ಈ ಪುಟವನ್ನು ಪ್ರಕಟಿಸಲಾಗಿದೆ

-೩೯-

ದರಿಂದ ದೀಪವು ಆರಿಹೋಗುವದನ್ನು ನಾವು ನೋಡುತ್ತೇವೆ. ಅದರ ವೇಗವು ಇನ್ನೂ ಹೆಚ್ಚಿದರೆ ಅದು ಎತ್ತರವಾದ ಮರಗಿಡಗಳನ್ನು ಬೇರು ಸಹಿತ ಕಿತ್ತುಹಾಕ ಬಹುದು. ಸಮುದ್ರದಲ್ಲುಂಟಾಗುವ ದೊಡ ದೊಡ್ಡ ತೆರೆಗಳು (ಅಲೆಗಳು) ಗಾಳಿಯ ಬಲದಿಂದಲೇ ಹುಟ್ಟುತ್ತವೆ. ಗಾಳಿಯ ವೇಗವು ಬಹಳ ಹೆಚ್ಚಾದರೆ, ಅದರ ರಭಸದಿಂದ ಸಮುದ್ರದಲ್ಲಿ ಸಂಚರಿಸುವ ಹಡಗುಗಳು ಯಾವದಾದರೊಂದು ಬಂಡೆಗೆ ಬಡಿದು ಮುಳುಗಬಹುದು.

ಗಾಳಿಯು ಒಂದೊಂದು ಕಾಲದಲ್ಲಿ ಒಂದೊಂದು ದಿಕ್ಕಿನಿಂದ ಬೀಸುತ್ತಿರು ಇದೆ. ಒಂದು ಕಾಲದಲ್ಲಿ ನಾವು ನಡೆದುಹೋಗುವ ದಿಕ್ಕನ್ನೇ ಹಿಡಿದು ಬೀಸುತ್ತಾ ನಮಗೆ ಅನುಕೂಲವಾಗಿರುತ್ತದೆ. ಈ ವಿಚಾರವು ನಮಗಿಂತ ನಾವಿಕರಿಗೆ ಹೆಚ್ಚು ಮಹತ್ವವುಳ್ಳದ್ದು.

ಹುಡುಗರು ಹವೆಯ ನಿರೀಕ್ಷಣೆಯನ್ನು ಮಾಡುವಾಗ ಗಾಳಿಯ ಗತಿಯಲ್ಲಿ ಗೋಚರವಾಗುವ ಸುಲಭ ವಿಷಯಗಳಿಂದ ಪ್ರಾರಂಭಿಸಬಹುದು.ಅವರು ಕೆಲವು ದಿನಗಳ ಹಗಲಲ್ಲಿ ಮೂರು ನಾಲ್ಕು ಸಾರೆ ಶಾಲೆಯ ಹೊರಗೆ ಬಂದು ಗಾಳಿಯ ಸಂಬಂಧವಾದ ಈ ಎರಡು ಸಂಗತಿಗಳನ್ನು ಗೊತ್ತು ಮಾಡಬೇಕುಃ (೧)ಗಾಳಿಯು ಯಾವ ದಿಕ್ಕಿನಿಂದ ಯಾವ ದಿಕ್ಕಿಗೆ ಬೀಸುತ್ತದೆ? (೨) ಬೇರೆ ಬೇರೆ ಹೊತ್ತಿನಲ್ಲಿ ಅದರ ವೇಗವು ಎಷ್ಟಿರುವದು?

ಗಾಳಿಯು ಬೀಸುವ ದಿಕ್ಕು ಕಾಲಕಾಲಕ್ಕೂ ವ್ಯತ್ಯಾಸವಾಗುತ್ತಿರುವದು, ಕೆಲವು ಪ್ರದೇಶಗಳಲ್ಲಿ ಒಂದೇ ದಿನದ ಬೇರೆ ಬೇರೆ ವೇಳೆಗಳಲ್ಲಿ ಅದು ಬೇರೆ ಬೇರೆ ದಿಕ್ಕಿನಿಂದ ಬೀಸುವದುಂಟು. ನಮ್ಮ ಪ್ರಾಂತದಲ್ಲಿ ಅದರ ಪ್ರವಾಹವು ೩,೪ ತಿಂಗಳವರೆಗೂ ಒಂದೇ ವಿಧವಾಗಿರುದು. ಆದ್ದರಿಂದ ಹುಡುಗರು ಒಂದೊಂದು ಋತುವಿನಲ್ಲಿ ಕೆಲವು ದಿನಗಳು ತಪ್ಪದೆ ಗಾಳಿಯ ದಿಕ್ಕನ್ನು ಗೊತ್ತು ಮಾಡಿ ಅದನ್ನು ಬರೆದಿಡಬೇಕು ಗಾಳಿಯು ಬೀಸುವ ದಿಕ್ಕನ್ನು ಗೊತ್ತು ಮಾಡುವದು ಕಷ್ಟವಾದ ವಿಷಯವಲ್ಲ. ಮರಗಿಡಗಳ ಎಲೆಗಳ ಮತ್ತು ಧ್ವಜಪಟಗಳ ಚಲನೆಯಿಂದಲೂ ಹೊಗೆಯ ಮತ್ತು ಮೋಡಗಳ ಚಲನೆಯಿಂದಲೂ ಗಾಳಿಯ ದಿಕ್ಕನ್ನು ತಿಳಿಯಬಹುದು. ಅಥವಾ ಒಂದು ಬೈಲಿನಲ್ಲಿ ಬಂದು ನಿಂತು ಒಂದು ಸಣ್ಣ ವಸ್ತ್ರವನ್ನು ಅದರ ಒಂದು ತುದಿಯಿಂದ ಹಿಡಿದರೆ, ಗಾಳಿಯು ಆ ವಸ್ತ್ರವನ್ನು ಯಾವ ದಿಕ್ಕಿನ ಕಡೆಗೆ ನೂಕುವದೆಂಬದನ್ನು ನೋಡಿ ಗಾಳಿಯು ಬೀಸುವ ದಿಕ್ಕನ್ನು