-೫೧-
ಒಂದು ದಿನದ ಉಷ್ಣಮಾನದ ಪರಮಾವಧಿಯನ್ನೂ ಕನಿಷ್ಟಾವಧಿಯನ್ನೂ ಗೊತ್ತುಮಾಡುವದು ಮಾತ್ರವಲ್ಲದೆ ದಿನದ ಯಾವ ಯಾವ ವೇಳೆಗಳಲ್ಲಿ ಉಷ್ಣವೂ ಶೀತವೂ ಹೆಚ್ಚಾಗಿರುವವೆಂಬದನ್ನು ಹುಡುಗರು ಅರಿಯಬೇಕು. ಅಂತರಿಕ್ಷದ ಪರಿಸ್ಥಿತಿಯಲ್ಲಿ ಯಾವ ಹೆಚ್ಚುಕಡಿಮೆ ಇಲ್ಲದಿದ್ದರೆ, ಹಗಲಲ್ಲಿ ಒಂದರಿಂದ ಎರಡು ಘಂಟೆಯವರೆಗೆ ಹೆಚ್ಚಾದ ಸೆಕೆಯೂ ಸೂರ್ಯೋದಯಕ್ಕೆ ಮುಂಚೆ ಸುಮಾರು ನಾಲ್ಕು ಘಂಟೆಗೆ ಹೆಚ್ಚಾದ ಚಳಿಯೂ ಇರುತ್ತದೆ.
ಉಷ್ಣಮಾನದ ಸರಾಸರಿ ಅವಧಿ
ಒಬ್ಬ ಮನುಷ್ಯನು ಕೂಲಿಕೆಲಸದಿಂದ ಒಂದು ದಿನ ೮ ಆಣೆಗಳನ್ನೂ ಎರಡನೇ ದಿನ ೬ ಆಣೆಗಳನ್ನೂ ಮೂರನೇ ದಿನ ೯ ಆಣೆಗಳನ್ನೂ ನಾಲ್ಕನೇ ದಿನ ೭ ಆಣೆಗಳನ್ನೂ ಸಂಪಾದಿಸಿದರೆ, ಅವನು ದಿನ ಒಂದಕ್ಕೆ ೭|| ಆಣೆಗಳಂತೆ ಸಂಪಾದಿಸಿದ ಹಾಗಾಯಿತು. ಇದನ್ನೇ ಅವನ ನಾಲ್ಕು ದಿನಗಳ ಸರಾಸರಿ ಸಂಪಾದನೆಯೆಂದು ನಾವು ಹೇಳುತ್ತೇವೆ. ಒಂದು ಉಗಿಬಂಡಿಯ ಮೊದಲನೇ ಘಂಟೆಯಲ್ಲಿ ೧೫ ಮೈಲುಗಳ ವೇಗದಿಂದಲೂ ಎರಡನೇ ಘಂಟೆಯಲ್ಲಿ ೨೦ ಮೈಲುಗಳ ವೇಗದಿಂದಲೂ ಮೂರನೇ ಘಂಟೆಯಲ್ಲಿ ೨೫ ಮೈಲುಗಳ ವೇಗದಿಂದಲೂ ಓಡಿದರೆ, ಅದರ ಸರಾಸರಿ ವೇಗವು ಘಂಟೆಗೆ ೨೦ ಮೈಲುಗಳೆಂದು ಹೇಳಬಹುದು. ಇದೇ ರೀತಿಯಲ್ಲಿ ಉಷ್ಣಮಾಪಕಯಂತ್ರವನ್ನು ಘಂಟೆಗೊಂದು ಸಾರೆ ನೋಡುತಾ ೨೪ ಘಂಟೆಗಳ ಉಷ್ಣಮಾನವನ್ನು ಗುರ್ತುಮಾಡಿ ಈ ಅಂಶಗಳನ್ನು ಒಟ್ಟು ಗೂಡಿಸಿ ೨೪ ರಿಂದ ಭಾಗಿಸಿದರೆ, ಆ ದಿನದ ಸರಾಸರಿ ಉಷ್ಣಮಾನವು ನಮಗೆ ತಿಳಿಯುವದು. ಹೀಗೆ ಘಂಟಿಗೊಂದು ಸಾರೆ ಉಷ್ಯಮಾಸಕಯಂತ್ರವನ್ನು ನೋಡುವದು ಸುಲಭವಾದ ಕೆಲಸವಲ್ಲ. ಇದಕ್ಕೆ ಬದಲಾಗಿ ಆಯಾ ದಿನದ ಉಷ್ಣಮಾನದ ಪರಮಾವಧಿಯನ್ನೂ ಕನಿಷ್ಠಾವಧಿಯನ್ನೂ ಒಟ್ಟು ಕೂಡಿಸಿ ಬಂದ ಸಂಖ್ಯೆಯ ಅರ್ಧವನ್ನು ತೆಗೆದುಕೊಂಡರೆ, ಅದು ಸ್ವಲ್ಪ ಹೆಚ್ಚು ಕಡಿಮೆ ಆ ದಿನದ ಸರಾಸರಿ ಉಷ್ಣಮಾನವಾಗುತ್ತದೆ. ಒಂದು ದಿನದ ಉಷ್ಣಮಾನದ ಪರಮಾವಧಿಯು ೮೮ ಡಿಗ್ರಿಗಳಿದ್ದು ಕನಿಷ್ಟಾವಧಿಯು ೭೬ ಡಿಗ್ರಿಗಳಿದ್ದರೆ, ಆ ದಿನದ ಸರಾಸರಿ ಉತ್ಥಮಾನವು ೮೨ ಡಿಗ್ರಿಗಳೆಂದು ಹೇಳಬಹುದು.