Preface. ಪ್ರಸ್ತಾವನೆ. ಈ ಪದ್ಯಗ್ರಂಥವು ಆಡುವಳ್ಳಿ ವೆಂಕಾರ್ಯತನೂಜನಾದ ಸುಬ್ರಹ್ಮಣ್ಯನೆಂಬ ಕವಿ ಯಿಂದ ರಚಿಸಲ್ಪಟ್ಟಿತು. ಈ ಗ್ರಂಥಕರ್ತನ ಕಾಲವು ತಿಳಿಯದು. ಗ್ರಂಥಕರ್ತನು ಬ್ರಾಹ್ಮಣನಾಗಿಯೂ, ಶೈವಮತಾವಲಂಬಿಯಾಗಿಯೂ, ಇರುವನೆಂಬುದು ಗ್ರಂಧಪ ರನದಿಂದ ಅಲ್ಲಲ್ಲಿ ವ್ಯಕ್ತವಾಗುತ್ತಿರುವುದು, ನನಗೆ ದೊರೆದ ಕತ್ತಾಳೆಯೋಲೆಯ ಪ್ರತಿ ಯಲ್ಲಿರುವ “ಇದು ಮೂಕಾಂಬಾಪಾಂಗಪ್ರಸಾದಸಾಧಿತಸರಸಸಾಹಿತ್ಯ ಸಾಮ್ರಾಜ್ಯ ಪ್ರತಿಷ್ಟಿತ ವಿದ್ವಜ್ಜನೋಪಲಾಲನೀಯ ಭೂವಿಬುಧ...... ..ವಿರಚಿತಮಪ್ಪ...... ಮಹಾಪ್ರಬಂಧದೊಳ್...” ಎಂಬ ಆಶ್ವಾಸಸಮಾಪ್ತಿ ಗದ್ಯದಿಂದಲೂ ಈ ವಿಷಯವು ಪುಷ್ಟಿಕರಿಸಲ್ಪಡುತ್ತಿರುವುದು. - ಅಲೇಟದಲ್ಲಿ ಬರೆಯಲ್ಪಟ್ಟಿದ್ದ ಇದರ ಮೂಲಪ್ರತಿಯು ನನ್ನ ಕಯ್ದೆ ದೊರೆದಾ ಗಲೇ, ಆದ್ಯಂತವೂ ಗೆದ್ದಲುಹಿಡಿದು, ಮುಕ್ಕಾಲುಪಾಲು ಗ್ರಂಧವು ಓದುವುದಕ್ಕಾಗ ದೆ, ಅಸಂಪೂರ್ಣವಾಗಿದ್ದಿತು. ವಿನಷ್ಟವಾದ ಅಂತಹ ಕಂದಪದ್ಯಗಳ ಭಾಗಗಳನ್ನು ಮಾಡಿ ಸೇರಿಸದಿದ್ದರೆ, ಕವಿಯಪ್ರಕ್ರಮಭಂಗವೂ ವಾಚಕರ ಉತಾಹಭಂಗವೂ ಏಕ ಕಾಲದಲ್ಲಿ ಉಂಟಾಗಬಹುದೆಂದು ಯೋಚಿಸಿ, ಮೂಲಕವಿಯ ಆಶಯವನ್ನು ಸಾ ಧ್ಯಮತವಾಗಿ ಅವಲಂಬನಮಾಡಿ, ಅವುಗಳನ್ನು ಅಲ್ಲಲ್ಲಿ ಪ್ರಕ್ಷೇಪಿಸಿರುವೆನು, ಈ ವಿಷಯದಲ್ಲಿ, ಊದುಗೋಲಿನಂತಾದ ನಾನು ಆ ಮಹಾಕವಿಯ ಕೀರ್ತಿಗೆ, ಎಳ್ಳ ವ್ಯಾದರೂ ಭಾಗಿಯಾಗಲಾರೆನು. ಗ್ರಂಧದ ಅಮೂಲ್ಯವಾದ ಕವಿತಾಪ್ರತಿಭೆಯನ್ನು ನೋಡಿ, ಅದನ್ನು ಹೇಗಾದ ರೂ ಮುದ್ರಿಸಬೇಕೆಂಬ ಲವಲವಿಕೆಯು ನನ್ನಲ್ಲಿ ಚಿರಕಾಲದಿಂದಲೂ ಉಂಟಾಗಿದ್ದರೂ, ಲಕ್ಷ್ಮೀಕಟಾಕ್ಷವು ಸರಸ್ವತ್ಯಾರಾಧಕರಲ್ಲಿ ಸಂಪೂರ್ಣವಾಗಿ ಇರುವುದಿಲ್ಲವಾದ ಪ್ರ ಯುಕ್ತ, ಅದು ಸಾಧ್ಯವಾಗಲಿಲ್ಲ. ಈ ವಿಷಯದಲ್ಲಿ, ಸಾಧ್ಯವತವಾದ ದ್ರವ್ಯ ಸಹಾ ಯದಿಂದ ನನ್ನನ್ನು ಪ್ರೋತ್ಸಾಹಿಸಿದ ಶ್ರೀ ಉಡುಪಿಯ ಅಧಮಾರುಮಠದ ವಿಬುಧಪ್ರಿಯತೀರ್ಥಶ್ರೀಮಚ್ಚರಣರವರ ದಿವ್ಯಸಹಾಯವು ಚಿರಸ್ಮರಣೀಯವಾಗಿ ರುವುದು, ಗ್ರಂಥವನ್ನು ಸುಂದರವಾದ ಮುದ್ರಣದಿಂದ ಅನುಗೊಳಿಸಿದುದಕ್ಕಾಗಿ ಶ್ರೀ “ಸದಾನಂದ” ಮುದ್ರಾಶಾಲೆಯ ಅಧ್ಯಕ್ಷರಿಗೂ, ಮುದ್ರಣಕಾಲದಲ್ಲಿ ತಪ್ಪುಗಳ
ಪುಟ:ಹನುಮದ್ದ್ರಾಮಾಯಣಂ.djvu/೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.