವೆಂದು ಕೆಲವರು ಆಶ್ಚರ್ಯಪಡಬಹುದು. ಭೂಮಿಯ ಮೇಲಿರುವ ಯಾವತ್ತೂ ಪದಾರ್ಥಗಳು ಅದರ ಅಗೋಚರವಾದ ಒಂದು ಆಕರ್ಷಣ ಶಕ್ತಿಗೆ ಒಳಪಟ್ಟಿರುತ್ತವೆ ಈ ಕಾರಣದಿಂದಲೇ ಭೂಮಿಯು ಹೇಗೆ ಸುತ್ತಿದರೂ ಅವು ಹೊರಗೆ ಬೀಳುವದಿಲ್ಲ. ನಾವು ಒಂದು ಕಲ್ಲನ್ನು ಮೇಲಕ್ಕೆ ಎಸೆದರೆ ಅದು ಕೂಡಲೆ ಭೂಮಿಯಲ್ಲಿ ಬೀಳುವದಷ್ಟೇ. ಇದಕ್ಕೂ ಭೂಮಿಯ ಆಕರ್ಷಣ ಶಕ್ತಿಯೇ ಕಾರಣವು.

(೨)

ಸಲಾಕಿಯ ನೆರಳಿನ ನಿರೀಕ್ಷಣೆಯಿಂದ ಸೂರ್ಯನಿಗೆ ಪ್ರತಿನಿತ್ಯವೂ ಪೂರ್ವದಿಂದ ಆಕಾಶದ ಮಧ್ಯಕ ಅಲ್ಲಿಂದ ಪಶ್ಚಿಮಕ್ಕೂ ಹೋಗುವ ಚಲನೆಯಲ್ಲದೆ ಮತ್ತೊಂದು ಚಲನೆಯೂ ಇರುವಂತೆ ನಮಗೆ ತೋರಿ ಬರುತ್ತದೆ. ಡಿಸಂಬರ ೨೨ನೇ ತಾರೀಖಿನ ತರುವಾಯ ಸೂರ್ಯನು ಸ್ವಲ್ಪ ಸ್ವಲ್ಪವಾಗಿ ಉತ್ತರಕ್ಕೆ ಸರಿಯುತ್ತಿರುವಂತೆ ಕಾಣುವನು, ಅವನು ಉತ್ತರಕ್ಕೆ ಬರುತ್ತಾ ಹಗಲಿನ ಪ್ರಮಾಣವು ಹೆಚ್ಚಿ ಸೆಕೆಯು ಹೆಚ್ಚಾಗುವದು. ಮಾರ್ಚ ೨೧ನೇ ತಾರೀಖಿನಲ್ಲಿ ಹಗಲು ರಾತ್ರಿಗಳು ಸಮವಾಗಿದ್ದು ಅಲ್ಲಿಂದ ಮುಂದಕ್ಕೆ ನಮ್ಮ ಪ್ರಾಂತದಲ್ಲಿ ಹಗಲು ಪ್ರಮಾಣದಲ್ಲಿ ಹೆಚ್ಚಾಗಿ ರಾತ್ರಿಯು ಕಡಿಮೆಯಾಗುತ್ತದೆ. ಸೂರ್ಯನು ಜೂನ ತಿಂಗಳ ೨೧ರಲ್ಲಿ ಅತ್ಯಧಿಕ ಉತ್ತರಕ್ಕೆ ಸೇರಿದವನಾಗಿ ಅದರ ತರುವಾಯ ದಕ್ಷಿಣಕ್ಕೆ ಹಿಂತಿರುಗುವಂತೆ ಕಾಣುವನು. ಪುನಃ ಸೆಪ್ಟೆಂಬರ ೨೧ರಲ್ಲಿ ಹಗಲುರಾತ್ರಿಗಳು ಸಮವಾಗಿದ್ದು ಅನಂತರ ರಾತ್ರಿಯು ಹೆಚ್ಚುತ್ತಾ ಹಗಲು ಕಡಿಮೆಯಾಗುತ್ತಾ ಬರುವುದು. ದಕ್ಷಿಣಕ್ಕೆ ತೆರಳಿದ ಸೂರ್ಯನು ಡಿಸಂಬರ ೨೧ರಲ್ಲಿ ಮೊದಲು ಇದ್ದ ಸ್ಥಾನಕ್ಕೆ ಬಂದು ಸೇರುವನು. ಹೀಗೆ ಈ ಚಲನೆಯು ಪೂರ್ಣವಾಗುವದಕ್ಕೆ ಒಂದು ವರ್ಷವು ಬೇಕಾಗು