ಪಂಚಮಾಶ್ವಾಸ. 103 ಪ್ರಾಣಮನುಳಿಸಿದೆ ಭುವನ | ಪ್ರಾಣಾತ್ಮಜ ನಿನ್ನ ಪುಣ್ಯ ಕೆಣೆಯಂ ಜಗದೊಳ್ || ಕಾಣೆನೆನುತ್ತುಂ ಮುದದಿಂ | ಕ್ರೋಣೀಸುತೆ ಪೊಗಳುತಿರ್ದ್ದಳದನೇವೇಳ್ವಂ || ೧೫೦ |! ನಿನ್ನತಣಿನಾದುದು ಮನ | ದನನ ವೃತ್ತಾಂತಕಧನಮೆನ್ನೊಳ್ ಗುಣಸಂ || ಪನ್ನ ಸುಜನರಕ್ಷಣಸುರ | ಸನ್ನುತ ಪೇಳೆನಗೆ ರಾಮಲಕ್ಷ್ಮಣರಿರವಂ | ೧೫೧ || ಜನಪತಿಗೆನ್ನೊಳ್ ಪ್ರೇಮವೊ | ಮುನಿಸೋ ಸೌಮಿತ್ರಿಯೇನನೆನುತಿರ್ಪನೊ ದೈ || ತನುವದ್ರವಮೆಂದಿಗೆ ಮೋ || ಚನಮಕ್ಕುಮೊ ಪೇಳು ಮೆಂದೊಡೆಂದಂ ಹನುಮಂ | ೧೫೨ || ಪಗಲಿರುಳುಂ ತವಚಿಂತೆಯೆ | ರಘುನಾಧಂಗಲ್ಲದಿತರಯೋಚನೆಯಿಲ್ಲಂ || ಖಗತನುಜಂ ನ ಜಗದಗಲಂ ಪ್ಲವಗಸೇನೆಯಂ ನಳಿನಾಕ್ಷೀ || ೧೫೩ | ದನುಜಾಧಮನಂ ಕ್ಷಣದೊಳ್ | ಹನನಮನುಂ ಗೆಯ್ದೆನೆಂದು ಲಕ್ಷಣನಿರ್ಪ್ಪo || ವನಚರರೆಲ್ಲರ್ ಖಳರಂ | ತಿನುವೆವೆನುತ್ತಿಪ್ಪFರಾದಿದೇವಿಯೆ ಕೇಳಾ || ೧೫೪ | ಮೃಗನೇತ್ರೆ ನಿಮ್ಮ ಬಗೆಯಂ | ರಘುಪತಿಗಂ ಪೇಳು ಬಳಿಯಮವರಿರ್ವರನುಂ || ಹೆಗಲೇರಿಸಿಕೊಂಡಿಲ್ಲಿಯೆ | ನಗರಕ್ಕೆಳರ್ಪ್ಪೆನಮ್ಮ ನೋಳ್ಳುದು ನಿಜಮಂ || ೧೫೫ | ತರಣಿಸುತಾದ್ ಬರ್ಪ್ಪರ್ | ತರಿವರ್ ಖಳಕುಲಮನಬ್ಬನೇತ್ರಂ ದಶಕಂ || ಧರನಂ ಸವೆದುಂ ಭರದಿಂ | ಕರೆದುಯ್ಯಂ ನಿಮ್ಮನೆಂದನಾ ಕಲಿಹನುಮಂ || ೧೩೬ || ಅಲ್ಲದೊಡೆ ನಿಮ್ಮನೀಗಳೆ | ಬಲ್ಲಿದನಾನೆನ್ನ ಹೆಗಲೊಳೇರಿಸಿಕೊಳುತುಂ |
ಪುಟ:ಹನುಮದ್ದ್ರಾಮಾಯಣಂ.djvu/೧೧೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.