ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ೫೭ - ತದೆ. * ಈ ಗೋಲವು ಯಾವಾಗಲೂ ಒದ್ದೆಯಾಗಿರುವದರಿಂದ ಇದನ್ನು ಆದ್ರ್ರಗೋಲವೆಂದೂ ಮತ್ತೊಂದು ಗೋಲವನ್ನು ರುಕ್ಕಗೋಲವೆಂದೂ ಕರೆಯು ತೇವೆ. ಈ ಯಂತ್ರವನ್ನು ರಕ್ಷಾದ್ರ್ರಗೋಲಗಳುಳ್ಳ ಉಷ್ಣ ಮಾಪಕಯಂತ್ರವೆಂತ ಲೂ ಕರೆಯುವದುಂಟು. ಈ ಎರಡು ಗೋಲಗಳ ಕೊಳವೆಗಳ ಪಾರ್ಶ್ವಗಳಲ್ಲಿ ಡಿಗ್ರಿ -ಗಳು ( ಅಂಶಗಳು ) ಗುರ್ತುಮಾಡಲ್ಪಟ್ಟಿರುತ್ತವೆ, ರುಕ್ಷಗೋಲವು ಸಾಧಾರಣ ಉಷ್ಣಮಾಪಕಯಂತ್ರದಂತೆ ಸುತ್ತುಮುತ್ತಲಿ ರುವ ಹವೆಯ ಉಷ್ಣಮಾನವನ್ನು ತೋರಿಸುತ್ತದೆ. ಆದ್ರ್ರಗೊಲದ ಸುತ್ತಲಿರುವ ಒದ್ದೆ ಬಟ್ಟೆಯಿಂದ ನೀರು ಉಗಿಯಾಗಿ ಹವೆಯಲ್ಲಿ ಸೇರುತ್ತಲಿರುತ್ತದೆ. ಈ ಬಟೆ ಯಲ್ಲಿರುವ ನೀರು ಹೋದಹಾಗೆಲ್ಲ ಬತ್ತಿಯಿಂದ ನೀರು ಬರುತ್ತಿರುವದರಿಂದ ಉಗಿ ಯಾಗುವ ಕಾರ್ಯವು ಅಥವಾ ಬಾಪ್ಪಭವನವು ನಿರಂತರವಾಗಿ ನಡೆಯುತ್ತಿರು ತದೆ. ನೀರು ಉಗಿಯಾಗಬೇಕಾದರೆ ಉಷ್ಣವು ಅವಶ್ಯ. ಆದ್ರ್ರಗೊಲದ ಸುತ್ತಲಿ ರುವ ಬಟ್ಟೆಯಿಂದ ನೀರು ಉಗಿಯಾಗುವಾಗ ಉಷ್ಣವನ್ನು ಉಪಯೋಗಿಸಿಕೊಳ್ಳು ವದರಿಂದ ಈ ಗೋಲದ ಉಷ್ಣವು ಕಡಿಮೆಯಾಗುವದು. ಈ ಕಾರಣದಿಂದಲೇ ರುಕಗೊಲದ ಉಷ್ಣ ಪ್ರಮಾಣಕ್ಕಿಂತ ಆದ್ರ್ರಗೊಲದ ಉಷ್ಣ ಪ್ರಮಾಣವು ಕಡಿಮೆಯಾಗಿರುತ್ತದೆ, ಹವೆಯಲ್ಲಿ ಉಗಿಯ ಪ್ರಮಾಣವು ಬಹಳ ಹೆಚ್ಚಾಗಿ ಆದ್ರ್ರ ಗೋಲದ ಬಟ್ಟೆಯಿಂದ ನೀರು ಉಗಿಯಾಗಿ ಹೋಗದ ವೇಳೆಗಳಲ್ಲಿ ಮಾತ್ರ ರುಕ್ಷ ಮತ್ತು ಆದ್ರ್ರಗೋಲಗಳ ಉಷ್ಣ ಪ್ರಮಾಣದಲ್ಲಿ ವ್ಯತ್ಯಾಸವಿಲ್ಲದೆ ಇರಬಹುದೆ ಹೊರತು, ಉಳಿದ ಕಾಲಗಳಲ್ಲಿ ಈ ಎರಡು ಗೋಲಗಳ ಉಷ್ಣಮಾನಗಳಲ್ಲಿ ಅಂತ ರವು ಇದ್ದೇ ಇರುವದು. ಈ ಉಷ್ಣಮಾಪಕ ಯಂತ್ರವನ್ನು ಕ್ರಮವಾಗಿ ನಿರೀಕ್ಷಿಸುತ್ತಾ ಅದರ ಎರಡೂ ಗೋಲಗಳ ಉಷ್ಣಮಾನಗಳನ್ನು ಗುರ್ತುಮಾಡುತ್ತಿರಬೇಕು, ಧಾರವಾಡ ಟ್ರೇನಿಂಗಕಾಲೇಜದಲ್ಲಿ ೧೯೧೭ ವರ್ಷದ ಬೇರೆಬೇರೆ ದಿನಗ ಇಲ್ಲಿ ಗುರ್ತು ಮಾಡಿದ್ದ ರುಕ ಮತ್ತು ಆದ್ರ್ರ ಗೋಲಗಳ ಉಷ್ಣಮಾನದ ಪಟ್ಟಿ:

  • ಗಾಜಿನ ಕುಡಿಕೆಯಲ್ಲಿ ನೀರು ಯಾವಾಗಲೂ ಇದ್ದೇಇರ ಬೇಕುಅದರಲ್ಲಿರುವ ನೀರು ಪೂರ್ಣವಾಗಿ ಉಗಿಯಾಗುವದಕ್ಕೆ ಮೊದಲೇ ಅದರಲ್ಲಿ ನೀರನ್ನು ತುಂಬಬೇಕು