ಈ ಪುಟವನ್ನು ಪ್ರಕಟಿಸಲಾಗಿದೆ
- ೫೨ -
ಆಬರ್ಡೀನ ಪಟ್ಟಣದ ೧೯೦೬ನೇ ವರ್ಷದ ನವಂಬರ ತಿಂಗಳ ಮೊದ ಆರು ದಿನಗಳ ಉಷ್ಣಮಾನವು:
ತಾರೀಖು. | ಉಷ್ಣಮಾನದ ಪರಮಾವಧಿ. | ಉಷ್ಣಮಾನದ ಕನಿಷ್ಠಾವಧಿ. | ಸರಸರಿ ಉಷ್ಣಮಾನ. |
---|---|---|---|
ನವಂಬರ ೧ | ೫೨ ಡಿ. | ೪೮ ಡಿ. | ಎಷ್ಟು? |
೨ | ೫೧ ಡಿ. | ೪೮ ಡಿ. | ಸದರ |
೩ | ೫೧ ಡಿ. | ೪೮ ಡಿ. | ಸದರ |
೪ | ೫೧ ಡಿ. | ೪೭ ಡಿ. | ಸದರ |
೫ | ೫೦ ಡಿ. | ೪೦ ಡಿ. | ಸದರ |
೪೯ ಡಿ. | ೩೯ ಡಿ. | ಸದರ | |
ಒಂದೊಂದು ದಿನದ ಸರಾಸರಿ ಉಷ್ಣಮಾನವನ್ನು ತಿಳಿದಮೇಲೆ, ಆಯ ತಿಂಗಳ ಕಡೆಯಲ್ಲಿ ಇವುಗಳನ್ನೆಲ್ಲ ಒಟ್ಟು ಕೂಡಿಸಿರುವ ಸಂಖ್ಯೆಯನ್ನು ೩೦ ಅಥವ ೩೧ ರಿಂದ ಭಾಗಿಸಿದರೆ, ಆ ತಿಂಗಳ ಹವೆಯ ಸರಾಸರಿ ಉಷ್ಣ ಮಾನವು ತಿಳಿಯುವದು. ಹೀಗೆಯೇ ಒಂದು ವರ್ಷದ ೩೬೫ ದಿನಗಳ ಸರಾಸರಿ ಉಷ್ಣಮಾನಗಳನ ಕೂಡಿಸಿ ೩೬೫ ರಿಂದ ಭಾಗಿಸುವದರಿಂದ ಅಥವಾ ೧೨ ತಿಂಗಳ ಸರಾಸರಿ ಉಷ್ಣಮಾನಗಳನ್ನು ಕೂಡಿಸಿ ೧೨ ರಿಂದ ಭಾಗಿಸುವದರಿಂದ ಆ ವರ್ಷದ ಸರಾಸ ಉಷ್ಣಮಾನವನ್ನು ತೆಗೆಯಬಹುದು. ಇದೇ ರೀತಿಯಲ್ಲಿ ಒಂದು ಪ್ರದೇಶದ ೧ರಿಂದ ೧೨ ವರ್ಷಗಳ ಸರಾಸರಿಯನ್ನು ಕೂಡಿಸಿ ಆ ಪ್ರದೇಶದ ಹವೆಯ ಸರಾಸರಿ ಉಷ್ಣಮಾನವನ್ನು ತಿಳಿಯಬಹುದು. ಇಷ್ಟೇ ಅಲ್ಲದೆ ವರ್ಷದ ಆಯಾ ತಿಂಗಳ ಸರಾಸರಿಯನ್ನೂ ಗೊತ್ತು ಮಾಡಬಹುದು. ನಮ್ಮ ದೇಶದಲ್ಲಿ ಸರ್ಕಾರದ ಮುಖ್ಯ ಮುಖ್ಯವಾದ ಸ್ಥಳಗಳ ಹವೆಯ ಉಷ್ಣಮಾನವನ್ನು ಗೊತ್ತು ಮಾಡುರುತ್ತಾರೆ.