ಈ ಪುಟವನ್ನು ಪ್ರಕಟಿಸಲಾಗಿದೆ

ಉಪೋದ್ಘಾತ.

ಪ್ರಾಥಮಿಕ ಶಾಲೆಗಳಿಗಾಗಿ ಮುಂಬಯಿ ಸರಕಾರದವರಿಂದ ಮಂಜೂರು ಮಾಡಲ್ಪಟ್ಟ ಸೃಷ್ಟಿಜ್ಞಾನದ ಅಥವಾ ಪ್ರಕೃತಿವಿಮರ್ಶೆಯ ಅಭ್ಯಾಸ ಕ್ರಮದ ಮೂರನೇ ಭಾಗದಲ್ಲಿ ಸಮಾವೇಶವಾಗಿರುವ ಸೃಷ್ಟಿ ವ್ಯಾಪಾರಗಳ ನಿರೀಕ್ಷಣೆಗೆ ಸಹಾಯವಾಗಿರಬೇಕೆಂಬ ಉದ್ದೇಶದಿಂದ ಈ ಸಣ್ಣ ಪುಸ್ತಕವು ಬರೆಯಲ್ಪಟ್ಟರುತದೆ. ಪ್ರತಿಯೊಂದು ಶಾಲೆಯಲ್ಲಿ ಈ ವಿಷಯಗಳನ್ನು ಕಲಿಸುವದಕ್ಕೆ ಬೇಕಾದ ಯಂತ್ರ ಸಾಧನಗಳನ್ನು ತರಿಸಿಟ್ಟಿರಬೇಕು. ಮಕ್ಕಳು ಆಯಾ ಸೃಷ್ಟಿವ್ಯಾಪಾ ರಗಳನ್ನು ಪರೀಕ್ಷಿಸಿದನಂತರ ಈ ಪುಸ್ತಕವನ್ನು ಓದಬೇಕೆಹೊರತು ಇದನ್ನು ಬರೇ ಪಾಠ ಮಾಡಬಾರದು.

ಧಾರವಾಡ
೧೫ ಜೂನ ೧೯೨೧.
ಮ.ರಾಮಬ್ರಹ್ಮ.