ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

= ೭೩ - ನೆಲದ ಮೇಲೆ ಹರಡಿರುವ ಮಣ್ಣು ಹೇಗೆ ಉತ್ಪತ್ತಿಯಾಗುತ್ತದೆ ? ನೆಲದ ಮೇಲೆ ಸರ್ವದಾ ವ್ಯಾಪಿಸಿರುವ ಸೂರ್ಯನ ಉಷ್ಣ, ಹವೆ, ನೀರು ಇವೇ ಮಣ್ಣಿನ ಉತ್ಪತ್ತಿಗೆ ಮೂಲ ಕಾರಣಗಳಾಗಿರುತ್ತವೆ. ಬಿಸಲು, ಗಾಳಿ, ಮಳೆ ಇವುಗಳ ಶಕ್ತಿ ಯಿಂದ ಅತಿ ಬಿರುಸಾದ ಬಂಡೆಗಳು ಸಹ ಕಾಲಕ್ರಮದಲ್ಲಿ ಶಿಥಿಲವಾಗುತ್ತಾ ಮೊದ ಲು ಕಲ್ಲುಗಳಾಗಿ ಕಡೆಗೆ ಮಣ್ಣಾಗುವವು. (೧) ಸೂರ್ಯನ ಉಷ್ಣದಿಂದ ಬಂಡೆಗಳು ಸವೆಯುವ ಕ್ರಮ, ಸೂರ್ಯನ ಉಷ್ಣದಿಂದ ಹಗಲಲ್ಲಿ ನೆಲವು ಕಾಯುವದಷ್ಟೇ ಅದು ಹಗಲಲ್ಲಿ ಹಿಡಿದುಕೊಳ್ಳುವ ಉಷ್ಣವನ್ನು ರಾತ್ರಿಯಲ್ಲಿ ಬೆಗನೆ ಹೊರಗೆಬಿಟ್ಟು ತಣಿಯುವದು. ನೆಲದ ಮೇಲ್ಬಾಗದ ಬಂಡೆಗಳ ಮೇಲಿನ ಪದರುಗಳು ಹಗಲಲ್ಲಿ ವಿಸ್ತಾರವಾಗು ತಲೂ ರಾತ್ರಿಯಲ್ಲಿ ಆಕುಂಚಿತವಾಗುತ್ತಲೂ ಇರುವದರಿಂದ ಈ ಪದರುಗಳ ಅಣು ಗಳಲ್ಲಿ ಪರಸ್ಪರವಿರುವ ಸಂಬಂಧವು ಕ್ರಮವಾಗಿ ಕಡಿಮೆಯಾಗುತ್ತದೆ. ಕಡೆಗೆ ಬಂಡೆಗಳ ಮೇಲ್ಬಾಗವೆಲ್ಲಾ ನುಚ್ಚಾಗಿ ಒಳಗಿನ ಭಾಗವನ್ನು ಮುಚ್ಚಿಕೊಂಡಿರುವದು. ಅಣುಗಳು ಉಷ್ಣ ದಿಂದ ವಿರಳವಾಗುವದೂ ಶೀತದಿಂದ ಸಂಕುಚಿತವಾಗುವದೂ ಹೇಗೆಂಬುವದಕ್ಕೆ ಒಂದು ನಿದರ್ಶನವನ್ನು ಹೇಳಬಹುದು. ದೀಪದ ಕಾಜಿನ ನಳಿಗೆ ಯು ಕಾದಿರುವಾಗ ಅದರ ಮೇಲೆ ನೀರಿನ ಹನಿಯು ಬಿದ್ದರೆ ನಳಿಗೆಯು ಒಡೆದು ಹೋಗುವದು. ನಳಿಗೆಯು ಕಾಯುವದರಿಂದ ವಿರಳವಾಗುವ ಅಣುಗಳು ಫಕ್ಕನೆ ಸಂಕುಚಿತವಾಗುವದರಿಂದಲೇ ನಳಿಗೆಯು ಒಡೆದುಹೋಗುವದು (೨) ಗಾಳಿಯಿಂದ ಬಂಡೆಗಳು ಸವೆಯುವವು. ಗಾಳಿಯಿಂದ ಬಂಡೆಗಳು ಸವೆಯುತ್ತವೆಂದರೆ ಅನೇಕರಿಗೆ ಆಶ್ಚರ್ಯವೆನಿಸಬ ಹುದು. ಈ ಕಾರ್ಯವು ಹ್ಯಾಗಾಗುತ್ತದೆಂದು ವಿಚಾರ ಮಾಡೋಣ. ಹವೆಯಲ್ಲಿ ಆಮ್ಲ ಜನಕವೆಂಬ ವಾಯು ಪ್ರಧಾನವಾಗಿರುತ್ತದೆ. ಈ ವಾಯು ಸಾಧಾ ರಣವಾಗಿ ನೆಲದ ಮೇಲಿರುವ ಎಲ್ಲಾ ವಸ್ತುಗಳ ಸಂಗಡ ಸಂಯುಕ್ತವಾಗು ತದೆ. ಒಂದು ಕಬ್ಬಿಣದ ತುಂಡನ್ನು ಕೆಲವು ದಿನಗಳವರೆಗೆ ಗಾಳಿ ತಗಲುವಂತೆ ಹೊ ರಗೆ ಇಟ್ಟರೆ ಅದರ ಮೇಲೆ ಮಣ್ಣಿನಂಥ ಹುಡಿಯು ಸೇರುವದು, ಈ ಹುಡಿಯನ್ನು ಜಂಗು ಅಥವಾ ತುಕ್ಕು ಎಂದು ಕರೆಯುತ್ತಾರೆ, ಕಬ್ಬಿಣದೊಡನೆ ಹವೆಯಲ್ಲಿರುವ ಆ ಮಜನಕ ವಾಯು ಸಂಯುಕ್ತವಾಗುವದರಿಂದ ಈ ಹುಡಿಯುಂಟಾಗುತ್ತದೆ. ಮಳೆ