ಈ ಪುಟವನ್ನು ಪರಿಶೀಲಿಸಲಾಗಿಲ್ಲ.

:304 ಹನುಮದ್ರಾಮಾಯಣ. ಪುಸಿಡೋಳ್ವಾಸಂ ಪಾದರ | ಮಸುರಭಯಂ ಕಳವು ಪಳಿವು ಕಾರ್ಪಣ್ಣಂ ಕ || ರ್ಕಶಮಂಜುಗೆಯನ್ಯಾಯಂ | ನುಸುಳಳಿವುಂ ರಾಮನಾಳ್ವ ದೇಶದೊಳಿಲ್ಲಂ ! ೯೦ || ಪೆಸರಿಲ್ಲಂ ದುರ್ಭಿಕ್ಷದ | ನಸಿದುದು ದಾರಿದ್ರದುಃಖಮಪಮೃತ್ಯುಭಯಂ || ಕುಸಿದುದು ಕಷ್ಟಂ ಸತತಂ | ಪಸರಿಸಿತತಿನೋದಮ್ಮೆದೆ ತದ್ರಾಜ್ಯದೊಳಂ | ೯೧ || ವತಿಭಕ್ತಿಯೋಳಂ ಸತಿಯರ್ | ಪಿತ್ತ ಸೇವೆಯೋಳುಳತನುಜರುಂ ಮೇಣ್ ದೈತ್ವಾ || ಹಿತಶಂಕರಪೂಜೆಯೆಳಂ | ಕ್ಷಿತಿಸುರಬಾಹುಜರುಟೊಪ್ಪಿದರೆ ಸಂಭ್ರಮದಿಂ | ೯೨ | ಧನಧಾನ್ಯ ಸಮೃದ್ಧಿಯೊಳಂ ! ಜನಮೆಲ್ಲಂ ಸೌಖ್ಯದಿಂದವಿರ್ದ್ದುದು ಧರಣಿ | ವನಿತೆಗೆ ಮಂಗಳವಾದುದು | ವನಜಾಕ್ಷಂ ಪೊರೆವತಿರ್ದ್ದ ರಾಜ್ಯದೊಳನಿಶಂ || ೯೩ | ಸುರಲೋಕಕೆ ಮಿಗಿಲಾದುದು | ಧರಣೀಸುರಮುಖ್ಯಸತ್ಪಚಾವಳಿ ರಾಮ || ಸ್ಮರಣೆಯೋಳಿರ್ದ್ದುದು ನಿಚ್ಚಂ | ಪರಿತೋಷದೆ ಪುತ್ರಮಿತ್ರಪೌತ್ರರ್ಬೆರಸುಂ | ೯೪ | ಶ್ರೀಲಲನಾನಾಧಂ ನರ | ಲೀಲೆಯೊಳಂ ರಾಮನಾಮದಿಂದಂ ಭೂಮಿಾ || ಪಾಲನೆಗೆಯ ಚರಿತ್ರಮ | ನಾಲಿಸಿ ಬರೆದೋದಿದರ್ಗ್ಗೆ ಮಂಗಳಮಕ್ಕು 1 ೯೫ | ನಿರತಂ ಭಕ್ತಿಯೋಳಂ ಶುಭ | ಕರಹನುಮದ್ಘಾಮವಿಜಯಮಂ ಕೇಳ್ವರ್ಗo || ದುರಿತಂ ಪರಿಹರಮಕ್ಕುಂ। ಕರುಣಿಸುವ ನಿತ್ಯ ಸಂಪದಗಳಂ ರಾಮಂ || ೯೬ | ಓತುಂ ಸತತಂ ವಾಚಿಸು | ವಾತಂಗಂ ಸಾರ್ಗುಮೈದೆ ಮನಸೋದ್ವಿಷ್ಟಂ ||