- ೩೫ –
ಮಳೆಯ ನೀರು ಏನಾಗುತ್ತದೆ!
ಒಂದು ಪ್ರದೇಶದಲ್ಲಿ ಮಳೆಯಾದ ಸ್ವಲ್ಪ ಕಾಲದನಂತರ ನೆಲವು ಒಣಗಿ ಮೊದಲಿದ್ದ ಸ್ಥಿತಿಗೆ ಬರುತ್ತದಷ್ಟೇನೆಲದ ಮೇಲೆ ಮಳೆಯಾಗಿ ಬೀಳುವ ನೀರೇ ನಾಗುತ್ತದೆ?
ನೆಲವು ಒಣಗುವಾಗ ನೀರಿನ ಒಂದಂಶವು ಉಗಿಯಾಗಿ ಅಂತರಿಕ್ಷದಲ್ಲಿ ಸೇರುತ್ತದೆ. ಈ ಉಗಿಯು ತಣಿದು ಮೋಡದ ರೂಪಕ್ಕೆ ಬರುತ್ತದೆ. ಮಳೆಯಿಂದ ನೆಲದಮೇಲೆ ಬೀಳುವ ನೀರಿನ ಹೆಚ್ಚಿನಭಾಗವು ಬೇರೆ ರೀತಿಯಲ್ಲಿ ಸರಿದು ಹೋಗು ಇದೆ. ಒಂದು ದೊಡ್ಡ ಮಳೆಯಾದ ಮೇಲೆ ಬೀದಿಗಳಲ್ಲಿಯೂ ಇಳುಕಲುಗಳಲ್ಲಿಯೂ ಗುಡ್ಡಗಳ ಕೊರಕಲುಗಳಲ್ಲಿಯೂ ಸಣ್ಣ ಸಣ್ಣ ಪ್ರವಾಹಗಳು ಹರಿಯುತ್ತವಷ್ಟೇ ಈ ಪ್ರವಾಹಗಳನ್ನು ಹಿಂಬಾಲಿಸಿ ಹೋದರೆ ಅವು ಒಂದು ದೊಡ್ಡ ಹಳ್ಳದಲ್ಲಿ ಕೂಡಿ ಒಂದು ದೊಡ್ಡ ಪ್ರವಾಹವಾಗುವದನ್ನು ನೋಡಬಹುದು. ಇಂಥ ಹಳ್ಳಗಳಿಂದ ಹರಿಯುವ ನೀರು ಆ ಪ್ರದೇಶದ ಸಮೀಪದಲ್ಲಿರುವ ಒಂದು ಕೆರೆಗೆ ಅಥವಾ ಒಂದು ನದಿಗೆ ಹೋಗಿ ಸೇರಬಹುದು,ಈ ಮೇರೆಗೆ ಭೂಮಿಯ ಮೇಲೆ ಹರಿಯುವ ನದಿಗಳಿಂದ ನೀರು ಸಮುದ್ರಕ್ಕೆ ಮುಟ್ಟುತ್ತಿರುತ್ತದೆಂಬ ಕಲ್ಪನೆಯು ನಮ್ಮ ಮನಸ್ಸಿ ನಲ್ಲುಂಟಾಗುವದು.
ಮಳೆಯ ನೀರು ಮತ್ತೊಂದು ಬಗೆಯಿಂದಲೂ ನಮಗೆ ಅದೃಶ್ಯವಾಗುತ್ತದೆ. ಮಳೆಯು ಬರುವದಕ್ಕೆ ಮೊದಲು ನೆಲವು ತೀರ ಒಣಗಿರುತ್ತದಷ್ಟೇ. ಮಳೆಯಾದ ಬಳಿಕ ನೆಲವನ್ನು ಸ್ವಲ್ಪ ಅಗಿದರೆ ಅಲ್ಲಿ ಹೊರಬೀಳುವ ಮಣ್ಣು ಒದ್ದೆಯಾಗಿರುವದು. ಇದಕ್ಕೆ ಕಾರಣವನ್ನು ವಿಚಾರ ಮಾಡಿದರೆ ಮಳೆಯ ನೀರು ನೆಲದೊಳಗೆ ಇಳಿದು ಅಲ್ಲಿರುವ ಮಣ್ಣನ್ನು ಒದ್ದೆ ಮಾಡಿರುತ್ತದೆಂದು ನಮಗೆ ತಿಳಿಯುವದು ನೆಲವನ್ನು ಆಳವಾಗಿ ಅಗಿಯುತ್ತ ಹೋದರೆ ಹೆಚ್ಚು ಹೆಚ್ಚು ನೀರು ತುಂಬಿಕೊಳ್ಳುತದೆ. ಈ ನೀರೆಲ್ಲವು ನೆಲದಲ್ಲಿ ಬೀಳುವ ಮಳೆಯು ನೆಲದೊಳಗೆ ಇಳಿಯುವದರಿಂದ ಬಂದಿರುತ್ತದೆ. ನೆಲದೊಳಗೆ ಇಳಿದ ನೀರು ಪ್ರವಾಹವಾಗಿ ಹರಿಯುತ್ತಾ ಅಲ್ಲಲ್ಲಿ ಬುಗ್ಗೆಗಳ (ಸೆಲೆಗಳ) ಮಾರ್ಗದಿಂದ ನೆಲದ ಮೇಲೆ ಕಾಣಿಸಿಕೊಳ್ಳುತ್ತದೆ.