ತೃತೀಯಾಶ್ವಾಸ. 51 ಬಾಲಾಜಿ ಸದೃಶಚಿಕುರದ || ಕಾಲಾಹಿಸಮಾನವೇಣಿಯಮಲರುಚಿರಸ || ಚೌಲದ ಸರ್ವಾಭರಣದ | ಲೋಲಾಕ್ಷಿಯನೈದೆ ನೋಡಿ ಮುನಿಯಿಂತೆಂದಂ || ೪೫ | ಆವಳ್ಳಿಂ ಸುರನಾರಿಯೋ | ಕಾವನ ಕಾದಲೆಯೋ ಕಾಮರೂಪಿನಿಯೋ ರಾ | ಜೀವಾನನೆ ಮಾಂಜದೆ ಹೇ | ೪ ವನಕೆಳಂದೆಯೇತಕೆಂಬುದನೆನ್ನೋಳ್ || ೪೬ || ದನುಜೇಂದ್ರನ ಸುತೆ ತಾನನು | ದಿನಮುಂ ಭವದೀಯಚರಣಸೇವೆಯನುರೆ ಮಾ || ಇನುವಿಂ ಬಂದೆನೆನುತ್ತಾ | ವನಜಾಂಬಕಿ ಪೇಳೆ ಕೇಳು ವರಿಸಿದನಾಗಳ | ೪೭ # ಪತಿಭಕ್ತಿಯೋಳಂ ಮಾನಿನಿ | ಕತಿಪಯದಿನಮೆಸಗಿ ಸೇವೆಯಂ ರವಿಯಸ್ಕಂ || ಗತನಾಗುವ ಸಮಯದೊಳಂ ! ಸುತಲಾಭಮನೈದೆ ಬೇಡಿದಳ್ಳದದಿಂದಂ 1 ೪೮ {. ದಾರುಣಕಾಲದೊಳೆನ್ನೋ ! ರ್ಮಾರನ ಕೇಳಿಯನಪೇಕ್ಷಿಸಿದ ಕತದಿಂದಂ || ಘೋರಾಕೃತಿಯಿಂದ ಸುಕು | ಮಾರರ್ಸಂಜನಿಪರೆಂದು ನುಡಿದು ಮುನಿಪಂ { ೪೯ !! ಖಲಸುತರಿಂದೇಂ ಲಾಭಂ | ಕುಲಮಂ ತಾಂ ವೃದ್ಧಿಗೆಯ ಸುತನಂ ಕೃಪೆಯಿಂ || ದೊಲಿದೀಯೆವೆಳ್ಳುಮೆಂದಾ || ಲಲನಾಮಣಿ ಬೇಡಿಕೊಂಡೊಡೆಂದಂ ಮುನಿಪಂ 11 ೫೦ || ಕಡೆಯೋಳ್ಳುಟ್ಟುವನೊರ್ವಂ || ಜಡಜಾಕ್ಷನ ಭಕ್ತನಿದಕೆ ಸಂದೆಗತ್ತಲ್ಲಂ || ಪೊಡವಿಯ ಸುರರಂ ಪೊರೆವಂ | ನಡುವಂ ಸದ್ಯತಮನೆಂದು ಮನ್ನಿಸಿದನಣಂ 1 ೫೧ | ಉದಿಸಿದನಾ ಸುದತಿಗೆ ದಶ | ವದನಂ ತತ್ಥಣದೊಳಾದುದದ್ಭುತಮಂಭೋ ||
ಪುಟ:ಹನುಮದ್ದ್ರಾಮಾಯಣಂ.djvu/೫೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.