ಈ ಪುಟವನ್ನು ಪ್ರಕಟಿಸಲಾಗಿದೆ

-೩೪-

ಈ ಪ್ರದೇಶದಲ್ಲಿ ವರ್ಷದ ಒಟ್ಟು ಮಳೆಯೆಷ್ಟು? ತಿಂಗಳ ಸರಾಸರಿಯೆಷ್ಟು? ಹೀಗೆ ಒಂದು ಪ್ರದೇಶದಲ್ಲಿ ಅನೇಕ ವರ್ಷ ಬೀಳುವ ಮಳೆಯನ್ನು ಅಳೆದು ವರ್ಷ ದ ಸರಾಸರಿ ಮಳೆಯನ್ನು ಗೊತ್ತುಮಾಡಿರುತ್ತಾರೆ.*

ಡಾರ್ಜಲಿಂಗ. ೧೨೧.೮ ರತ್ನಗಿರಿ. ೧೦೪.೭೧ ಪುಣೆ. ೨೮.೨೩
ಸಿಮ್ಲ. ೬೭.೯೬ ಮಂಗಳೂರ. ೧೨೯.೮೩ ಬೆಳಗಾವಿ. ೪೯.೯೧
ಶ್ರೀನಗರ ೨೭.೦೩ ಮದ್ರಾಸ. ೪೯.೯೩ ಧಾರವಾಡ. ೩೬.೮೩
ಉದಕಮಂಡಲ. ೪೬.೬೦ ಕಲಕತ್ತೆ. ೬೦.೮೩ ಬೆಂಗಳೂರ. ೩೬.೩೦
ಕರಾಚಿ ೭೬೬ ಜಕೋಬಾಬಾದ್ ೪.೧೦ ಬಳ್ಳಾರಿ. ೧೮.೩೦
ಮುಂಬಯಿ ೭೩.೯೯ ಅಹಮ್ಮದಾಬಾದ್ ೨೯.೪೩ ಚಿರಾಪುಂಜಿ ೪೫೮

[ಸ್ವಲ್ಪ ಅವಧಿಯಲ್ಲಿ ಬಹಳ ಹೆಚ್ಚಾಗಿ ಬಿದ್ದ ಮಳೆಯು ಎಷ್ಟೆಂದು ತಿಳಕೊಳ್ಳಬೇಕೆಂಬುವರಿಗೆ ೧೯೧೧ನೇ ವರ್ಷದಲ್ಲಿ ಫಿಲಿಪ್ಪೆನ್ ದ್ವೀಪಗಳಲ್ಲುಂಟಾದ ತುಫಾನಿನ ಪರಿಣಾಮವು ಆಶ್ಚರ್ಯಕರವಾಗಿ ಕಾಣುವದು. ಆ ವರ್ಷದಲ್ಲಿ ಜೂಲೈ ೧೪ರಿಂದ ೧೭ ತಾರೀಖಿನವರೆಗೆ ನಾಲ್ಕು ದಿನಗಳಲ್ಲಿ ೩೫, ೨೯, ೧೭, ೮ ಅಂಗುಲಗಳು (ಇಂಚುಗಳು), ಈ ಪ್ರಮಾಣದಲ್ಲಿ ಮಳೆಯು ಸುರಿದು ಅನಾಹುತಗಳಾದವು.]


*ಮಳೆ ಹೆಚ್ಚಾಗುವದಕ್ಕೆ ವಿಶೇಷ ಕಾರಣಗಳು.

ಈಶಾನ್ಯ ಮತ್ತು ಆಗ್ನೆಯ ವ್ಯಾಪಾರದ ಗಾಳಿಗಳು ವಿಷುವದ್ರೇಖೆಯ ಸಮೀಪಕ್ಕೆ ಬಂದ ನಂತರ ಸ್ವಲ್ಪ ಸ್ವಲ್ಪವಾಗಿ ಕಾಯಿಸಲ್ಪಟ್ಟು ಮೇಲಕ್ಕೇರುತ್ತವೆ ಕೂಡಲೆ ಆ ಗಾಳಿಗಳು ತರುವ ಉಗಿಯು ತಣಿದು ಮಳೆಯಾಗುವದು ಈ ಕಾರಣದಿ೦ದಲೇ ವಿಷುವದ್ರೇಖೆಯ ಸಮೀಪದಲ್ಲಿ ಮಳೆಯು ಪದೇಪದೇ ಆಗುವದಲ್ಲದೆ ಹೆಚ್ಚಾಗಿಯ ಆಗುವದು

೧ ಒ೦ದು ಪ್ರದೇಶದಲ್ಲಿ ಗಾಳಿಯ ಪ್ರವಾಹಗಳು ಬರುವ ದಿಕ್ಕಿಗೆ ಅಡ್ಡವಾಗಿ ಎತ್ತರವಾ ದ ಪರ್ವತಗಳಿದ್ದರೆ ಅಲ್ಲಿ ಮಳೆಯು ಹೆಚ್ಚಾಗಿ ಬೀಳುವದು ಗಾಳಿಗಳು ಪರ್ವತದ ತಪ್ಪಲನ್ನು ಸೇರಿ ಮೇಲಕ್ಕೆ ಹೋದ೦ತೆ ತ೦ಪಾಗುವದರಿ೦ದ ಅವುಗಳ ಉಗಿಯು ತಣಿದು ಮಳೆಯು ರೂಪದಿಂದ ಬೀಳುವುದು ಈ ರೀತಿ ಯಲ್ಲಿ ಸಹ್ಯಾದ್ರಿ ಬೆಟ್ಟಗಳ ಪಶ್ಚಿಮದಲ್ಲಿ ಬಹಳ ಹೆಚ್ಚು ಮಳೆ ಯಾಗಿ ಪೂರ್ವಕ್ಕೆ ಹೋದ ಹಾಗೆ ಮಳೆಯು ಕಡಿಮೆಯಾಗುತ್ತದೆ.

೨ ಒ೦ದು ಪ್ರದೇಶದಲ್ಲಿ ಮಳೆಯು ಹೆಚ್ಚಾಗಿ ಆಗುವದಕ್ಕೆ ಅಲ್ಲಿ ಬೀಸುವ ಗಾಳಿಯ ಪ್ರವಾಹಗಳೂ ಕಾರಣಗಳಾಗಿರುತ್ತವೆ. ಗಾಳಿಗಳು ಸಮುದ್ರದಿಂದ ನೆಲದ ಕಡೆಗೆ ಬೀಸುತ್ತಿದ್ದರೆ ಅವು ಉಗಿಯನ್ನು ತರುತ್ತವೆ ನೆಲದ ಕಡೆಯಿಂದ ಬೀಸುವ ಗಾಳಿಗಳಲ್ಲಿ ಆದ್ರ್ರತೆಯು ಅಂಶವು ಕಡಿಮೆಯಾಗಿರುತದೆ.