204 ಹನುಮದ್ರಾಮಾಯಣ. ಕಿಡಿಗೆದರಿ ಬರ್ಸ್ಸ ಪರಿಘದ | ಕಡುಪಂ ಪರಿಹರಿಸಿ ಕುಂಭಕರ್ಣಾತ್ಮಜನಂ || ಪಿಡಿದೆಳೆದು ಕಡೆಪಿ ಭೂಮಿಗೆ | ಕಡುಗಿನಿಸಿಂ ಗುರ್ಬ್ಬಿ ಕೊಂದನನಿಲಕುಮಾರ || ೬೦ || ಗರುಡನ ಫಣಿಗಳ ವಜದ | ಗಿರಿಗಳ ಮಾರುತನ ಘನದ ಸಂದೋಹದ ಕೇ | ಸರಿಯ ಗಜಾವಳಿಯಾಜಿಯ | ಪರಿಯಾದುದು ಹನುಮರಾಕ್ಷಸರ ಭರಯುದ್ದಂ || ೬೧ || ಮಡಿದುದು ರಾಕ್ಷಸನಿಚಯಂ | ಮೃಡಸನ್ನಿಭನನಿಲಜಾತನುರುಮುಷ್ಟಿಯೊಳಂ || ಬಿಡುಗಣ್ಣ ಸಂತಸದಿಂ | ಪೊಡೆದರ್ ದುಂದುಭಿಯನಮರಲೋಕದೊಳಾಗಳ್ | ೬೨ | ಅಸುರರ್ ಮಡಿಯಲ್ ಕೇಳುಂ | ದಶಕಂಠ ಖರತನೂಜನಂ ಬೀಳಗೆ ಚೆ || ನೈ ಸೆವ ವರೂಥಮನೇರ್ದ್ದುo | ರಸೆ ಕುಸಿವಂದದೊಳೆ ಬಂದನಾ ಮಕರಾಕ್ಷಂ || ೬& || ಪುಲಿಕರಡಿಕಳೆಕೊಣಂ | ಗಳ ಮುಸುಡಿನ ಘೋರದಂಷ್ಯದಸುರರ್ಬೆರಸುಂ || ಕೊಳುಗುಳಕೆರೆ ಕಪಿಗಳ | ಬಳಗಂ ಬೆದರಿತ್ತು ದನುಜನಾಗಮನದೊಳಂ | ೬೪ | ಉರುಧನುವನಾಂತು ಕಟ್ಟು || ಬರಗಬ್ಬದೆ ದಿವ್ಯಮಾರ್ಗಣಮನೆಚ್ಚುಂ ವಾ | ನರಕುಲಮಂ ಘಾತಿಸುತೆ | ೪ರೆ ರಾಮನಿದಿರ್ಚ್ಚಿ ಚಾಪಟಂಕೃತಿಗೆಯಂ. || ೬೫ | ದಶರಧನೃಪನಟ್ಟಲೊಡಂ | ವಸುಮತಿಯಂ ಬಿಟ್ಟು ಬಂದು ಕಳೆದುಂ ಸತಿಯಂ || ಅಸುರರ ಭಯದಿಂ ವಾನರ | ವಿಸರದೊಳಡಗಿದ ಸದಾರನುಂ ನೀನಲ್ಲೇ | ೬೬ | ಧುರದೊಳ್ ಮತನಂ ಸಂ | ಹರಿಸಿದ ದುರ್ಗವ್ರದಗ್ಗಳಿಕೆಯಂ ಮುರಿವೆಂ ||
ಪುಟ:ಹನುಮದ್ದ್ರಾಮಾಯಣಂ.djvu/೨೧೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.