224 ಹನುಮದ್ರಾಮಾಯಣ. ಪುಲಿಕರಡಿಸಿ೦ಗಳಾಯಲ | ಗಳ ರೂಪದೊಳಂ ಮುಸುಂಕೆ ಮೂರಂಬುಗಳಿಂ | ತೊಲಗಿಸಿ ದೈತ್ಯಾಧೀಶನ | ತಲೆಗಳನೊಡೆಯಚ್ಚನಬ್ಬಲೋಚನನಾಗಳ್ | ೪೫ } ಮಯದತ್ತರೌದ್ರಶರಮಂ ! ರಯದಿಂ ದನುಜೇಂದ್ರನೆತ್ತೋಡಾಯುಧಗಳ ಸಂ | ಚಯಮೊಗೆದರೆ ಸರಸಿಜ | ನಯನಂ ಗಾಂಧರ್ವವಿಶಿಖದಿಂ ಖಂಡಿಸಿದಂ 1 ೪೬ || ಖತಿಯಿಂ ಲಕ್ಷ್ಮಣನುಂ ಖಳ | ಪತಿಯುರುಕಾರ್ಮುಕಶಿಲೀಮುಖಗಳಂ ಮಿಗೆ ಸಾ || ರಧಿಯಂ ಕಡಿದುಂ ಧ್ವಜಸಂ ! ತತಿಯಂ ಖಂಡಿಸಿದನುಗ್ರಶರಮೊಂದರೊಳಂ | ೪೭ | ಗದೆಯಿಂ ಸರಮಾರಮಣಂ | ಕುದುರೆಗಳಂ ಸದೆಯೆ ಕಂಡು ಧರೆಗು ದುಮ್ಮಿ | ಕ್ರೀದನಾ ದನುಜಂ ನಿನ್ನಂ || ಸದೆಯದೆ ಬಿಡೆನೆಂದು ಶಕ್ತಿಯಂ ಪೂಣೈ ಷ್ಣಂ !] ೪೮ |! ಉರಿಯನುಗುಳುತ್ತೆ ಬರೆವರೆ | ಶರದಶಶತದಿಂದ ಕಡಿದು ಲಕ್ಷಣನದನುಂ || ಮೊರೆಯುತ್ತಿರೆ ರಾವಣನುರು | ತರಮಯಸಂಭೂತಶಕ್ತಿಯಂ ತೆಗೆದಿಟ್ಟಂ } ೪೯ | ಸಿಡಿಲೊರ್ಬುಳಿ ಪರ್ವತಮಂ | ಪೊಡೆವಂದದೊಳಂ ಸಗಾಢಮುಂ ಜ್ವಲಿಸುತ್ತುಂ | ಕಡುಪಿ೦ ಲಕ್ಷಣವಕ್ಷಮ | ನೊಡೆದುಚ್ಚಳಿಸಲೆ ಬಿಳನವನಿಯೊಳಾತಂ | ೫೦ || ಅನುಜನನೀಕ್ಷಿಸಿ ರಾಘವ | ನನಿಲಾತ್ಮಜಸೂರ್ಯಪುತ್ರರಂ ಕಾಪಿಡುತುಂ || ಧನುವಂ ಜೇವತೆಗೆಯುಂ || ಕನಲುತೆ ಕೆಡೆಯೆನುತೆ ಮಬ್ರವಿಶಿಖಮನೆಟ್ಟಂ | ೫೧ }} ದಗದಗಿಸುತೆ ದಳ್ಳುರಿಗಿಡಿ | ಯುಗುಳುತ್ತುಂ ಬರ್ಪ್ಪ ಶರಕೆ ಭಯಮಾಂತುಂ ಸಂ |
ಪುಟ:ಹನುಮದ್ದ್ರಾಮಾಯಣಂ.djvu/೨೩೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.