ಈ ಪುಟವನ್ನು ಪ್ರಕಟಿಸಲಾಗಿದೆ

-೫೫–

(೩)ನೀರು ನೆಲಕ್ಕಿಂತ ಸಾವಕಾಶವಾಗಿ ಕಾಯುತ್ತದೆ,ಮತ್ತು ಸಾವ ಕಾಶವಾಗಿ ತಂಪಾಗುತ್ತದೆ. ಬೇಸಿಗೆಯಲ್ಲಿ ನೆಲವು ಬೇಗ ಕಾಯುವದರಿಂದ ಅಲ್ಲಿಯ ಗಾಳಿಯು ನೀರಿನ ಮೇಲಿನ ಗಾಳಿಗಿಂತ ಹೆಚ್ಚು ಉಷ್ಣವುಳ್ಳದ್ದಾಗಿರುತ್ತದೆ. ಆದ್ದ ರಿಂದ ಸಮುದ್ರ ಅಥವಾ ಒಂದು ವಿಸ್ತಾರವಾದ ತಟಾಕದ ಸಮೀಪದಲ್ಲಿರುವ ಪ್ರದೇ ಶದ ಹವೆಯು ಭೂಮಧ್ಯ ಭಾಗಗಳ ಮೇಲಿನ ಹವೆಗಿಂತ ತಂಪಾಗಿರುತ್ತದೆ.

ಚಳಿಗಾಲಲ್ಲಿ ಭೂಮಿಯು ತಾನು ಧರಿಸಿರುವ ಉಷ್ಣವನ್ನು ತೀವ್ರವಾಗಿ ಹೊರಗಟ್ಟುವದರಿಂದ ನೆಲವು ಬೇಗ ಶೀತಲವಾಗುವದು. ನೀರು ತಾನು ಧರಿಸುವ ಉಪ್ಲವನ್ನು ಸಾವಕಾಶದಿಂದ ಬಿಡುವದರಿಂದ ಅದರ ಮೇಲಿನ ಹವೆಯು ಸ್ವಲ್ಪ ಸೆಕೆಯುಳ್ಳದ್ದಾಗಿಯೇ ಇರುವದು. ಆದ್ದರಿಂದ ಚಳಿಗಾಲದಲ್ಲಿ ಸಮುದ್ರದ ಸವಿಾಪದಲ್ಲಿರುವ ಪ್ರದೇಶಗಳ ಹವೆಯು ಅದೇ ಅಕ್ಷಾಂಶದಲ್ಲಿ ಸಮುದ್ರದಿಂದ ದೂರದಲ್ಲಿರುವ ಪ್ರದೇಶಗಳ ಹವೆಗಿಂತ ಕಡಿಮೆ ಶೀತವುಳ್ಳದ್ದಾಗಿರುತ್ತದೆ.]


ಒಂಭತ್ತನೇ ಅಧ್ಯಾಯ,

ಹವೆಯಲ್ಲಿರುವ ಉಗಿ ಮತ್ತುಅದರಕೆಲವುರೂಪ೦ತರಗಳು.

[ಸೂಚನೆ:- ಒಂದು ಪ್ರದೇಶದ ಹವೆಯಲ್ಲಿ ಉಗಿಯ ಅಂಶವು ಎಷ್ಟಿರುತದೆಂಬುವದನ್ನು ಗೊತ್ತು ಮಾಡುವದಕ್ಕೆ ರುಕ್ಷ ಮತ್ತು ಆರ್ದ್ರ ಗೋಲಗಳಿರುವ ಉಷ್ಣ ಮಾಪಕಯಂತ್ರವು ಬೇಕಾಗುವದು. ಇದನ್ನು ಶಾಲೆಗಳಲ್ಲಿ ತರಿಸಿಟ್ಟಿರಬೇಕು.]

ನಮ್ಮ ಸುತ್ತಲು ಎಲ್ಲಾ ಕಡೆಗಳಲ್ಲಿ ವ್ಯಾಪಿಸಿರುವ ಹವೆಯು ಅವಿಭಕ್ತವಾದ ಒಂದೇ ವಸ್ತುವಾಗಿರದೆ ಮುಖ್ಯವಾಗಿ ಎರಡು ವಾಯುಗಳ ಮಿಶ್ರಣವೆಂದು ಸಿದ್ದವಾಗಿರುತ್ತದೆ. ಇದರಲ್ಲಿ ಆಮ್ಲಜನಕವೆಂದೂ (oxygen ಆಕ್ಸಿಜನ್) ಸಾರಜನಕವೆಂದೂ (nitrogen ನೈಟ್ರೋಜನ್)ಎರಡು ಬೇರೆ ಬೇರೆ ವಾಯುಗಳು ಸೇರಿರುತ್ತವೆ. ಇವುಗಳಲ್ಲಿ ಆಮ್ಲಜನಕವೇ ನಮ್ಮ ಪ್ರಾಣಾಧಾರವಾಗಿಯೂ ಬೆಂಕಿ ಉರಿ ಯುವದಕ್ಕೆ ಸಹಾಯಕವಾಗಿಯೂ ಇರುತ್ತದೆ. ಸಾರಜನಕ ವಾಯುವಿಗೆ ಈ ಗುಣಗಳಿಲ್ಲದೆ ಅದು ಒಂದು ಜಡತರವಾದ ವಾಯುವಾಗಿರುತ್ತದೆ. ಸಾಧಾರಣ ಹವೆಯಲ್ಲಿ ಸಾರಜನಕವು ನಾಲ್ಕುಪಾಲಾಗಿಯೂ ಆಮ್ಲ ಜನಕವು ಒಂದು ಪಾಲಾಗಿಯೂ