54 ಹನುಮದ್ರಾಮಾಯಣ. ರಾಘವನತ್ತಣಿನಾಗುಗೆ | ಭೋಗೈಶ್ವರ್ಯಾಯುವೃದ್ಧಿಯೆಂದುಂ ಪೋದಂ \ ೬೬ ಬಿಸಜಜನಿಂ ವರಮಂ ಪಡೆ | ದಸುರೇಂದ್ರ ಬಂದನೆಂಬುದಂ ಕೇಳುಂ ರಾ | ಕ್ಷಸನಿವಹಂ ಪಾತಾಳದಿ | ನೊಸೆದೆಳ್ತಂದುದು ಸುಮಾಲಿಯೊಡನವನೆಡೆಗಂ || ೬೮ | ದುರುಳರ ಬೋಧೆಗಳಿಂ ದಶ | ಶಿರನುರುತರಗರ್ವದೊಡನೆ ಧನನಾಯಕನಂ || ಪೊರಡಿಸಿ ಲಂಕಾಪುರವರ | ಕರಸಾದಂ ಪಿರಿಯನೆಂಬ ವಾವೆಯನುಳಿದುಂ | ೬೯ | ಚಿಂತಿಸಿ ಧನಪತಿ ದುರ್ಗಾ ! ಕಾಂತನ ಸನ್ನಿಧಿಗೆ ಬಂದೊಡಾತಂ ಕೃಪೆಯಿಂ || ಸಂತ ದಿಕೃತಿತ್ವಮ | ನುಂ ತವೆಯಳಕಾಧಿಪತ್ಯಮಂ ಕರುಣಿಸಿದಂ || ೭೦ || ಭರದಿಂ ವಿದ್ಯುಜ್ಜಿಹ್ವಾ | ಸುರಗಿತ್ತಂ ಶೂರ್ಪನಖೆಯನಾ ದಶಕಂಠಂ || ಬರಿಸುತೆ ಮಯಸುತೆ ಮಂದೋ | ದರಿಯಂ ಮಿಗೆ ಮದುವೆಯಾದನತಿಸಂಭ್ರಮದಿಂ ೭೧ || ವೈರೋಚನನೆಂಬುರಂ || ಭೋರನೆ ದೌಹಿತ್ರಿಯಾದ ವೃತಜ್ವಾಲಾ || ನಾರಿಯನುಂ ಘಟಕರ್ಣಗೆ | ಧಾರೆಯನೆರೆದಿತ್ಯನಂದು ದನುಜರ್ಿಗಳಲ್ | ೨ || ಹರಿಭಕ್ತವಿಭೀಷಣಗಂ ! ಭರದಿಂ ಶೌಲೂಷನೆಂಬ ಗಂಧರ್ವೆಶಂ || ಸರಮಾಖೆಯ ನಿಜಸುತೆಯಂ | ಪರಿಣಯಮಂ ಮಾಡಿಕೊಟ್ಟನಮರರ್ಮೆಜ್ವಲ್ || A || ದಶಕಂಠನುಗ್ರತಪದಿಂ | ಶಶಿಮೌಳಿಯನೈದೆ ಮೆಚ್ಚಿಸಿಯೆ ಪಡೆದಂ ಶೋ | ಭಿಸುವ ವರಚಂದ್ರಹಾಸಮ | ನಸಮೈಶ್ವರ್ಯಾದಿ ಮುಖ್ಯವರಗಳನಾಗಳ j ೭೪ ||
ಪುಟ:ಹನುಮದ್ದ್ರಾಮಾಯಣಂ.djvu/೬೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.