ದ್ವಿತೀಯಾಶ್ವಾಸ ಕಂಡಾಗಳೆ ರಾಮಂ ಕೋ ! ಯಂಡಕ್ಕಂ ತೊಡಿಸಿ ಬಾಣಮಂ ನಿಮಿಷದೊಳಂ | ಖಂಡಿಸಿ ರಾಕ್ಷಸರಂ ಧೃತ | ಖಂಡೇಂದುವಿನಂತೆ ಮೆರೆದನದನೇವೇಳೋಂ | ೮ || ಪಲವು ದಿನವಾದ ಬಳಿಕಂ | ಸುಳಿದುದು ಸಮ್ಮುಖದೆ ಕಾಂಚನದ ಮೃಗವೊಂದುಂ || ಇಳೆಯಣುಗಿ ಕಂಡು ಬೇಡ | ಆಲಸದೆ ಬೆಂಬಳಿಯೊಳೆಯ್ದಿದಂ ರಘುವೀರಂ 11 ೯ 11 ಮಾಯದ ಮೃಗವೆಂದರಿತಾ | ತೋಯಜದಳನೇತ್ರನೆಚ್ಚು ಕೆಡೆಪಲ್ಯಸುರಂ |! ಸಾಯುವ ಕಾಲದೆ ಲಕ್ಷಣ | ಹಾಯೆನುತಂ ಬೀಳೆ ಕೇಳುದಸುರನ ದನಿಯುಂ || ೧೦ | ಪತಿಯ ರುತಿಯಂದು ಸೀತಾ | ಸತಿಯೆನ್ನ ಕೋಪದಿಂದೆ ಕಳಿಪಲ್ವಾನುಂ || ಪಥವಿಡಿದುಂ ಬರ್ಪನ್ನೆಗೆ || ಮತಿಚಿಂತಾಕ್ರಾಂತನಾಗಿ ಬಂದಂ ರಘುಜಂ || || ಏನಾಗಿರ್ಪಳೊ ಮಾನಿನಿ | ದಾನವರುರುಮಾಯೆಯಿಂದಮವಳಂ ಬಿಟ್ಟುಂ || ನೀನೇಕೆ ಬಂದೆಯೆನುತಂ | ಭೂನಾಥಂ ಕೇಳೆ ಪೇಳೆನೀ ವಿವರಗಳು || ೧೨ | ವನಿತಾಮಣಿಯಂ ಕಾಣ್ಣುದು | ತನಗಿನ್ನುಮಸಾಧ್ಯವೆಂದು ಚಿಂತಿಸುತಂ ಪಾ || ವನನೆಲೆವನೆಗಂ ಬರೆ ಮೇ || ದಿನಿತನುಜೆಯನಲ್ಲಿ ಕಾಣದಿರೆ ದುಃಖಿಸಿದಂ || ೧ || ಹಾ.ರಮಣಿ ಹಾ ಯುವತಿ ಹಾ | ಹಾ ರಮೆ ಹಾ ಸುದತಿಯೆಂದುಮತಿದುಃಖವನಾಂ | ತೀ ರಾಘವನಿರೆ ಖಗಮೃಗ | ವಾರಂ ಮೊರೆಯಿಟ್ಟುವಾಗಲದನೇವೇಳ್ತಂ |! ೪ !! ನರರಂತಿದೇಕೆ ದುಃಖಂ ! ನರನೇ ನೀನಾದಿಪುರುಷನಲ್ಲವೆ ಬಲ್ಲೆಂ !
ಪುಟ:ಹನುಮದ್ದ್ರಾಮಾಯಣಂ.djvu/೨೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.