102 ಹಮಮದ್ರಾಮಾಯಣ, ಕೇಜಪದಂ ನೀಲೋತ್ಪಲ | ತೇಜೋಪಮಸುಂದರಾಂಗನಮಲಾಪಾಂಗಂ || ೧೪೨ || ತಿರೆಯೋಲ್ ತಿತಿಕ್ಷೆಯೋಳ್ಳುರ | ಗುರುವೊಲ್ ಸುಜ್ಞಾನದಲ್ಲಿ ದೀಪ್ತಿಯೊಳಂ ಭಾ | ಸ್ವರನೆಲ್ ವರಕೀರ್ತಿಯೋಳಾ | ಸುರರಾಜನ ತೆರದೆ ಗಣ್ಯನವನೀತಲದೊಳ್ | ೧೪೩ | ಇಷದರುಣನೇತ್ರಂ ಬುಧ | ಪೋಷಣನತಿನಿಪುಣನಬ್ಬಿ ಗಂಭೀರಂ ಸಂ || ತೋಷಾನ್ವಿತಚಿತ್ತಂ ಮೃದು | ಭಾಷಂ ಸರ್ವೆಶನೆಂದೊಡೆಂದಳ್ಳಿತೆ | ೧೪೪ | ಇದು ನನ್ನಿಯಾದೊಡಂ ಮಮ || ಹೃದಯಂ ನಿಶ್ಚಯಿಪುದಿಲ್ಲಮೇಂ ಕಾರಣಮೋ || ಸದಯಾ ನೀಂ ತಿಳಿದುದೆಂ || ದುದಿತಮಹಾಚಿಂತೆಯಿಂದೆ ಮೌನದಿನಿರ್ಷ್ಪಳ್ | ೧೪೫ಃ || ಹನುಮನದೇಂ ಪ್ರಾಜ್ಞನೊ ಮೇ || ದಿನಿಯಣುಗಿಯ ಮನದ ಪರಿಯನರಿತುಂ ತಾನೊ || ಯ್ಯನೆ ಸನಿಹಕ್ಕೆ ಬಂದುಂ || ವಿನಯದೆ ವದಕೆರಗಿ ನಿಂದು ಕಯ್ಯಗಿದೆಂದಂ || ೧೪೬ || ಆನೆರ್ಪಾಗಳ ಧರ || ಸೀನಾಧಂ ದೈನ್ಯದಿಂದಮೇಕಾಂತದೊಳಂ || ಮಾನಿನಿಗೀವುದೆನುತ್ತಂ || ತಾನಿತ್ತಿರ್ಪಂಗುಲೀಯಮೆಂದದನಿತ್ತಂ | ೧೪೭ | ಕೋಗಿಲೆ ಬಸಂತರಿತುವಂ | ಸೋಗೆ ಘನೋದಯವನಂಬುಜಂ ದಿನಕರನಂ | ಸಾಗರನಬ್ಬನ ಕಂಡೊಲ್ | ನಾಗೋಪಮಗನನೆ ಕಂಡು ಸಂತಸಗೊಂಡಳ್ || ೧೪೮ || ತಳ ತಿಳಿಪ ಚಾರುಮುದ್ರಿಕೆ | ಯೋಳೆ ಬೆಳಗುವ ರಾಮಮೂರ್ತಿಯಂ ನೋಡುತ್ತುಂ | ನಲವಿಂ ತುಳಿಲ್ಗೆಯ್ಯುಂ ಕರ | ತಲದೊಳ್ ಪಿಡಿದೊತ್ತಿಕೊಂಡಳಕ್ಷಿದ್ವಯಕಂ || ೧೪೯ |
ಪುಟ:ಹನುಮದ್ದ್ರಾಮಾಯಣಂ.djvu/೧೧೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.