135 ಸಪ್ತಮಾಶ್ವಾಸ. ತಾಂ ತವಕದೊಳಂ ಪುಷ್ಕರ | ಪಂಥಾನದೊಳೆಯುತಿರ್ದನದನೇವೇಳ್ತಂ 11 ೬೬ | ರಾಮನೆ ರವಿಕುಲವಾರಿಧಿ | ಸೋಮನೆ ಸಚರಾಚರಾತ್ಮಕನೆ ಪಾವನನೇ || ಶ್ಯಾಮಾಂಗನೆ ಪೊರೆಯೆಂದು ನ | ಭೋಮಾರ್ಗದೊಳಬ್ಬನೇತ್ರನಂ ನುತಿಗೆಯ್ದಂ 1 ೬೮ | ದೇವರ ಸತಿಯಂ ಸೀತಾ | ದೇವಿಯರಂ ತೊರೆವುದಿನ್ನು ಸಾಯದಿರೆನುತಂ || ರಾವಣಗೊರೆಯಾತಂ || ತೀವ್ರಮಹಾಕೋಪದಿಂದೆ ಪೊರಮಡಿಸಿದನಮ್ || ೬೯ !! ಮುನಿನಾಥ ವಿಶ್ರವಸ್ಸಿನ | ತನುಜನೆನಾನಾ ನಿಶಾಚರೇಶ್ವರನನುಜಂ || ವನರುಹಸಂಭವನಂಶಜ | ನೆನಗೆ ವಿಭೀಷಣನೆನಿಪ್ಪ ನಾಮಂ ದೇವಾ 11 ೭೦ 18, ಮರೆವೊಕ್ಕಂ ದೇವರ ಪದ | ಸರಸಿಜಮಂ ಕಾಯವೇಳುಮೆಂದಂಬರದೊಳ್ || ಭರದಿಂ ಕೂಗಿಡೆ ಕೇಳುಂ | ತರಣಿಜನಿಂತೆಂದನವನಿಪತಿಯೊಡನಾಗಳ್ 11 ದಶಶಿರನನುಜಂ ತಾಂ ಗಡ || ಶಶಿಮುಖಿಯಂ ಬಿಡೆನುತೆಂದೊಡಾ ದನುಜಂ ಕೋ | ಪಿಸಲೆಂದಂ ಗಡ ರಾ | ಕ್ಷಸನಿವನಂ ಕೊಲ್ಲೆ ವೆಳ್ಳುಮೆನ್ನೊಳ್ ಬೆಸಸಯ್ ತರಣಿಜ ನೀನೆಂದುದು ನಿಜ | ಮುರುಭಯದಿಂ ಬಂದೆನೆಂದು ಮೊರೆಯಿಡುತಿರ್ಪ್ಪಿ || ಮರೆವೊಕ್ಕನನುಳಿಪುದು ಸ | ತ್ಪುರುಷರ ಗುಣಮವನನಿಲ್ಲಿಗಂ ಬರಿಸೆಂದಂ || ೭೩ 11, ವನಜಾಂಬಕನಿಂತೆನೆ ರವಿ | ತನುಜಂ ಸಂತೋಷದಿಂದೆ ಸರಮಾಧವನಂ || ಬಿನದದೆ ಕರೆಯಲ್ಪಾತಂ | ವಿನಮಿತನಾಗುತ್ತೆ ನಿಂದನವನೀತಳದೊಳ್ 11 ೭೪ |
ಪುಟ:ಹನುಮದ್ದ್ರಾಮಾಯಣಂ.djvu/೧೪೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.