ಹನುಮದ್ರಾಮಾಯಣ. ಮರೆಯದೆ ನೀಂ ನಿಜಮಾಯೆಯ | ಮರೆಯಂ ಪರಿಹರಿಪುದೆಂದು ತಿಳಿಸಿದೆನಾಗಳ್ || ೧೫ | ಲೇಸಂ ನೀನಾಡಿದೆ ಸೀ ! ತಾಸತಿಯಂ ನೋಡವೆಳ್ಳುಮೆನುತುಂ ಭರದಿಂ || ಕೇಶಂಗೊಳುತಂ ಬರೆ ಪ | ಕೀಶಂ ತಾಂ ಗಾಸಿಯಾಗಿ ಬಿಟ್ಟಿರಲಾಗಳ್ 1 ೬ | ಅಸುಮಾತ್ರಮಿರ್ಪ ಖಗನಂ | ಸಸಿನೆ ನಿರೀಕ್ಷಿಸಿ ಜಟಾಯು ನೀನಾರಿಂದಂ | ಬಸಗೆಟ್ಟೆಯೆಂದು ಕೇಳಲ್ | ಬಿಸುಸುಯ್ಯುತ್ತಾತನೆಂದನೆಮ್ಮೊಡನಾಗಳ್ || ೧೭ || ರಾವಣನೆಂಬಧಮಖಳಂ || ದೇವಿಯರಂ ಮಾಯೆಯಿಂದಮುಯ್ಯುತ್ತಿರಲಾಂ | ತೀವಿದ ರೋಷದೆ ಸೆಣಸ | ಲ್ಯಾ ವಿಬುಧಾರಾತಿಯೆನ್ನ ಮೋಸದೆ ಸದೆದಂ || ೮ | ನಿನ್ನಡಿಯಂ ನೋಳಗ | ಮೆನ್ನ ಸುಮಿರಲೆಂದು ದೇವಿ ನೇಮಿಸಿದುದರಿಂ || ದಿನ್ನೆಗಮಿರ್ದೆ ಮೋಕ್ಷಮ | ನಿನ್ನು ಕರುಣಿಪುದುಮೆಂದು ತನುವಂ ಬಿಸುಟಂ || ೧೯ | ಅವನಂ ಸಂಸ್ಕರಿಸಲೊಡಂ || ಪ್ರವಿಲಸಿತವಿಮಾನದಲ್ಲಿ ನಿಂದಂಬುಜಸಂ | ಭವಲೋಕಕೆ ಪೋಗಲ್ಕುಂ | ದವಿರಳ ಕಾಂತಾರದಲ್ಲಿ ಬರುತಿರಲಾಗಳ್ | ೨೦ || ತಲೆಯಿಲ್ಲದೊಂದು ಯೋಜನ | ದಳತೆಯ ಬಾಹುಗಳನಾಂತ ರಕ್ಕಸನೊರ್ವo | ಸೆಳೆದೆಮ್ಮಂ ತಿಂಬೆಡೆಯೊಳ್ || ಗಳಿಲನೆ ತದ್ವಾ ಹುಯುಗಳಮಂ ಕಡಿದೆವಣಂ || ೨೧ | ಅಟ್ಟೆಯ ತುಳಿಯಲ್ಲ ಸುವಂ | ಬಿಟ್ಟುಂ ರಾಕ್ಷಸಕಬಂಧನಂದಂಬರದೊಳ್ || ದಿಟ್ಟಿಸಿ ವಿಮಾನಮಂ ನಿಜ | ಪಟ್ಟಣಮಂ ಸಾರ್ವೆನೆಂದು ಮತ್ತಿಂತೆಂದಂ 1 ೨೨ |
ಪುಟ:ಹನುಮದ್ದ್ರಾಮಾಯಣಂ.djvu/೩೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.