ಪ್ರಥಮಾಶ್ವಾಸ ಮತಿಯುತೆ ಕೌಸಲೆಗೀ ರಘು || ಪತಿಯೋರ್ವಂ ಕೇಕಯಾತ್ಮಭವೆಗಂ ಭರತಂ 1 ೪ಳಿ ? ಜನಿಸಿದೆವಾಬಳಿಕಂ ಮಾ | ನಿನಿ ಮಗಧಾಧಿಪನ ಪುತ್ರಿಗಾಂ ಶತ್ರುಘ್ನಂ || ತನಯರ್ತಾವಿರ್ವಕ್ರ | ೪ನಪಂ ಪಾಲಿಸುತಮಿರ್ದನೆಮ್ಮಂ ಸುಖದಿಂ | 1 ೪೫ || ಕ್ರತುರಕ್ಷಣೆಗಂ ಭರದಿಂ | ಯತಿವಿಶ್ವಾಮಿತ್ರನೈದೆ ಬಂದುಮಯೋಧ್ಯಾ || ಕ್ಷಿತಿವರನಂ ಯಾಚಿಸಿ ರಘು | ಪತಿಯಂ ಕರದುಯ್ಯಲಾತನೊಡನಾಂ ವೋದೆಂ _1 ೪೬ |! ಬರೆವರೆ ತಾಟಕಿಯೆಂಬಳ್ | ಮೊರೆವುತೆ ಬಂದಡ್ಡಗಟ್ಟೆ ಮುನಿಯನುಮತಿಯಿಂ || ಶರವೊಂದರಿಂದೆ ಭರದಿಂ | ಧರೆಗಿಳಿಸಿದನವಳ ಶಿರವನೀ ರಘುವೀರಂ 11 ೪೭ 11 ಸಿದ್ಧಾಶ್ರಮಕಂ ಬಂದುಂ || ಯುದ್ದದೆ ರಾಕ್ಷಸಸುಬಾಹುವಂ ಕೊಂದುಂ ಮಾ | ಯೋದ್ದತಮಾರೀಚನನುರೆ | ಬದ್ದಿಸಿ ಮರುದಸ್ತ್ರದಬ್ಬಿಗಿಟ್ಟಂ ರಘುಜಂ || ೪೮ || ಮುನಿಮಖಮಂ ರಕ್ಷಿಸಲತಿ | ವಿನಯದೆ ತನ್ನುನಿಪನೆಮ್ಮನೊಡಗೊಂಡಾಗಳ್ || ಜನಕನ ಸುತೆಯ ಸ್ವಯಂವರ | ಕೆನುತಂ ಕರೆದುಯ್ಯಲಾದುದೊಂದಾಶ್ಚರ್ಯ೦ | ೫ | ಗೌತಮಸತಿ ಶಿಲೆಯಾಗಿರೆ | ಸೀತಾಪತಿಯಂಘಿಸೋpಕಿದಾಗಳೆ ಮೊದಲಂ | ತಾ ತರುಣಿ ನಿಂದು ವಂದಿಸಿ | ಪೂತಳ್ತಾನಾದೆನೆಂದು ಪತಿಯಂ ಸಾರ್ದಳ್ | ೫೦ | ಮುಂದೈತರೆ ಜತಿಯೊಡನಾ || ನಂಢದೆ ಮಿಥಿಲೇಶನಾಳ್ಳುತಿರ್ಪಾ ದೇಶಂ ! ಬಂಧುರಹರಗಿರಿಶಾಲಯ | ದಿಂದಂ ಸತ್ಯಾಗ್ರಹಾರದಿಂ ದೆಸೆಗತುಳಂ | ೫n 8
ಪುಟ:ಹನುಮದ್ದ್ರಾಮಾಯಣಂ.djvu/೧೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.