-೩೪-
ಹವೆಯನ್ನೇ ಒಳಗೆ ತೆಗೆದುಕೊಳ್ಳುತ್ತೇನೆ,ನನ್ನ ಎದೆಯ ಮೇಲೆ ಕೈಯನ್ನು ಇಟ್ಟುಕೊಂಡು ದೀರ್ಘಶ್ವಾಸವನ್ನು ತೆಗೆದುಕೊಂಡರೆ,ನಮ್ಮ ಭಾಯಿಯೊಳಗೆ ಅಥವಾ ಮೂಗಿನ ಹೊಳ್ಳೆಗಳಲ್ಲಿ ಹವೆಯು ನುಗ್ಗುವದು ತೋರಿಬರುವದು. ನಮ್ಮ ಎದೆಯು ಸಹ ಇದರಿಂದ ತುಂಬಿ ದೊಡ್ಡದಾಗುವದು. *ಹವೆಯು ಇಲ್ಲದೆ ಸ್ಥಳದಲ್ಲಿ ಯಾವ ಪ್ರಾಣಿಯೂ ಬದುಕುವದಿಲ್ಲ.
ಅದೃಶ್ಯವಾದ ಮತ್ತು ವಾಸನೆಯಿಲ್ಲದ ಈ ಹವೆಯು ನಮಗೆ ಗೋಚರವಾಗುವುದು ಹೇಗೆ? ನನ್ನ ಕೈಗಳನ್ನು ವೇಗದಿಂದ ಹಿಂದಕ್ಕೂ ಮುಂದಕೂ ಬೀಸಿದರೆ ಈ ಹವೆಯು ನಮಗೆ ಸೋಕುವಂತೆ ತೋರಿಬರುವದು, ಒಂದು ಬೀಸಣಿಗೆಯಿಂದ ಬೀಸಿದರೆ ಹವೆಯು ಚಲಿಸಿ ನನ್ನ ಮೈಗೆ ಸೋಕುವದು. ಮೇಜಿನ ಮೇಲಾಗಲಿ ನೆಲದ ಮೇಲಾಗಲಿ ಕೆಲವು ಕಾಗದದ ಚೂರುಗಳನ್ನು ಹಾಕಿ ಒಂದು ಬೀಸಣಿಗೆಯಿಂದ ಬೀಸಿದರೆ ಅಲ್ಲುಂಟಾಗುವ ಹವೆಯ ಚಲನೆಯಿಂದ ಕಾಗದದ ಚೂರುಗಳು ಚೆದರಿ ಹೋಗುತ್ತವೆ. ಈ ನಿದರ್ಶನಗಳಿಂದ ನಾವು ಗ್ರಹಿಸಬಹುದಾದದ್ದೇನಂದರೆ:- ನಮ್ಮ ಸುತ್ತಲು ಹವೆಯೆಂಬ ಪದಾರ್ಥವು ವ್ಯಾಪಿಸಿರುವ ದೆಂದು ಸಿದ್ಧ ಮಾಡಲು ಅದರಲ್ಲಿ ಚಲನೆಯನ್ನುಂಟುಮಾಡಬೇಕು.ನಾವು ಯಾವ ರೀತಿಯಲ್ಲಾದರೂ ಹವೆಯನ್ನು ಚಲಿಸುವಂತೆ ಮಾಡಿದರೆ, ಅದು ನಮ್ಮ ಮೈಗೆ ಸೋಕುವದರಿಂದ ಅದು ನಮ್ಮ ಸುತ್ತಲು ಇರುವದೆಂದು ತಿಳಿಯುಬಹುದು.ಹವೆಯು ಚಲಿಸಿದರೆ ಅದನ್ನೇ ಗಾಳಿಯೆನ್ನುತ್ತೇವೆ.
ಮೇಲೆ ಹೇಳಿದ ನಿದರ್ಶನಗಳಲ್ಲಿ ಹವೆಯ ಚಲನೆಯು ಕೃತ್ರಿಮರೀತಿಯಲ್ಲಂವಾದದ್ದು. ಹವೆಯಲ್ಲಿ ಚಲನೆಯು ತಾನಾಗಿ ಹುಟ್ಟುವದರಿಂದ ಗಾಳಿಯು ಬೀಸುವದು ನಮ್ಮ ಅನುಭವಕ್ಕೆ ಬರುವ ಸಂಗತಿಯಾಗಿರುತ್ತದೆ. ಗಾಳಿಯು ಬೀಸುವದರಿಂದ ಗಿಡಗಳ ಎಲೆಗಳು ಹಾಗೆಯೇ ಧ್ವಜಪಟಗಳು ಅಲ್ಲಾಡುತ್ತವೆ. ಒಂದೊಂದು ಸಾರೆ ಗಾಳಿಯು ಬೀಸುತ್ತಿರುವಾಗ ಶಬ್ದವೂ ಕೇಳಿಸುವದುಂಟು.
ಗಾಳಿಯ ವೇಗವು ಒಂದೊಂದು ವೇಳೆಯಲ್ಲಿ ಒಂದೊಂದು ವಿಧವಾಗಿರು ತದೆ,ಕೆಲವು ವೇಳೆಗಳಲ್ಲಿ ಗಾಳಿಯು ಸೌಮ್ಯವಾಗಿದ್ದು ನನ್ನ ಮೈಗೆ ಸುಖಕರವಾಗಿರುತ್ತದೆ, ಕೆಲವು ವೇಳೆಗಳಲ್ಲಿ ಗಾಳಿಯು ಸ್ವಲ್ಪ ಹೆಚ್ಚಿನ ವೇಗದಿಂದ ಬೀಸುವೆ
* ಶಿಕ್ಷಕನು ಹುಡುಗರಿಗೆ ದೀರ್ಘಶ್ವಾಸವನ್ನು ಹೇಗೆ ತೆಗೆದುಕೊಳ್ಳಬೇಕೆಂಬುದನ್ನು ತೋರಿಸಿ ಕೊಡಬೇಕು. ಅನಂತರ ಅವರು ಆ ಪ್ರಕಾರ ಎರಡು ಮೂರು ಸಾರೆ ಮಾಡಿದರೆ ಸಾಕು