ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಾಥಮಿಕ ಶಾಲೆಗಳಿಗಾಗಿ ಸೃಷ್ಟಿಜ್ಞಾನದ ಅಭ್ಯಾಸಕ್ರಮವು. - ೧ನೇ ಇಯತ್ತೆ. ಆಕಾಶ ಮತ್ತು ಅದರಲ್ಲಿ ಕಾಣುವ ವಸ್ತುಗಳು: ಆಕಾಶ, ಮೋಡಗಳು, ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು ಮಳೆಯ ನೀರು; ಅದು ಎಲ್ಲಿಂದ ಬರುತ್ತದೆ, ಎಲ್ಲಿ ಹೋಗುತ್ತದೆ ಮತ್ತು ಏನು ಮಾಡುತ್ತದೆ, ಎಂಬದು.

  • ೨ನೇ ಇಯತ್ತೆ ಕೋಲಿನ ಛಾಯೆ ಬೀಳುವ ದಿಶೆಗಳನ್ನು ನೋಡಿ ಅವುಗಳ ಮೇಲಿಂದ ಸೂರ್ಯನ ಬೇರೆ ಬೇರೆ ಸ್ಥಾನಗಳ ನಿರೀಕ್ಷಣ ಮಾಡುವದು; ಆಕಾಶದಲ್ಲಿ ಸೂರ್ಯನು ಇರುವ ಸ್ಥಾನವನ್ನು ನೋಡಿ ಅದರ ಮೇಲಿಂದ ಹೊತ್ತು ಹೇಳು ವದು. ಗಾಳಿಯು ಯಾವ ಬಾಜುವಿನಿಂದ ಬೀಸುತ್ತದೆಂಬದನ್ನು ಗೊತ್ತು ಹಚ್ಚುವದು.

೩ನೇ ಇಯತ್ತೆ, ಪ್ರತಿದಿನ ಚ೦ದ್ರನ ಸ್ಥಾನದಲ್ಲಿಯ ಆಕಾರದಲ್ಲಿ ಆಗುವ ಭೇದಗಳ ನಿರೀಕಣ ಮಾಡುವದು, ಮೋಡಗಳು; ರಚನೆ ಮತ್ತು ತರಗಳು (ಜಡ ಮತ್ತು ಹಗುರು) ಗಾಳಿ ಯಿಂದ ಮೋಡಗಳ ಮೇಲಾಗುವ ಪರಿಣಾಮಗಳು ಬಂಡೆಗಳು, ಮತ್ತು ನೆಲಗಳು; ಅವುಗಳ ಮೇಲೆ ಹರಿಯುವ ನೀರಿನಿಂದಾ ಗುವ ಪರಿಣಾಮವು. - ೪ ನೇ ಇಯತ್ತೆ, ಎಲ್ಲಕ್ಕೂ ಹೆಚ್ಚು ಚಕಚಕಿಸುವ ತಾರಾಗಣಗಳ ಅಥವಾ ಇಷ್ಟವಿದ್ದಲ್ಲಿ ಕೆಲವು ನಕ್ಷತ್ರಗಳ ಗುರ್ತು ಹಿಡಿಯುವದು, ನೀರು, ಉಷ್ಣತೆ, ಛಳಿ ಮತ್ತು ಗಾಳಿ ಇವುಗಳಿಂದ ಬಂಡೆಗಳ ಮೇಲೂ ನೆಲಗಳ ಮೇಲೂ ಉಂಟಾಗುವ ಪರಿಣಾಮವು. - ೫ನೇ ಇಯತ್ತೆ, ಈ ಇಯತ್ತೆಯ ವಾಚನಪುಸ್ತಕದಲ್ಲಿರುವ ನಕ್ಷತ್ರ, ಗ್ರಹ, ಮುಂತಾದ ವುಗಳ ಅವಲೋಕನ ಮಂಜು, ಇಬ್ಬನಿ ಮತ್ತು ಆಣಿಕಲ್ಲುಗಳ ಘಟನೆ. ಮಳೆಯನ್ನೂ ಹವೆಯ ಉಷ್ಣತೆಯನ್ನೂ ಅಳೆಯುವದು. ಆಯಾ ಸ್ಥಳದಲ್ಲಿರುವ ಬಂಡೆಗಳನ್ನೂ ನೆಲಗಳನ್ನೂ ನಿರೀಕ್ಷಿಸುವದು.