ಈ ಪುಟವನ್ನು ಪ್ರಕಟಿಸಲಾಗಿದೆ

-೪೦-


ತಿಳಿಯಬಹುದು. ಹಾಗೆಯೇ ಕಾಗದದ ಸಣ್ಣ ಸಣ್ಣ ಚೂರುಗಳನ್ನು ಗಾಳಿಯಲ್ಲಿ ಬಿಟ್ಟರೆ ಅವು ತೇಲಾಡುತ್ತಾ ಗಾಳಿಯು ಬೀಸುವ ದಿಕ್ಕಿನಲ್ಲೇ ಹೋಗುವವು.

ಹೊಗೆ ಅಥವಾ ವಸ್ತ್ರವು ಪೂರ್ವದ ಅಥವಾ ಈಶಾನದ ಕಡೆಗೆ ಹೋದರೆ ಗಾಳಿಯು ಪಶ್ಚಿಮದಿಂದ ಅಥವಾ ನೈರುತ್ಯದಿಂದ ಬೀಸುತ್ತಿರುವದೆಂದು ತಿಳಿಯಬಹುದು.

ಗಾಳಿಯ ದಿಕ್ಕನ್ನು ಗೊತ್ತು ಮಾಡಲು ಒಂದು ಸಾಧನವನ್ನು ಏರ್ಪಡಿಸಬ ಹುದು.ಗಾಳಿಯ ಪ್ರವಾಹಕ್ಕೆ ತಡೆಯಿಲ್ಲದೆ ಒಂದು ಎತ್ತರವಾದ ಪ್ರದೇಶದಲ್ಲಿ ಸುಮಾರು ನಾಲ್ಕು ಅಡಿಉದ್ದವಿರುವ ಒಂದು ಕಡ್ಡಿಯನ್ನು ಲಂಬವಾಗಿ ನೆಡಬೇಕು ಇದರ ಮೇಲ್ಬಾಗದಲ್ಲಿ ಒಂದು ಅಡಿಯಷ್ಟು ಬಿಟ್ಟು ಎರಡು ಕಡ್ಡಿಗಳನ್ನು ಒಂದಕ್ಕೊಂದು ಅಡ್ಡವಾಗಿಟ್ಟು ನಾಲ್ಕು ದಿಕ್ಕುಗಳನ್ನು ಸರಿಯಾಗಿ ತೋರಿಸುವಂತೆ ನಿಲ್ಲಿಸಬೇಕು. ಅನಂತರ ಪಕ್ಷಿಯ ಗರಿಯ ಅಥವಾ ಬಾಣದ ಆಕಾರದ ಒಂದು ಕಡ್ಡಿಯನ್ನು ಮಾಡಿ ಅದರಲ್ಲಿ ಒಂದು ತೂತನ್ನು ಕೊರೆದು,ಸಲಾಕಿಯ ತುದಿಯಲ್ಲಿ ಗಾಳಿಯ ಸ್ವಲ್ಪ ಚಲನೆಯಿಂದಲೂ ಸುತ್ತುವಂತೆ ಇಡ ಬೇಕು. ಬಾಣಕ್ಕೆ ಬದಲಾಗಿ ದಪ್ಪವಾದ ಕಾಗದದಿಂದ ಒಂದು ಪಕ್ಷಿಯ ಆಕೃತಿಯನ್ನು ರಚಿಸಿ ಅದರಲ್ಲಿ ತೂತನ್ನುಮಾಡಿ ಸಲಾಕಿಯ ತುದಿಯಲ್ಲಿಡಬಹುದು. ಹುಡುಗರು ಯಾವ ವಿಧದಲ್ಲಾದರೂ ಗಾಳಿಯ ದಿಕ್ಕನ್ನು ಕ್ರಮವಾಗಿ ನಿರೀಕ್ಷಿಸಿ ಯಾವ ಯಾವ ಋತುವಿನಲ್ಲಿ ಯಾವ ಯಾವ ದಿಕ್ಕಿನಿಂದ ಗಾಳಿಯು ಬೀಸುವದೆಂಬುವದನ್ನು ತಿಳಿಯಬೇಕು.

(ಬ) ಗಾಳಿಯ ವೇಗವು ಯಾವಾಗಲೂ ಸಮವಾಗಿರುವದಿಲ್ಲ. ಬೆಳಿಗ್ಗೆ ಶಾಂತವಾಗಿರುವ ಅಥವಾ ಸ್ವಲ್ಪ ವೇಗದಿಂದ ಬೀಸುವ ಗಾಳಿಯು ಮಧ್ಯಾಹ್ನಕ್ಕೆ ವೇಗದಲ್ಲಿ ಹೆಚ್ಚಿ ಬಿರುಗಾಳಿಯಾಗುವದುಂಟು, ಗಾಳಿಯ ವೇಗವು ಹೆಚ್ಚಾಗಿರುತ್ತದೆ ಅಥವಾ ಕಡಿಮೆಯಾಗಿರುತ್ತದೆ ಎಂಬುದನ್ನು ಆಕಾಶದಲ್ಲಿ ಚಲಿಸುವ ಮೋಡಗಳನ್ನು ನೋಡಿ ಸ್ಕೂಲಮಾನದಿಂದ ತಿಳಿಯಬಹುದು. ಗಾಳಿಯ ವೇಗವನ್ನು ಗೊತ್ತು ಮಾಡುವದು ಸುಲಭವಾದ ವಿಷಯವಲ್ಲ. ಇದನ್ನು ಸರಿಯಾಗಿ ಗೊತ್ತು ಮಾಡಬೇಕಾದರೆ ಯಂತ್ರಗಳ ಸಹಾಯವು ಬೇಕಾಗುವದು. ಆದರೆ ನಮ್ಮ ಅನುಭವದಿಂದ ಅದನ್ನು ಸಾ