ಈ ಪುಟವನ್ನು ಪ್ರಕಟಿಸಲಾಗಿದೆ

-೭೦-

ಮಾರ್ಚ ೨೨ನೇ ತಾರೀಖಿನಲ್ಲಿ ಸೂರ್ಯನು ವಿಷುವದ್ರೇಖೆಯ ಮೇಲೆ ಲಂಬವಾಗಿ (ನೆಟ್ಟಗಿರುವಂತೆ ಕಂಡುಬಂದು ಅಲ್ಲಿಂದ ಮುಂದಕ್ಕೆ ಅವನ ಮಾರ್ಗವು ಉತ್ತರಕ್ಕೆ ಸರಿಯುವಂತೆ ಕಾಣುವದೆಂದು ಹಿಂದೆ ತಿಳಿಸಿರುತ್ತದಷ್ಟೇ. ಮಾರ್ಚ ತಿಂಗಳ ಮುಂದಕ್ಕೆ ಸೂರ್ಯನ ಕಿರಣಗಳು ವಿಷುವದ್ರೇಖೆಗೆ ಸಮೀಪದಲ್ಲಿರುವ ಏಷಿಯದ ದಕ್ಷಿಣಭಾಗದಲ್ಲಿ ಲಂಬರೂಪದಿಂದ ಬೀಳುವವು. ಆದ್ದರಿಂದ ವಿಷುವದ್ರೇಖೆಯ ಸಮೀಪದಲ್ಲಿ ಉತ್ತರದಲ್ಲಿರುವ ನೆಲವೂ ನೀರೂ ವಿಶೇಷವಾಗಿ ಕಾಯುವವು. ನೀರಿಗಿಂತ ನೆಲವು ತೀವ್ರವಾಗಿ ಕಾಯುವದರಿಂದ ನೆಲದ ಮೇಲಿರುವ ಗಾಳಿಯು ಹೆಚ್ಚು ಕಾದು ವಿರಳವಾಗಿ ಮೇಲಕ್ಕೇರಿ ಆ ಪ್ರದೇಶದಲ್ಲಿ ನೀರಿನ ಮೇಲಿನ ಗಾಳಿಯು ಬಂದು ಸೇರುವದು. ಈ ಕಾರಣದಿಂದ ನಮ್ಮ ದೇಶದಲ್ಲಿ ಬೇಸಿಗೆಯು ಬೆಳೆಯುತ್ತಾ ಬಂದಂತೆ ಇಲ್ಲಿಯ ಹವೆಯು ಬಹಳ ಕಾಯುವದರಿಂದ ದಕ್ಷಿಣದಲ್ಲಿರುವ ಹಿಂದೀಮಹಾಸಾಗರದಿಂದ ಗಾಳಿಯು ನಮ್ಮ ಕಡೆಗೆ ಬೀಸುವದು. ಈ ಗಾಳಿಯು ಭೂಮಿಯ ಗತಿಯು ಹೆಚ್ಚಾಗಿರುವ ಪ್ರದೇಶದಿಂದ ಕಡಿಮೆ ಗತಿಯಿರುವ ಪ್ರದೇಶದ ಕಡೆಗೆ ಬೀಸುವದರಿಂದ ಪೂರ್ವಕ್ಕೆ ಒಲಿಯುವದು. ಆದ್ದರಿಂದ ಈ ಗಾಳಿಯು ನೈಋತ್ಯದಿಂದ ಬೀಸುವ ಹಾಗೆ ತೋರುತ್ತದೆ. ಇದನ್ನೇ ನೈಋತ್ಯದ ಮನ್ಸೂನ್ (South-West-Monsoon) ಎಂದು ಕರೆಯುತ್ತಾರೆ.

ಇದು ಸಮುದ್ರದ ಮೇಲಿಂದ ಬೀಸುವದರಿಂದ ಉಗಿಯನ್ನು ವಹಿಸಿಕೊಂಡು ಬರುವದು. ಈ ಗಾಳಿಯು ತರುವ ಉಗಿಯ ಅಣುಗಳು ನಮ್ಮ ದೇಶದ ಪಶ್ಚಿಮ ತೀರದಲ್ಲಿರುವ ಸಹ್ಯಾದ್ರಿ ಪರ್ವತಗಳ ಎತ್ತರವಾದ ಪ್ರದೇಶಗಳನ್ನು ಸೋಕಿದ ಕೂಡಲೆ ತಣಿಯುವದರಿಂದ ಪಶ್ಚಿಮತೀರದಲ್ಲಿ ಹೆಚ್ಚಾದ ಮಳೆಯಾಗುವದು. ಸಹ್ಯಾದ್ರಿ ಪರ್ವತಗಳನ್ನು ದಾಟಿ ಬರುವ ಉಗಿಯಿಂದ ಈ ಪರ್ವತಗಳ ಪೂರ್ವಪ್ರಾಂತಗಳಲ್ಲಿ ಮಳೆಯಾಗುವದು.

ಸಪ್ಟಂಬರ ೨೨ನೇ ತಾರೀಖಿನ ತರುವಾಯ ಸೂರ್ಯನ ಮಾರ್ಗವು, ವಿಷುವದ್ರೇಖೆಯಿಂದ ದಕ್ಷಿಣಕ್ಕೆ ಸರಿಯುವಂತೆ ಕಾಣುವದಷ್ಟೇ. ಅವನ ಕಿರಣಗಳು ವಿಷುವದ್ರೇಖೆಯ ಉತ್ತರಕ್ಕೆ ಇರುವ ಪ್ರದೇಶಗಳಲ್ಲಿ ಓರೆಯಾಗಿ ಬೀಳುವದರಿಂದ ಅಲ್ಲಿಯ ಭೂಮಿಯೆಲ್ಲ ದಕ್ಷಿಣಕ್ಕೆ ಇರುವ ಸಮುದ್ರಭಾಗಕ್ಕಿಂತ ಶೀತವಾಗಿರುವದು. ಹಿಂದೆ ತಿಳಿಸಿದ ಕ್ರಮಕ್ಕನುಸಾರವಾಗಿ ಶೀತವಾದ ನಮ್ಮ ದೇಶಗಳಿಂದ ಉಷ್ಣವುಳ್ಳ ಸಮುದ್ರ ಕಡೆಗೆ ಗಾಳಿಯು ಬೀಸುವದು. ಈ ಗಾಳಿಯು ಕಡಿಮೆ