ಈ ಪುಟವನ್ನು ಪ್ರಕಟಿಸಲಾಗಿದೆ

-೭೧-

ವೇಗದ ಗತಿಯುಳ್ಳ ಪ್ರದೇಶಗಳಿಂದ ಹೆಚ್ಚು ವೇಗದ ಗತಿಯುಳ್ಳ ಪ್ರದೇಶಗಳಿಗೆ ಬೀಸುವದರಿಂದ ಇದು ಪಶ್ಚಿಮದ ಕಡೆಗೆ ಒಲಿದು ಈಶಾನ್ಯದ ದಿಕ್ಕಿನಿಂದ ಬೀಸಿದಂತೆ ಕಾಣುವದು. ಈ ಗಾಳಿಯನ್ನೇ ಈಶಾನ್ಯಮನ್ಸೂನ್(North-East Monsoon) ಎಂದು ಕರೆಯುತ್ತಾರೆ.

ಇದು ನೆಲದ ಮೇಲಿಂದ ಬರುವದರಿಂದ ಇದರಲ್ಲಿ ನೀರಿನ ಉಗಿಯು ಬಹಳ ಕಡಿಮೆಯಾಗಿರುತ್ತದೆ. ಬಂಗಾಲದ ಉಪಸಾಗರದ ಮೇಲೆ ಬೀಸುವ ಗಾಳಿಯಲ್ಲಿ ಮಾತ್ರ ಉಗಿಯು ಸೇರಿರುವದರಿಂದ ಮದ್ರಾಸ ಅಧಿಪತ್ಯದ ಪೂರ್ವದಡದಲ್ಲಿ ಆಗ ಮಳೆಯು ಸುರಿಯುವದು.

ಮೇಲೆ ಹೇಳಿದ ಗಾಳಿಯ ಪ್ರವಾಹಗಳು ಮಾತ್ರವಲ್ಲದೆ ಬಿರುಗಾಳಿ, ಸುಳಿಗಾಳಿ ಎಂಬ ಅನಿಯಮಿತ ಗಾಳಿಗಳು ಬೀಸುತ್ತವೆ. ಯಾವದಾದರೂ ಕಾರಣದಿಂದ ಒಂದು ಪ್ರದೇಶದಲ್ಲಿ ಹವೆಯ ಒತ್ತುವಿಕೆಯು ಕಡಿಮೆಯಾದರೆ, ಅಲ್ಲಿ ನೆರೆಹೊರೆಯ ಪ್ರದೇಶಗಳ ಗಾಳಿಯು ಬಂದು ಸೇರುವದಷ್ಟೇ. ಈ ರೀತಿಯಲ್ಲಿ ಬರುವ ಗಾಳಿಯು ವೇಗವಾಗಿ ಬೀಸಿದರೆ,ಅದನ್ನೇ ನಾವು ಬಿರುಗಾಳಿಯೆನ್ನುತ್ತೇವೆ. ಹೀಗೆ ಎಲ್ಲಾ ದಿಕ್ಕುಗಳಿಂದ ಗಾಳಿಗಳು ಹೊರಟು ಅವೆಲ್ಲವೂ ಬಂದು ಸೇರಿದಾಗ ಒಂದು ಪ್ರವಾಹಕ್ಕೆ ಮತ್ತೊಂದು ಪ್ರವಾಹವು ಇದಿರಾದರೆ, ಸುಳಿಗಾಳಿ(ಸುಟ್ಟರಗಾಳಿ)ಯುಂಟಾಗುವದು.

ಹನ್ನೊಂದನೇ ಅಧ್ಯಾಯ.

ಸೆಕೆ, ಗಾಳಿ, ನೀರು ಇವುಗಳಿಂದ ಬಂಡೆಗಳು ಸವೆಯುವಕ್ರಮ

[ಊರಿನ ಸಮೀಪದಲ್ಲಿ ಗುಡ್ಡ,ನದಿ ಇವಿದ್ದರೆ ಹುಡುಗರನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಬಂಡೆಗಳು ಸವೆದು ನುಚ್ಚಾಗುದನ್ನೂ ಹರಿಯುವ ನೀರಿನಿಂದ ಬಂಡೆಗಳು ಕ್ಷೀಣವಾಗುವದನ್ನೂ ತೋರಿಸಬೇಕು.ಜಂಗು(ತುಕ್ಕು)


*ಅರಬಿ ಭಾಷೆಯಲ್ಲಿ ಋತು ಎಂಬ ಅರ್ಥವುಳ್ಳ "ಮೋಸಮ್" ಎಂಬ ಶಬ್ದದಿಂದ ಮುನ್ಸೂನ ಶಬ್ದವು ಬಂದಿರುತ್ತದೆ.