ಈ ಪುಟವನ್ನು ಪ್ರಕಟಿಸಲಾಗಿದೆ

-೨೨-

ವದು, ಭೂಮಿಯು ತನ್ನ ಅಕ್ಷದ ಮೇಲೆ ಪಶ್ಚಿಮದಿಂದ ಪೂರ್ವಕ್ಕೆ ತಿರುಗುವದು ರಿಂದ ಸೂರ್ಯ, ನಕ್ಷತ್ರಗಳು ಮೊದಲಾದವು ಪೂರ್ವದಿಂದ ಪಶ್ಚಿಮಕ್ಕೆ ಸುತ್ತುವಂತೆ ಕಾಣುತ್ತವೆ. ಸೃಷ್ಟಿಯ ಬೇರೆ ಯಾವ ಚಲನೆಯಿಂದ ಹಗಲು ರಾತ್ರಿಗಳ ಪ್ರಮಾಣಗಳು ವ್ಯತ್ಯಾಸವಾಗಿ ಋತುಭೇದಗಳುಂಟಾಗುತ್ತವೆ? ಭೂಮಿಯು ತನ್ನ ಅಕ್ಷದ ಮೇಲೆ ಸುತ್ತುವಾಗ ಯಾವಾಗಲೂ ಒಂದೇ ಸ್ಥಳದಲ್ಲಿರದೆ ದಿನದಿನಕ್ಕೂ ಸ್ವಲ್ಪ ಸ್ವಲ್ಪವಾಗಿ ಸರಿದು ಸೂರ್ಯನನ್ನು ಪ್ರದಕ್ಷಣೆ ಮಾಡಬಹುದು. ಇದಕ್ಕೆ ನಿದರ್ಶನವಾಗಿ ನಾವು ಒಂದು ಬೊಗರಿಯ ಚಲನೆಯನ್ನು ಹೇಳಬಹುದು. ಒಂದು ಬೊಗರಿಯನ್ನು ದಾರದಿಂದ ಸುತ್ತಿ ತಿರುಗಿಸಿ ಬಿಟ್ಟರೆ, ಅದು ಹೇಗೆ ತನ್ನ ಸುತ್ತ ತಿರುಗುತ್ತಲೂ ಇದ್ದಲ್ಲಿಯೇ ಇರದೆ ವರ್ತುಲಾಕಾರವಾಗಿ ತಿರುಗುವದೋ ಅದೇ ಗೀತಿಯಲ್ಲಿ ಸೃಷ್ಟಿಯು ತನ್ನ ಸುತ್ತ ತಾನು ತಿರುಗುತ್ತಿರುವಾಗಲೇ ದಿನದಿನಕ್ಕೂ ಮುಂದೆ ಮುಂದೆ ಸರಿಯುತ್ತ ಸೂರ್ಯನನ್ನು ಪ್ರದಕ್ಷಣೆಮಾಡುವದೆಂದು ತಿಳಿಯಬಹುದು. ಹಿಂದೆ ನಕ್ಷತ್ರಗಳಿಗೂ ಗ್ರಹಗಳಿಗೂ ಇರುವ ವ್ಯತ್ಯಾಸಗಳನ್ನು ವಿಚಾರಮಾಡಿದಾಗ ಗ್ರಹಗಳು ಯಾವಾಗಲೂ ಇದ್ದಲ್ಲಿಯೇ ಇರದೆ ನಭೋಮಂಡಲದಲ್ಲಿ ಹಿಂದಕ್ಕಾಗಲಿ ಮುಂದಕ್ಕಾಗಲಿ ಸರಿಯುತ್ತವೆಂದು ತಿಳಿದೆವು. ಪೃಥ್ವಿಯು ಇವುಗಳ ಹಾಗೆ ಸುತ್ತುತ್ತಾ ಸೂರ್ಯನ ಪ್ರದಕ್ಷಣೆಯನ್ನು ಒಂದು ವರ್ಷದಲ್ಲಿ ಮಾಡುತ್ತದೆಂದು ಹೇಳುವದಕ್ಕೆ ಅಡ್ಡಿಯಿಲ್ಲ.

ಭೂಮಿಯು ಸೂರ್ಯನ ಸುತ್ತಲು ಪ್ರದಕ್ಷಣೆಮಾಡಿದ ಮಾತ್ರದಿಂದ ಹಗಲು ರಾತ್ರಿಗಳಲ್ಲಿ ಹೆಚ್ಚು ಕಡಿಮೆಯುಂಟಾಗುವದಿಲ್ಲ, ಪೃಥ್ವಿಯ ಸ್ಥಿತಿಯಲ್ಲಿ ಬೇರೆ ಯಾವ ಹೆಚ್ಚು ಕಡಿಮೆಯ ಇಲ್ಲದೆ ಅದರ ಉತ್ತರ ಧ್ರುವನು (ಮೇರು) ನೆಟ್ಟಗೆ ಮೇಲಕ್ಕೂ ದಕ್ಷಿಣಧ್ರುವವು ನೆಟ್ಟಗೆ ಕೆಳಗೆ ಇದ್ದಿದ್ದರೆ ಸೂರ್ಯನಿಗೆ ಇದುರಾಗಿರುವ ಭೂಮಿಯ ಅರ್ಧ ಭಾಗದಲ್ಲಿ ಹಗಲು ಮತ್ತೊಂದು ಅರ್ಧ ಭಾಗದಲ್ಲಿ ರಾತ್ರಿಯು ಇದ್ದು ಇವು ಪ್ರಮಾಣದಲ್ಲಿ ಸಮನಾಗಿರುತ್ತಿದ್ದವು. ವರ್ಷದ ಎಲ್ಲಾ ಕಾಲಗಳಲ್ಲಿ ಸೂರ್ಯನ ಕಿರಣಗಳು ಒಂದೇ ವಿಧವಾಗಿ ಬೀಳುತ್ತಾ ಭೂಮಿಯ ಮಧ್ಯಭಾಗವು ಸರ್ವದಾ ಅತ್ಯಂತಸೆಕೆಯುಳ್ಳದ್ದಾಗಿಯೂ ಧ್ರುವಪ್ರದೇಶಗಳು ಅತಿ ಶೀತವುಳ್ಳವುಗಳಾಗಿಯೂ ಇದ್ದು ಪೃಥ್ವಿಯ ಮೇಲೆ ಋತುಭೇದಗಳಾಗುತ್ತಿರಲಿಲ್ಲ ಮಾರ್ಚ ೨೧ರಲ್ಲಿ ಸೂರ್ಯನು ವಿಷುವದ್ರೇಖೆಯ ಮೇಲಿದ್ದು ಅಲ್ಲಿಂದ ಮುಂದಕ್ಕೆ ಉತ್ತರಕ್ಕೆ ಬರುವಂತೆ ಕಾಣುವನಷ್ಟೇ. ಭೂಮಿಯ ಉತ್ತರ ಭಾಗವು ಸೂರ್ಯನ