ಈ ಪುಟವನ್ನು ಪ್ರಕಟಿಸಲಾಗಿದೆ

-೫೬-

ಸೇರಿರುತ್ತವೆ. ಬಹಳ ಬಿಸಿಯಾದ ನೀರನ್ನು ಸ್ನಾನಕ್ಕೆ ಸಹನವಾಗುವಂತೆ ಮಾಡುವದಕ್ಕೆ ಹೇಗೆ ಅದಕ್ಕೆ ತಣ್ಣೀರು ಬೆರೆಯಿಸಲ್ಪಡುವದೋ, ಹಾಗೆಯೇ ಬಹಳ ತೀಕ್ಷವಾದ ಆಮ್ಲಜನಕವು ನಮ್ಮ ಉಸುರಾಟಕ್ಕೆ ಯೋಗ್ಯವಾಗುವಂತೆ ಮಾಡುವದಕ್ಕೆ ಅದರೊಡನೆ ಸಾರಜನಕವು ಕೂಡಿಸಲ್ಪಟ್ಟಿರುತ್ತದೆ.

ಹವೆಯಲ್ಲಿ ಈ ಎರಡು ವಾಯುಗಳು ಮಾತ್ರವಲ್ಲದೆ ನೀರಿನ ಉಗಿಯು ಸೇರಿರುತ್ತದೆ. ಐದನೇ ಅಧ್ಯಾಯದಲ್ಲಿ ಮೋಡಗಳ ಉತ್ಪತ್ತಿಯನ್ನು ಹೇಳುವಾಗ ಈ ಉಗಿಯನ್ನು ಕುರಿತು ಸ್ವಲ್ಪ ವಿಚಾರಮಾಡಿರುತ್ತೇವೆ. ಭೂಮಿಯ ಮೇಲಿರುವ ಸಮುದ್ರ, ನದಿ, ತಟಾಕ ಮುಂತಾದ ಜಲಪ್ರದೇಶಗಳ ನೀರು ಸೂರ್ಯನ ಕಿರಣಗಳಿಂದ ಉಗಿಯಾಗಿ ಮೇಲಕ್ಕೇರಿ ಹವೆಯಲ್ಲಿ ಸೇರುತ್ತಿರುವದು. ಹೀಗೆ ಪ್ರತಿದಿನವೂ ಸಾಗುತ್ತಿರುವದರಿಂದ ಹವೆಯಲ್ಲಿ ಉಗಿಯು ಯಾವಾಗಲೂ ಹೆಚ್ಚಾಗಿ ಅಥವಾ ಕಡಿಮೆಯಾಗಿ ಇದ್ದೆ ಇರುವದು ಈ ಉಗಿಯು ತಣಿದು ರೂಪಾಂತರವನ್ನು ಹೊಂದುವವರೆಗೂ ನಮ್ಮ ಕಣ್ಣಿಗೆ ಗೋಚರವಾಗುವದಿಲ್ಲ.

ಉಗಿಯು ಭೂಮಿಗೆ ಸಮೀಪವಾದ ಹವೆಯಲ್ಲಿ ಹೆಚ್ಚಾಗಿದ್ದು ಮೇಲೆಮೇಲೆ ಹೋದಹಾಗೆ ಕಡಿಮೆಯಾಗುತ್ತಾ ಹೋಗುವದು. ಉಗಿಯು ಭೂಮಿಯ ಸುತ್ತಲು ವ್ಯಾಪಿಸಿರುವದರಿಂದ, ಭೂಮಿಗೆ ಒಂದು ಹೊದಿಕೆಯಂತೆ ಇರುತ್ತದೆ. ಈ ಉಗಿಯ ಹೊದಿಕೆಯಿಲ್ಲದಿದ್ದರೆ, ಭೂಮಿಯು ಸೂರ್ಯನಿಂದ ಹಗಲಲ್ಲಿ ಒಳಗೊಂಡ ಎಲ್ಲಾ ಉಷ್ಣವನ್ನು ರಾತ್ರಿಯಲ್ಲಿ ಬಹಳ ಬೇಗನೇ ಹೊರಗೆಬಿಡುತ್ತಿತ್ತು. ಮತ್ತು ಬೆಳಗಾಗುವದರೊಳಗೆ ನೆಲದ ಮೇಲಿರುವ ಎಲ್ಲಾ ನೀರು ಅತಿಶಯ ಶೀತದಿಂದ ಗಡ್ಡೆ ಕಟ್ಟುತ್ತಿತ್ತು.

ಹವೆಯಲ್ಲಿ ಉಗಿಯ ಅಂಶವು ಯಾವ ಯಾವ ಕಾಲಗಳಲ್ಲಿ ಎಷ್ಟಿರುತ್ತದೆಂಬುವದನ್ನು ತಿಳಿಸುವದಕ್ಕೆ ಒಂದು ಸಾಧನವು ಏರ್ಪಟ್ಟಿರುತ್ತದೆ. ಇದನ್ನು ಆರ್ದ್ರ ಶಾಸೂಚಕ ಯಂತ್ರವೆಂದು ಹೇಳಬಹುದು. ಈ ಯಂತ್ರದಲ್ಲಿ ಸಾಧಾರಣ ಉಷ್ಣ ಮಾಪಕಯಂತ್ರದಲ್ಲಿರುವ ಗೋಲದಂಥ ಎರಡು ಗೋಲಗಳಿರುತ್ತವೆ. ಈ ಗೋಲಗಳಲ್ಲಿ ಒಂದು ಗೋಲದ ಸುತ್ತಲು ತೆಳುವಾದ ಒಂದು ಬಟ್ಟೆಯನ್ನು ಸುತ್ತಿ, ಅದು ಯಾವಾಗಲೂ ಒದ್ದೆಯಾಗಿರುವಂತೆ ನೀರು ತುಂಬಿದ ಒಂದು ಗಾಜಿನ ಕುಡಿಕೆಯಿಂದ (ದೌತಿಯಿಂದ) ಒಂದು ನೂಲಿನ ಬತ್ತಿಯು ಅದಕ್ಕೆ ಕೂಡಿಸಲ್ಪಟ್ಟರು