ಪಂಚಮಾಶ್ವಾಸ. 93 ಪ್ರಾಸಾದತೋರಣಗಳಿಂ | ಭಾಸುರಮಂಡಪಗಳಿಂದ ಮಣಿವೇದಿಗಳಿಂ || ಕಾಸಾರಗಳಿಂ ಪರಮೋ | ಕ್ಲಾ ಸಂಬಡೆದಿರ್ಪ ಚಾರುವನಮಂ ಕಂಡಂ 11 ೭೫ | ಪುರುಹೂತನಂದನವೊ ಪುರ | ಹರಸಖನಾರಾಮಚೈತರಧಮೋ ಬಳಿಕಂ || ಸರಸಿಜಶರನಾಕ್ರೀಡಮೊ | ಸರಸಸುಫಲಪುಷ್ಪದಿಂದೆ ಪೂರಿತವನಮೋ 11 ೭೬ | ಫಲಸುಮಮ್ಮಿಲ್ಲದ ತರುಲತೆ | ಪಳುಕಿನ ಸೋಪಾನಮಿಲ್ಲದಬ್ಬಾಕರಗಳ್ || ಗಿಳಿ ಕರ್ದುಕಿದ ಫಲರಸಮಿಳೆ | ಗಿಳಿಯದ ಮಾಮರಗಳಿಲ್ಲಮಾರಾಮದೊಳಂ \ ೭೭ || ಮಿಸುಪ ಲತಾಕುಂಜಗಳೊಳ್ | ಮಿಸುನಿಯ ವರವೃಕಷಂಡಮೂಲಗಳೊಳ್ತಾ ಸಿಸುವೆಳೆಯೆಲೆವನೆಗಳೊಳಂ | ಬಿಸಜಾಕ್ಷಿಯನರಸುತಿರ್ದ್ದನದನೇವೇಳೋಂ 1 ೭೮ | ವಿಧುಕಾಂತೋಪಲಗೃಹದೊಳ್ | ವಿಧುಪದಮಂ ಸೋಂಕುತಿರ್ಪ ಸೌಧಾವಳಿಯೊಳ್ || ಮದನವಿಲಾಸಾಶ್ರಯದೊಳ್ | ಮದಗಜಗಾಮಿನಿಯನರಸುತಿರ್ದ್ದ೦ ಹನುಮಂ || ೭೯ || ಪನಿಯಿಡುವ ಮರಂದದ ಕಂ | ಪೆನಿಸುವ ತಿಳಿಗೊಳದ ಹಂಸಶುಕಪಿಕಶಿಖಿನಿ || ಸ್ವನದ ವನಜಾತಮುಕುಳ || ಸ್ತ್ರನೆಯರ ಸಂಭ್ರಮದ ವನದೊಳೀಕ್ಷಿಸುತ್ತಿದ್ದಂ || ೮ು || ನಾನಾವೃಕ್ಷಗಳೆಡೆಯೊಳ್ | ನಾನಾವೀರುಧೆಗಳಡಿಯೋಳುರುಕಾಸಾರಗಳೊಳ್ || ಮಾನಾಥಸತಿಯನನುಸಂ | ಧಾನಂಗೆಯ್ಯುತ್ತು ಮಿರ್ದ್ದನೇಂ ಸಾಹಸಿಯೋ || ೮೧_! ಬರೆವರೆ ಕಂಡಂ ಮಂಜುಳ | ತರನಿಬಿಡಚ್ಛದದ ಕನಕವರ್ಣವಿಹಂಗೋ ||
ಪುಟ:ಹನುಮದ್ದ್ರಾಮಾಯಣಂ.djvu/೧೦೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.