ಈ ಪುಟವನ್ನು ಪರಿಶೀಲಿಸಲಾಗಿಲ್ಲ.

56 ಹನುಮದ್ರಾಮಾಯಣ. ದರವಿಂದಭವಂ ವರಮಂ | ಕರುಣಿಸಿ ರಾವಣಿಗೆ ತನ್ನ ಪೊಳಲಂ ಸಾರ್ದ್ದ | ೮೨ || ಸುತನಂ ಮನ್ನಿಸಿ ರಾವಣ | ನತುಳಪರಾಕ್ರಮದೆ ರೂಪೃಶೈಲಮನಾಗಳ್ | ಖತಿಯಿಂ ಕಿಳೆತ್ತಲ್ಪಶು | ಪತಿ ಪದದಿಂದೊತ್ತೆ ಸಿಕ್ಕಿದುವು ನಳಿದೋಳ್ | ೮೩ || ರಾವಣದನುಜನ ಸಬುದಂ | ತೀವಿರೆ ದಿಕ್ತಟಮನಂಬುಜೋದ್ಭವನಾ ಮಾ | ದೇವಂಗೆ ಪೆಟ್ಟು ಬಿಡಿಸ || ಲ್ಯಾ ವಿಬುಧಾರಾತಿ ನಾಣ್‌ ಮರಳಂ ಪುರಕಂ || ೮೪ || ಯತಿಗಳಿರ ಕೇಳಿ ರಾಕ್ಷಸ | ಪತಿರಾವಣನಿರ್ದ್ದನಧಿಕಸುಖದಿಂ ಲೋಕ || ತ್ರಿತಯಂ ಕರಗತಮಾಗ | ಬೃತಿಯಿಲ್ಲದನೆನಿಸಿದಂ ಸುರಾಸುರಗಣದೊಳ್ || ೮೫ | ಅಂದು ವನದೊಳಾ ಲಕ್ಷಣ | ನಿಂದಂ ನೇರ್ಪಡೆಯೆ ಕರ್ಣನಾಸಾಚೇದಂ || ಬಂದಾ ರಕ್ಕಸಿ ಸಭೆಯೋ | ಛಿಂದುಂ ಮೊರೆಯಿಡುತಲಗ್ರಜಂಗಿಂತೆಂದಳ್ | ೮೬ || ೩ರದೂಷಣರಾಲಯದಿಂ || ಪೊರಮಟ್ಟುಂ ಬಂದು ದಂಡಕಾವನದೊಳ್ಳಂ || ಚರಿಸುತ್ತಿರೆ ಕಂಡೆಂ ಭೂ | ವರಸುತರಿರ್ವರನುಮವರೊಳೊರ್ವನ ಸತಿಯಂ || ೮೭ || ಪದಿನಾಲ್ಕುಂ ಲೋಕದೊಳಾ | ಸುದತಿಗೆ ಸಮರೆನಿಪ ನಾರಿಯರನಾಂ ಕಾಣೆಂ || ಸದಮಲೆಯನಭೀಕ್ಷಿಸಿ ತವ | ಪದಕರ್ಪಿಪೆನೆಂದು ಪೋದೆನವರೆಡೆಗಾಗಳ್ | ೮೮ || ಸತಿಯಂ ಸ್ವವಶಂಗೊಳಿಪಾ | ಜತನದೊಳಾನಿರ್ದೊಡೈದೆ ರಾಘವನನುಜಂ ! ಖತಿಯಿಂ ಭಂಗಂಗೆಯ್ಯ | ಇತಿದುಃಖದೆ ಪೋಗಿ ಖರಗೆ ದೂರಿದೆನಾಗಳ್ || ೮೯ | ||