ಈ ಪುಟವನ್ನು ಪ್ರಕಟಿಸಲಾಗಿದೆ

- ೫೮ -

ತಾರೀಖು ರುಕ್ಷಗೋಲ ಅರ್ದ್ರಗೋಲ
೧-೨-೧೯೧೭ ೭೫ ಡಿ ೬೬ ಡಿ
೧೧-೨-೧೯೧೭ ೭೯ ೬೯
೨೧-೬-೧೯೧೭ ೭೭ ೭೩
೨೮-೬-೧೯೧೭ ೭೪ ೭೨

ಈ ಪಟ್ಟಿಯಲ್ಲಿ ಫೆಬ್ರವರಿ ತಿಂಗಳಲ್ಲಿ ರುಕ್ಷ ಮತ್ತು ಆರ್ದ್ರ ಗೋಲಗಳ ಉಷ್ಣಮಾನಗಳ ಅಂತರವು ಹೆಚ್ಚಾಗಿದ್ದು ಜೂನ ತಿಂಗಳಲ್ಲಿ ಈ ಅಂತರವು ಕಡಿಮೆಯಾಗಿರುತ್ತದೆ. ಅಂದರೆ ಫೆಬ್ರುವರಿ ತಿಂಗಳಲ್ಲಿ ಆರ್ದ್ರ ಗೋಲದಿಂದ ಹೆಚ್ಚು ನೀರು ಉಗಿಯಾಗುತ್ತಾ ಹೆಚ್ಚು ಉಷ್ಣವನ್ನು ಉಪಯೋಗಿಸಿಕೊಂಡಿರುತ್ತದೆ. ಜೂನ ತಿಂಗಳಲ್ಲಿ ಆರ್ದ್ರ ಗೊಲದಿಂದ ಸ್ವಲ್ಪ ನೀರು ಉಗಿಯಾಗುವದರಿಂದ ಈ ಗೋಲದ ಪಾರಜವು ಬಹಳ ಕೆಳಗೆ ಇಳಿಯುವದಿಲ್ಲ.

ಬಾಷ್ಪಭವನದ ಕಾರ್ಯವು ತೀವ್ರವಾಗಿ ಸಾಗುತ್ತಿದ್ದರೆ ಹವೆಯಲ್ಲಿ ಹೆಚ್ಚು ಹೆಚ್ಚು ಉಗಿಯು ಸೇರಲು ಅವಕಾಶವಿರುತ್ತದೆ. ಹವೆಯಲ್ಲಿ ಉಷ್ಣವು ಹೆಚ್ಚಾಗಿದ್ದರೆ ಅದರಲ್ಲಿ ಉಗಿಯು ಹೆಚ್ಚಾಗಿ ಸೇರುತ್ತದೆಂಬುವದಕ್ಕೆ ಒಂದು ನಿದರ್ಶನವನ್ನು ತೋರಿಸಬಹುದು. ನಾವು ಶ್ವಾಸ ಬಿಡುವಾಗ ಉಚ್ಚ್ವಾಸ ವಾಯುವಿನಲ್ಲಿ ಉಗಿಯು ಇದ್ದೇ ಇರುತ್ತದೆ. ನಮ್ಮ ಸುತ್ತಲಿರುವ ಹವೆಯು ಬಹಳ ಬೆಚ್ಚಗಿದ್ದರೆ ಈ ಉಗಿಯು ಅದೃಶ್ಯವಾಗಿ ಹವೆಯೊಳಗೆ ಕೂಡಿಕೊಳ್ಳುತ್ತದೆ. ಆದರೆ ಚಳಿಗಾಲದಲ್ಲಿ ಹವೆಯು ಶೀತವಾಗಿರುವದರಿಂದ ನನ್ನ ಬಾಯಿಯಿಂದ ಉಗಿಯು ಹೊರಗೆ ಬಂದಕೂಡಲೆ ದೃಶ್ಯರೂಪಕ್ಕೆ ಬಂದು ನಮಗೆ ಗೋಚರವಾಗುವದು. ಬೇಸಿಗೆಯಲ್ಲಿ ಭಾಭವನವು ಹೆಚ್ಚಾಗಿ ಸಾಗುವದರಿಂದ ಕೆರೆ, ಕೊಳ್ಳ (ಹೊಂಡ) ಮೊದಲಾದ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ನೀರು ಕಡಿಮೆಯಾಗುತ್ತ ಬರುವದು. ಮಳೆಗಾಲದಲ್ಲಿ ಹವೆಯಲ್ಲಿ ಉಗಿಯು ಬಹಳ ಹೆಚ್ಚಾಗಿರುವದರಿಂದ ಬಾಷ್ಪಭವನವು ಬಹಳ ಸಾವಕಾಶದಿಂದ ಸಾಗುವದು, ಇಲ್ಲವೆ ನಿಂತು ಹೋಗುವದು. ಈ ಕಾರಣದಿಂದಲೇ ಮಳೆಗಾಲದಲ್ಲಿ ಒದ್ದೆ ಬಟ್ಟೆಗಳು ಬೇಗ ಆರುವದಿಲ್ಲ.