ದ್ವಾದಶಾಶ್ವಾಸ. 233 ತರಣಿಜಹನುಮರ್ಗ್ಗ೦ ಬಿ | ತರಿಸುತೆ ಜಾಗ್ರತೆಯೊಳಿರ್ದ್ದನಾ ರಾತ್ರಿಯೊಳಂ || ೭ | ಗಳಿಲನೆ ಚಂದ್ರದ್ರೋಣಾ || ಚಲಮಂ ಕ್ಷೀರಾಬೀತೀರದೊಳ್ ಬೀಸಿಡುತುಂ 11, ಬಳೆಯಿಸಿ ನಿಜವಾಲಮನಾ | ಬಳಿಯಂ ಪೆರ್ಗೊಂಟಿಗೆಯನದರಿಂ ಹನುಮಂ 11 ೮ || ಅವನೀತಳದಿಂ ಮೇಲಕೆ | ಧ್ರುವನಿಳಯಂಮುಟ್ಟಿ ಕೊಂಟೆ ಸುತ್ತು ಮುತ್ತುಂ || ಪವಿಯೋಲ್ ದೃಢವಾದತಾ || ಪವಿಕಾಯನ ವಾಲಭಿತ್ತಿ ಸಪ್ತಕಮಾಗಳ್ 1 ೯ | ನರಪತಿಗಳ್ ನಿರ್ಭಯಾ | ಗಿರಲೆಂದುಂ ಘೋರರೂಪನಾಂತನಿಲಸುತಂ || ಗಿರಿಯಂ ಮರನಂ ಧರಿಸುತೆ | ಕರಗಳೊಳಂ ವೆರೆವತಿರ್ದ್ದನಾ ದ್ವಾರದೊಳಂ || ೧೦ || ಮೈರಾವಣನತ್ರಲ್ ಕಪಿ | ವಾರದ ಬಗೆಯಂ ವಿಚಾರಿಸಲ್ ದಧಿಮುಖನಂ | ಭೋರೆನೆ ಕಳಿಸಿದೊಡಂ ನೆರೆ | ಸಾರುತ್ತುಂ ನೋಡುತಿರ್ದ್ದನೆತ್ತಂ ಸುತ್ತಂ { X | ಒಳಗುವೊಡೆ ಪಧವಿಲ್ಲದ | ಕುಲಿಶೋಪಮವಾದ ಕೊ೦ಟೆಯಂ ನೋಡುತಂ || ನೆಲನಂ ಒಗಿದಿಳಿದು ರಸಾ | ತಳದೊಳ್ ಪಡಿಸಣಿಸಿ ಮರಳು ಬಂದಂ ಧರೆಗಂ || ೧೨ || ನೆಸೆದಂಬರತಳಕಂ ಧ್ರುವ | ವಸಧದ ಪರ್ಯಂತಮರಸಿ ಕಾಣದೆ ಪರಮಂ || ಬಸವಳಿದಳಂದುಂ ರಾ || ಕ್ಷಸನಾಧಗೆ ಸೇಳೆ ಕೇಳು ಎಸ್ಮಿತನಾದಂ | \ ೧೩ || ಯೋಚಿಸಿ ಮಹಿರಾವಣನಾ | ಸೂಚೀಮುಖನೆಂಬ ದೈತ್ಯನಂ ಕಳಿಪಲ್ಕಂ || ಖೇಚರನೊಲ್ ಬಂದುಂ ನಾ | ರಾಚೋಪಮಮಾಗೆ ನಾಸೆಯಂ ಬಳೆಯಿಸಿದಂ !! ೧೪ || 9.
ಪುಟ:ಹನುಮದ್ದ್ರಾಮಾಯಣಂ.djvu/೨೪೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.