67 ಚತುರ್ಧಾಶ್ವಾಸ. ಆ ಸಮಯದೊಳನಿಲಸುತಂ | ಭಾಸಾಂನಿಧಿಪುತ್ರನೊಡನೆ ಪೇಳ್ತಂ ಗುಣವಾ || ರಾಶಿ ಶ್ರೀರಘುಜಂ ತಾ || ನೇಸು ವಿಲಾಸಿಪನೊ ವಾನರೇಶ್ವರ ನಿನ್ನಿಂ || ೩೦ | ಸತಿಸೌಭಾಗ್ಯಂಗಳ್ಳರ | ಗತಮಾದುವು ರಾಮನತ್ತಣಿಂ ನೀನುಂ ಭೂ || ಪತಿಗೆ ಸಹಾಯಂಗೆಯ್ಯುಂ | ಕೃತಕೃತ್ಯನುಮಾಗದಿರ್ಪುದನುಚಿತಮಲೈ | ೩೧ || ಏಂ ತಿಳಿವನೋ ರಘುರಾಮಂ || ನೀಂ ತಳ್ಳದೆ ಕರೆಸಿ ಕೀಶಕುಲಮಂ ಸೀತಾ || ಕಾಂತನ ನುಡಿಯಂ ಮೌಳಿಯೋ | ಳಾಂತುಂ ತತ್ಕಾರ್ಯಕೊದವೆ ಯೋಗ್ಯ ಮೆನಿಕ್ಕುಂ || ೩೨ || ಇಂತೆಂದನಿಲಕುಮಾರಕ | ನಂ ತೆಗೆದಾಮೋದದಿಂದೆ ಬಿಗಿದಪ್ಪಿ ಮನ || ಶ್ಚಿಂತಾಮಣಿ ನೀನಿರೆ ನಿ | ಶ್ಚಿಂತೆಯೊಳಾನಿರ್ಪೆನೆಂದನರ್ಯಮಚಾತಂ | ೩೩ | ಗಿರಿನಿಭರನತಿಬಲಿಷ್ಠರ | ನುರೆ ಸಪ್ತದ್ವೀಪವಾಸಿವಾನರವರರಂ || ತರುಚರರನೆನ್ನ ಪೊರೆಗಂ ! ಕರೆತನ್ನಿಂ ಪೋಗಿವೆಂದು ಚರರೊನ್ನುಡಿದಂ | ೩೪ | ಈ ಸಕಲಭುವನಮಧ್ಯದೆ | ವಾಸಂಗೊಂಡಿರ್ಪ ಕೀಶಭಟರೆನ್ನೆಡೆಗಂ || ಮಾಸಾರ್ಧಕೆ ಬಾರದಿರ | ಲ್ಯಾಶಂಗೆಯ್ದ ಪೆನೆನುತ್ತೆ ನೇಮಮನಿತ್ತಂ 1 ೩೫ || ಏನಾಜ್ಞೆಯೂ ರವಿಸೂನುವ | ಮಾನಂ ಮಿಗೆ ಪವನವೇಗದಿಂದೆಂದುಂ | ಭೂನಾಕನಾಗಲೋಕದ | ವಾನರರಾಳಂಗೆ ಮಣಿದು ನಿಂದರ್ನಲವಿಂ || ೩೬ || ಇತ್ತಲ್ ಪ್ರಕ್ರವಣಾದ್ರಿಯ || ನೆತ್ತಿಯೋಳಂ ರಾಮಚಂದ್ರನವನೀಸುತೆಯಂ ||
ಪುಟ:ಹನುಮದ್ದ್ರಾಮಾಯಣಂ.djvu/೭೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.