ಈ ಪುಟವನ್ನು ಪರಿಶೀಲಿಸಲಾಗಿಲ್ಲ.

66 ಹನುಮದ್ರಾಮಾಯಣ. ಸ್ಮರಿಸಿದ ನರಂಗೆ ಪಾಪದ | ನೆರವಿಯ ಭಯವಿಲ್ಲವೆಂದು ಕಾಶೀತಲದೊಳ್ || ೨೨ | ಆ ನಾಮಂ ಭಕ್ತಿ ಪರಂ | ಜಾನಿಪ ಸತ್ಪುರುಷನಿರ್ಪ ಧರೆ ವೈಕುಂಠಂ || ಆ ನರನಂ ತವೆ ನೋಡಿದ | ಮಾನವಗಂ ಮೋಕ್ಷಮಕ್ಕುಮಣಗನೆ ಕೇಳಾ | ೨೩ | ಎರಡಕ್ಕರಮಾ ನಾಮಂ || ಸ್ಮರಿಸುವೊಡಂ ಕಷ್ಟಮಿಲ್ಲಮತಿ ಫಲದಮದಂ | ಮರೆಯದೆ ನೆನೆಯಘತತಿ || ಪರಿಗುಂ ಸಂದೇಹವಿಲ್ಲ ಮೆಲೆ ಲಕ್ಷ್ಮಣನೇ || ೨೪ | ನೇಮಮದಿಲ್ಲಮದರ್ಕ್ಕಂ || ಕ್ಷೇಮಂಕರಮಪ್ಪ ರಾಮನಾಮಮನನಿಶಂ || ಪ್ರೇಮದೊಳಂ ನೆನೆ ನಿನಗು | ದ್ವಾಮಮಹಾಪದವಿಯಕ್ಕುಮೆಂದಂ ರಾಮಂ | ೨೫ || ಅತಿಭಕ್ತಿಯಿಂದೆ ಸೀತಾ || ಪತಿಯಂತ್ರಿಗೆ ಮಣಿದು ದೇವ ಲಕ್ಷ್ಮಣನವನಂ || ನುತಿಸುತೆ ತನ್ನಾಮಮನತ | ಹಿತಮಂದುರೆ ಜಪಿಸುತಿರ್ದನೆಲೆ ಮುನಿಗಳಿರಾ | ೨೬ || ಇಂತಿರೆ ಪರಿದುದು ಮೇಘದ | ತಿಂತಿಣಿ ವಿಮಲತೆಯನಾಂತುದಾಕಾಶಂ ದಿ | ಕ್ಷಾಂತಂ ಕಳೆಗೊಂಡುದು ಖಗ | ಸಂತತಿ ಚರಿಸಿತ್ತು ನಾಡೆ ಶರದಾಗಮದೊಳ್ | ೨೭ | ದಿನಪಶಶಾಂಕರ್ಗ೦ ಪ್ರಭೆ | ಯನುಗೊಂಡುದು ಕಮಲವೃಂದದೊಳ್ಳಮರಕುಲಂ || ಬಿನದದೆ ಬಂಡುಣುತಿರ್ದುದು | ವನನಿಧಿ ಪರಿಪುಷ್ಟಮಾದುದಾ ಕಾಲದೊಳಂ | ಅಲೆ || ತಿಳಿದುವು ಕೆರೆತೊರೆಗಳ್ ಶ್ರೀ | ಕಲಮಂಗಳ ಗರ್ಭವೂರ್ಣಮಾದುದು ಬಳಿಯಂ || ನೆಲನರಿಲಾರಿತು ಮಲ್ಲಿಗೆ | ಕಲಿಕಾನ್ನಿತವಾಯ್ತು ತಾರೆವಳಗಂ ಮೊಳಗಲ್ | ರ್೨ |